ಸಂಘಕ್ಕೆ ನೂರು: ಉಪಳೇಶ್ವರದಲ್ಲಿ ಸಂಭ್ರಮ ಜೋರು

Oct 7, 2025 - 19:04
 0  237
ಸಂಘಕ್ಕೆ ನೂರು: ಉಪಳೇಶ್ವರದಲ್ಲಿ ಸಂಭ್ರಮ ಜೋರು

ಆಪ್ತ ನ್ಯೂಸ್ ಯಲ್ಲಾಪುರ:
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಿದ್ದಾಂತ ದಲ್ಲಿ ಎಲ್ಲೂ ಕವಲುಗಳಾಗದೇ  ನೂರು  ವರ್ಷಗಳನ್ನು ಪೊರೈಸಿದೆ.ಈ ರೀತಿಯಲ್ಲಿ  ಜಗತ್ತಿನಲ್ಲೇ ನಡೆದು ಬಂದ ಸಂಘ ಮತ್ತೊಂದಿಲ್ಲ ಎಂದು ರಾ.ಸ್ವ.ಸಂಘದ ತಾಲೂಕಾ ಸೇವಾ ಸಹಪ್ರಮುಖ ರಾಘವೇಂದ್ರ ಗುರ್ಕೆಮನೆ ಹೇಳಿದರು.
ಅವರು ರಾ.ಸ್ವ.ಸಂಘ ಶತಾಬ್ದಿಯ ಸಂದರ್ಭದಲ್ಲಿ ಉಪಳೇಶ್ವರ ಮಂಡಲದ ವಿಜಯದಶಮಿ ಉತ್ಸವದಲ್ಲಿ ವಿಶೇಷ ಬೌದ್ದಿಕ ನೀಡಿದರು.
ಎಲ್ಲರೂ ಸಂಘದ ಹೆಸರು ಹೇಳಿದರೆ ಸಾಲದು. ಸಂಘವನ್ನು ತನ್ನೊಳಗೆ ತಂದುಕೊಳ್ಳಬೇಕು ಎಂದ ಅವರು ನಮ್ಮ ದೇಶಕ್ಕೆ ಯಾರು ವಿರೋಧಿಗಳು ಅವರು ನಮಗೆ ವಿರೋಧಿಗಳೇ.ನಮ್ಮನ್ನು ಗೌರವಿಸುವವರು ದೇಶವನ್ನು ಪ್ರೀತಿಸುವವರು ನಾವು ಅವರನ್ನು ಗೌರವಿಸುತ್ತೇವೆ ಪ್ರೀತಿಸುತ್ತೇವೆ.
ಅಚಲವಾದ ರಾಷ್ಡ್ರಭಕ್ತಿ ಯಾರಲ್ಲಿದೆ ಅವರು ರಾಷ್ಡ್ರಪುರುಷರಾಗುತ್ತಾರೆ. ಡಾ ಹೆಡಗೆವಾರ್ ಕನಸನ್ನು ನನಸುಗೊಳಿಸುವ ಸ್ವಯಂಸೇವಕರು ನಾವಾಗಬೇಕು. ಈಗ ಹಿಂದುತ್ವ ಮತ್ತು ನಾನು ಹಿಂದು ಎಂದು ಗಟ್ಟಿಯಾಗಿ ಹೇಳಬಲ್ಲೆವು. ಸಂಘ ಏನು ಹೇಗೆ ಎಂಬುದು ಇಂದು ಪ್ರತಿಯೊಬ್ವರೂ ತಿಳಿದಿಕೊಂಡಿದ್ದಾರೆ. ಆದರೂ ಅಲ್ಲೊಬ್ಬ ಇಲ್ಲೊಬ್ಬ ಸಂಘದ ಬಗ್ಗೆ ಅನವಶ್ಯಕ ಮಾತನಾಡುವವರು ಇದ್ದಾರೆ ಅವರ ಅಜ್ಞಾನದ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಜಗತ್ತಿಗೆ ಭಾರತದ ಶಕ್ತಿಯನ್ನು ಪ್ರೋಖ್ರಾನ ಅಣು ಶಕ್ತಿ ಮೂಲಕ ಒಬ್ಬ ಸ್ವಯಂ ಸೇವಕ ಪ್ರಧಾನಿಯಾಗಿ ಮಾಡಿತೋರಿಸಿದ್ದಾರೆ. ನಮ್ಮ ಮೇಲಿನ ಧಾಳಿಗಳಿಗೆ ಉತ್ತರ ಪ್ರತ್ಯುತ್ತರ ನೀಡುವಷ್ಟು ಗಟ್ಟಿಯಾಗಿದ್ದೇವೆ. ದೇಶದ ಚುಕ್ಕಾಣಿಯನ್ನು ಸ್ವಯಂ ಸೇವಕರಾದವರು ಹಿಡಿದರೆ ದೇಶ ಪರಂ ವೈಭವ ತಲುಪುತ್ತದೆ. ಹಿಂದೂ ಧರ್ಮಕ್ಕಾಗಿ ಮತ್ತು ಭಾರತಕ್ಕಾಗಿ ಬದುಕೋಣ,ನೂರು ವರ್ಷದಲ್ಲಿ ಸಂಘದ ಸಾಧನೆಯೂ ಇದಾಗಿದೆ ಎಂದು ಹೇಳಿದರು.
ಹಿರಿಯರಾದ ಸೀತಾರಾಮ ಗಣೇಶ ಹೆಗಡೆ ಬೇಣಬಾಳೆಗದ್ದೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಪ್ರಮೋದ ಹೆಗಡೆ ವೈಯಕ್ತಿಕ ಗೀತೆ ಹಾಡಿದರು. ಸುಬ್ರಾಯ ದಾನ್ಯಾನಕೊಪ್ಪ ಸ್ವಾಗತಿಸಿದರು. ಗೋಪಾಲಕೃಷ್ಣ ರಾ ಬಾಳೆಗದ್ದೆ ವಂದನಾರ್ಪಣೆಗೈದರು.

ಆಕರ್ಷಕ ಪಥಸಂಚಲನ:
 ನೂರಾರು ಸಂಖ್ಯೆಯಲ್ಲಿದ್ದ ಬಾಲ ಮತ್ತು ತರುಣ ಸ್ವಯಂ ಸೇವಕರು ಉಪಳೇಶ್ವರದ ವಿವಿಧ ಓಣಿಗಳಲ್ಲಿ, ಶಿರಸಿ ಮುಖ್ಯರಸ್ತೆಯಲ್ಲಿ ವಾದ್ಯ ಘೋಷ್ ದೊಂದಿಗೆ ಆಕರ್ಷಕ ಪಥಸಂಚಲನ ನಡೆಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0