ಅಕ್ಷರನಾದದ ಪುಸ್ತಕ ಹಬ್ಬದಲ್ಲಿ ಹಿರಿ-ಕಿರಿಯ ಸಾಹಿತಿಗಳ ಪುಸ್ತಕ ಬಿಡುಗಡೆ

Nov 11, 2025 - 18:05
 0  53
ಅಕ್ಷರನಾದದ ಪುಸ್ತಕ ಹಬ್ಬದಲ್ಲಿ ಹಿರಿ-ಕಿರಿಯ ಸಾಹಿತಿಗಳ ಪುಸ್ತಕ ಬಿಡುಗಡೆ

ಆಪ್ತ ನ್ಯೂಸ್‌ ಬೆಂಗಳೂರು:

ಅಕ್ಷರನಾದ ಪಬ್ಲಿಕೇಶನ್ಸ್ ಬೆಂಗಳೂರು ಇವರು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ವಿಶೇಷ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಿರಿ-ಕಿರಿಯ ಸಾಹಿತಿಗಳ ಪುಸ್ತಕಗಳು ಬಿಡುಗಡೆಗೊಂಡವು.
ಹಿರಿಯ ಸಾಹಿತಿ ಮಂಜುನಾಥ ಹೆಗಡೆ ಬೇಗೋಡಿ ಅವರು ಬರೆದ ಸಾಕಾರ (ಸಂಶೋಧನಾತ್ಮಕ ಕಥೆಗಳು), ಆಪ್ತ ನ್ಯೂಸ್‌ ಬಳಗದ ಯುವ ಸಾಹಿತಿ ವಿನಯ್‌ ನಾಯ್ಕ್‌ ಅವರು ಬರೆದ ಅಷ್ಠಮುಖಿ, ಯುವ ಬರಹಗಾದ ಗಣೇಶ ನಾಯ್ಕ್‌ ಬರೆದ ಭಾವಬುತ್ತಿ ಕವನಸಂಕಲನ, ಮೇಘ ಮುರಳಿ ಕಶ್ಯಪ್ ಅವರು ಬರೆದ ಮೋಹನ ಮುರಳಿ, ಸಂಧ್ಯಾ ವಿನೋದ್ ಭಟ್ ಯಲ್ಲಾಪುರ ಅವರು ಬರೆದ ಪಂಚರಂಗಿ ಪುಸ್ತಕಗಳು ಲೋಕಾರ್ಪಣೆಯಾದವು.


ಜೊತೆಗೆ ರಾಜ್ಯದ ವಿವಿಧ ಭಾಗಗಳ ಹಿರಿಯ ಹಾಗೂ ಕಿರಿಯ ಸಾಹಿತಿಗಳಾದ ಜಗನಾಥನ್ ಆ‌ರ್ ಅವರು ಬರೆದ ಮನದ ಮುತ್ತುಗಳು, ಡಾ. ಪಿ. ವೈ. ಇಮ್ಯಾನುಯೆಲ್ ಅವರು ಬರೆದ ಓ ಮಗಳೇ, Dr. P. Y. Emmanuel ಅವರ When the Rain Remember ಹಾಗೂ  Oh! My Daughter,  ಶೋಭಾ ಗೌಡರ ಕಾವ್ಯ ಶೋಭಿತೆ, ಸಾ. ನಾ. ಶ್ರೀಲಕ್ಷ್ಮಿ ಬೆಂಗಳೂರು ಇವರು ಬರೆದ ಸಿರಿಮಲ್ಲೆ, ನಮ್ರತಾ ರಾವ್ ಬರೆದ ಶಯನದೊಳ್ ವಾಸ್ತವ, ಶ್ಯಾಮಲಾ ಕೆ. ಎಸ್ ಬರೆದ ಕವನ ಜೀವನ ಅನುಭವಗಳ ಅಕ್ಷರ, ಮಂಜುನಾಥ್ ಸಿ. ಕೆ. ದೊಡ್ಡನಿ ಅವರು ಬರೆದ ಬಾಡಿದ ಹೂ, ಡಾ. ಟಿ. ತ್ಯಾಗರಾಜು ವಿರಚಿತ ಬಿಟ್ಟು ಹೋಗುವ ಜಗತ್ತಿಗೆ ಕೊಟ್ಟು ಹೋಗು, ಶೋಭಾ ಟಿ. ಆರ್ ಬರೆದ ಜೀವನ ಎತ್ತರವಲ್ಲ,  ಗಿರೀಶ್ ಎಸ್. ರಾಗಿ ಬರೆದ ರಾಗಿಯೋ ಕ್ರೂರಿಯೋ, ಸಲ್ಮಾಭಾನು ಬರೆದ ಭಾವನೆಗಳ ಪಯಣ ಹಾಗೂ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಸಹೋದರಿ ಪುಷ್ಪ ನಾಗತಿಹಳ್ಳಿ ಅವರು ಬರೆದ ಜಪಮಣಿ ಪುಸ್ತಕಗಳು ಬಿಡುಗಡೆಯಾದವು.
ಈ ಎಲ್ಲ ಪುಸ್ತಕಗಳ ವಿನ್ಯಾಸ ಕಾರ್ಯವನ್ನು ಆಕರ್ಷಕವಾಗಿ ಮಾಡಿದ ಆಪ್ತ ನ್ಯೂಸ್‌ ಅಂಕಣಕಾರ ಮೋಹನ್‌ ನಾಯ್ಕ್‌ ಅವರನ್ನು ಸನ್ಮಾನಿಸಲಾಯಿತು.

What's Your Reaction?

Like Like 3
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0