ಹೇಮಂತ್ ಅಬ್ಬರಕ್ಕೆ ಚಿತ್ರೋದ್ಯಮದಲ್ಲಿ ಹೊಸ ಕಳೆ!

Feb 21, 2026 - 14:20
 0  75
ಹೇಮಂತ್ ಅಬ್ಬರಕ್ಕೆ ಚಿತ್ರೋದ್ಯಮದಲ್ಲಿ ಹೊಸ ಕಳೆ!

ಆಲ್ಫಾ ಅಂದರೇನೇ ಡಾಮಿನೇಶನ್. ಈ ವಾರ ತೆರೆಕಂಡ ಆಲ್ಫಾ‌ ಚಿತ್ರದಲ್ಲಿ ಡಾಮಿನೇಟ್ ಮಾಡುತ್ತಿರುವವರೇ ಚಿತ್ರದ ನಾಯಕ ಹೇಮಂತ್ ಕುಮಾರ್.

ಹೇಮಂತ್ ಕುಮಾರ್ ಕನ್ನಡ ಚಿತ್ರರಂಗಕ್ಕೆ‌ ಅಬ್ಬರದ ಎಂಟ್ರಿ ನೀಡಿದ್ದಾರೆ. ಈ ಎಂಟ್ರಿ ನೋಡಿದರೆ ಮುಂದೊಮ್ಮೆ ಚಿತ್ರರಂಗದಲ್ಲಿ ಡಾಮಿನೇಟ್ ಮಾಡಬಲ್ಲ ಆಲ್ಫಾ ಪ್ರತಿಭೆಯಾಗಿ ಕಾಣಿಸುತ್ತಾರೆ. 
ಯಾಕೆಂದರೆ ಹೇಮಂತ್ ನಿಜವಾದ ಬದುಕಿನಲ್ಲಿಯೂ ಮುನ್ನುಗ್ಗುವ ವ್ಯಕ್ತಿತ್ವದವರು.

ಚಿಕ್ಕ ವಯಸ್ಸಿನಿಂದಲೇ ಸಿನಿಮಾ‌ ನಾಯಕನಾಗಬೇಕು ಎಂದು ಕನಸು ಕಂಡವರು.
ಅದಕ್ಕಾಗಿ ಏನೆಲ್ಲ ಹಾರ್ಡ್ ವರ್ಕ್ ಬೇಕೋ ಅದನ್ನೆಲ್ಲ ಮಾಡಿದ್ದಾರೆ. ಹಾಗಾಗಿಯೇ ಆಲ್ಫಾ‌ ಚಿತ್ರ ನೋಡುವಾಗ ಫೈಟ್ , ಡಾನ್ಸ್  ಎಲ್ಲವೂ ತುಂಬಿದ ಕಂಪ್ಲೀಟ್ ಪ್ಯಾಕೇಜ್ ಆಗಿ ಹೊರ ಬಂದಿದೆ. ಇದಕ್ಕೆಂದೇ ಎಲ್ಲವನ್ನೂ ಕಲಿತು, ಗಮನ ಸೆಳೆಯಲೇಬೇಕು ಅಂತ  ಬಂದಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
ಆ್ಯಕ್ಷನ್ ಹೀರೋ ಆಗಬೇಕಾದರೆ ಫಿಟ್ ಆ್ಯಂಡ್ ಫೈನ್ ಆಗಿರಲೇಬೇಕು ಎಂದು ದೇಹ ದಂಡಿಸುವ ನಿರ್ಧಾರ ಮಾಡಿದ್ದಾರೆ. ಹಾಗಾಗಿ  ಮೊದಲ ನೋಟಕ್ಕೆ ಮೈಕಟ್ಟಿನಿಂದಲೇ ಗಮನ ಸೆಳೆಯುತ್ತಿದ್ದಾರೆ.

ತೆಲುಗಿನ‌ ಖ್ಯಾತ ಸಾಹಸ ನಿರ್ದೇಶಕ ವಿಜಯ್ ಮಾಸ್ಟರ್ ಫೈಟ್ ಗಳು ಅದ್ಭುತವಾಗಿ ಮೂಡಿ‌ಬಂದಿದೆ. ಕೈ ಮೇಲೆ ನಿಜವಾಗಿಯೂ ಬೆಂಕಿ ಹಚ್ಚಿ ನಟಿಸಿದ್ದಾರೆ. ಆದರೆ ಇಷ್ಟೆಲ್ಲ‌ ಕಷ್ಟಪಟ್ಟಿದ್ದರೂ  ಚಿತ್ರಕ್ಕೆ ಸಿಕ್ಕ ಅದ್ಭುತ ಪ್ರತಿಕ್ರಿಯೆಗೆ ತಾನೊಬ್ಬನೇ ಕಾರಣವಲ್ಲ ಎಂದು ವಿನಯ ಪ್ರದರ್ಶಿಸುತ್ತಾರೆ ಹೇಮಂತ್.

ಹೇಮಂತ್ ಮಾತು ಒಂದು‌ ರೀತಿ ನಿಜ ಕೂಡ. ಒಟ್ಟು ಚಿತ್ರವೇ ಚೆನ್ನಾಗಿದೆ. ವೇಗವಾಗಿ ಸಾಗುವ ಕಥೆ ಇದೆ. ಹೀಗಾಗಿ ವೇಗವಾಗಿ‌ಯೇ ಜನರ ಮಧ್ಯೆ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್ ಖಳನಾಗಿ ನಟಿಸಿ ಅಚ್ಚರಿ ಮೂಡಿಸಿದ್ದಾರೆ. ಮಾತ್ರವಲ್ಲ, ಕೆ.ಜಿ.ಎಫ್ , ಕಾಂತಾರದಂಥ ಪ್ಯಾನ್ ಇಂಡಿಯಾ‌ ಸಿನಿಮಾಗಳಲ್ಲಿ ನಟಿಸಿರುವ ಕಲಾವಿದರ ದಂಡೇ ಇಲ್ಲಿದೆ.‌ ಅಚ್ಯುತ್ ಕುಮಾರ್, ಮಾನಸಿ ಸುಧೀರ್, ಅವಿನಾಶ್, ರಾಘು ಶಿವಮೊಗ್ಗ, ರಮೇಶ್ ಇಂದಿರಾ  ಮೊದಲಾದ ಕಲಾವಿದರ ಭರ್ಜರಿ ತಾರಾಗಣದ ಜತೆಗೆ 
 ಸಬ್ಜೆಕ್ಟ್ ಕೂಡ ಚೆನ್ನಾಗಿಯೇ ಇದೆ. ಹೀಗಾಗಿಯೇ ಟೀಸರ್, ಹಾಡು ರಿಲೀಸ್ ಆದಾಗಲೇ ತೆಲುಗು ವಿತರಕರು ಅವರಾಗಿಯೇ ಫೋನ್ ಮಾಡಿ ತೆಲುಗು ಡಬ್ಬಿಂಗ್ ರೈಟ್ಸ್ ಕೇಳಿ ಕರೆ ಮಾಡಿದ್ದರು. ಒಟ್ಟಿನಲ್ಲಿ ಕನ್ನಡ ಇಂಡಸ್ಟ್ರಿಗೆ ಒಬ್ಬ ಹೊಸ ಹೀರೋ ಎಂಟ್ರಿಯಾಗಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0