ಬೆಂಗಳೂರಿನಲ್ಲಿ ಆರಂಭವಾಯ್ತು ಯೂರೋಪಿಯನ್ ಚಲನಚಿತ್ರೋತ್ಸವ
ಸಂದೀಪ್ ಕುಮಾರ್ ನಿರ್ದೇಶನದ ಹ್ಯಾಪಿ ಚಲನಚಿತ್ರದೊಂದಿಗೆ ಪ್ರಾರಂಭವಾದ ಯೂರೋಪಿಯನ್ ಯೂನಿಯನ್ ಚಲನಚಿತ್ರೋತ್ಸವ (ಇಯುಎಫ್ಎಫ್) ಕ್ಕೆ ಬೆಂಗಳೂರಿನಲ್ಲಿ ಅಭೂತಪೂರ್ವ ಪ್ರತಿಕ್ರಿಯೆ. ಇಯುಎಫ್ಎಫ್ 2025ರಲ್ಲಿ 26 ಭಾಷೆಗಳ 25 ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು ಬೆಂಗಳೂರಿನಲ್ಲಿ ನವೆಂಬರ್ 7-15ರವರೆಗೆ ಗಾಯ್ಟೆಇನ್ಸ್ಟಿಟ್ಯೂಟ್/ಮ್ಯಾಕ್ಸ್ ಮುಲ್ಲರ್ ಭವನ್ ಬೆಂಗಳೂರು, ಅಲಯನ್ಸ್ ಫ್ರಾಂಕಾಯಿಸ್ ಡಿ ಬೆಂಗಳೂರು ಮತ್ತು ಸುಚಿತ್ರಾ ಫಿಲ್ಮ್ ಸೊಸೈಟಿಗಳಲ್ಲಿ ಪ್ರದರ್ಶನಗೊಳ್ಳಲಿವೆ
ಆಪ್ತ ನ್ಯೂಸ್ ಬೆಂಗಳೂರು:
ಯೂರೋಪಿಯನ್ ಯೂನಿಯನ್ ಫಿಲ್ಮ್ ಫೆಸ್ಟಿವಲ್ (ಇ.ಯು.ಎಫ್.ಎಫ್)ನ 30ನೇ ಆವೃತ್ತಿಯು ಅಲಯನ್ಸ್ ಫ್ರಾಂಕಾಯಿಸ್ ಡಿ ಬೆಂಗಳೂರಿನಲ್ಲಿ ಆಸ್ಟ್ರಿಯಾದ ಸಂದೀಪ್ ಕುಮಾರ್ ನಿರ್ದೇಶನದ ಚಲನಚಿತ್ರ ಹ್ಯಾಪಿ ಪ್ರದರ್ಶನದೊಂದಿಗೆ ಪ್ರಾರಂಭವಾಯಿತು. ಈ ಪ್ರದರ್ಶನವು ಬೆಂಗಳೂರಿನ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆಯಿತು.
ಈ ಉತ್ಸವದ ಬೆಂಗಳೂರು ಚಾಪ್ಟರ್ 26 ಭಾಷೆಗಳಲ್ಲಿ 25 ಸಮಕಾಲೀನ ಯೂರೋಪಿನ ಚಲನಚಿತ್ರಗಳನ್ನು ಪ್ರದರ್ಶಿಸಲಿದ್ದು ಗುರುತು, ಕುಟುಂಬಧ ಬಾಂಧವ್ಯಗಳು, ಧೈರ್ಯ, ಹಂಚಿಕೊಂಡ ಮಾನವತೆ ಮತ್ತು ಭರವಸೆಯನ್ನು ಕಂಡುಕೊಳ್ಳುವ ವಿಷಯಗಳನ್ನು ಹೊಂದಿವೆ. ಬೆಂಗಳೂರಿನಲ್ಲಿ ಇಯುಎಫ್ಎಫ್ 2025 ನವೆಂಬರ್ 7-15ರವರೆಗೆ ಗಾಯ್ಟೆ ಇನ್ಸ್ಟಿಟ್ಯೂಟ್/ ಮ್ಯಾಕ್ಸ್ ಮುಲ್ಲರ್ ಭವನ್, ಬೆಂಗಳೂರು, ಅಲಯನ್ಸ್ ಫ್ರಾಂಕಾಯಸ್ ಡಿ ಬೆಂಗಳೂರು ಮತ್ತು ಸುಚಿತ್ರಾ ಫಿಲ್ಮ್ ಸೊಸೈಟಿಗಳಲ್ಲಿ ನಡೆಯಲಿದ್ದು ನಂತರ ಸಮಾರೋಪದ ಅಧ್ಯಾಯಕ್ಕೆ ಹೈದರಾಬಾದ್ ಗೆ ಸಂಚರಿಸಲಿದೆ.
“30ನೇ ಯೂರೋಪಿಯನ್ ಯೂನಿಯನ್ ಫಿಲ್ಮ್ ಫೆಸ್ಟಿವಲ್ ಅನ್ನು ಸದಾ ಸಂಸ್ಕೃತಿ, ಸೃಜನಶೀಲತೆ ಮತ್ತು ಜಾಗತಿಕ ಕಥೆ ಹೇಳುವಿಕೆಯನ್ನು ಸಂಭ್ರಮಿಸುವ ನಗರ ಬೆಂಗಳೂರಿಗೆ ತರಲು ಬಹಳ ಸಂತೋಷ ಹೊಂದಿದ್ದೇವೆ” ಎಂದು ಭಾರತಕ್ಕೆ ಯೂರೋಪಿಯನ್ ಯೂನಿಯನ್ ಪ್ರತಿನಿಧಿಗಳ ಉಪ ಮುಖ್ಯಸ್ಥೆ ಇವಾ ಸುವಾರಾ ಹೇಳಿದರು. “ಬೆಂಗಳೂರು ಅಧ್ಯಾಯವನ್ನು ಹ್ಯಾಪಿ ಚಲನಚಿತ್ರದೊಂದಿಗೆ ಪ್ರಾರಂಭಿಸುವುದು ಇಯುಎಫ್ಎಫ್ 2025ರ ಸ್ಫೂರ್ತಿಯನ್ನು ಸುಂದರವಾಗಿ ಸೆರೆ ಹಿಡಿಯುತ್ತದೆ. ಈ ಉತ್ಸವವು ಗಡಿಗಳನ್ನು ಮೀರಿ ನಮ್ಮನ್ನು ಒಗ್ಗೂಡಿಸುವ ಸದೃಢತೆ, ವೈವಿಧ್ಯತೆ ಮತ್ತು ಹಂಚಿಕೊಂಡ ಮಾನವ ಅನುಭವವನ್ನು ಸಂಭ್ರಮಿಸುವ ಉತ್ಸವವಾಗಿದೆ. ಇಲ್ಲಿನ ಪ್ರೇಕ್ಷಕರು ಹೊಸ ದೃಷ್ಟಿಕೋನಗಳು, ಧ್ವನಿಗಳು ಮತ್ತು ಭಾವನೆಗಳ ಮೂಲಕ ಮುಂದಿನ ಕೆಲ ದಿನಗಳು ಯೂರೋಪಿನ ಸಿನಿಮಾದ ಈ ಉಜ್ವಲ ಪ್ರದರ್ಶನದ ಮೂಲಕ ಪಡೆಯಲಿದ್ದಾರೆ ಎಂಬ ಭರವಸೆ ನಮ್ಮದು” ಎಂದರು.
ಈ ಉತ್ಸವದ ಕ್ಯುರೇಟರ್ ಆರ್ಟರ್ ಝಬ್ರೋಸ್ಕಿ, “ಪ್ರತಿ ವರ್ಷ ಇಯುಎಫ್ಎಫ್ ಕಥೆ ಹೇಳುವಿಕೆ ಮತ್ತು ಸಾಂಸ್ಕೃತಿಕ ಸಹಾನುಭೂತಿಯ ಆಳವಾದ ಸಂಭ್ರಮಾಚರಣೆಯೊಂದಿಗೆ ಬೆಳೆಯುತ್ತಿದೆ. ಬೆಂಗಳೂರಿನ ಪ್ರೇಕ್ಷಕರಿಗೆ ಚಿಂತನೆ ಮತ್ತು ಭಾವನೆಯನ್ನು ಉದ್ದೀಪಿಸುವ ಚಲನಚಿತ್ರಕ್ಕೆ ಅಪಾರ ಆಸಕ್ತಿ ಇದೆ ಮತ್ತು ಈ ವರ್ಷದ ಸರಣಿಯು ಯೂರೋಪಿನಾದ್ಯಂತ ಇರುವ ಧೈರ್ಯ, ಹಾಸ್ಯ ಮತ್ತು ಮಾನವತೆಯನ್ನು ಸೆರೆ ಹಿಡಿದಿದೆ. ಹ್ಯಾಪಿ ಚಲನಚಿತ್ರದೊಂದಿಗೆ ಪ್ರಾರಂಭಿಸುವುದು ಸಾಂಕೇತಿಕವಾಗಿದೆ; ಇದು ಗಡಿಗಳನ್ನು ದಾಟುವ ಮತ್ತು ಚಲನಚಿತ್ರದ ಮೂಲಕ ಸಾಮಾನ್ಯ ಅಂಶವನ್ನು ಕಂಡುಕೊಳ್ಳುವ ಸ್ಫೂರ್ತಿಯನ್ನು ಬಿಂಬಿಸುತ್ತದೆ. ಹೈದರಾಬಾದ್ ಗೆ ಪ್ರಯಾಣಿಸುವ ಮುನ್ನ ಹೇಗೆ ಬೆಂಗಳೂರು ಈ ಕಥೆಗಳೊಂದಿಗೆ ಮಿಳಿತಗೊಳ್ಳುತ್ತದೆ ಎಂದು ನೋಡಲು ನಾವು ಉತ್ಸುಕರಾಗಿದ್ದೇವೆ” ಎಂದರು.
ಬೆಂಗಳೂರು ಪ್ರೇಕ್ಷಕರಿಗೆ ತನ್ನ ಚಲನಚಿತ್ರವನ್ನು ಪರಿಚಯಿಸಿ ಹ್ಯಾಪಿಯ ನಿರ್ದೇಶಕ ಸಂದೀಪ್ ಕುಮಾರ್, “ಯೂರೋಪಿಯನ್ ಯೂನಿಯನ್ ಫಿಲ್ಮ್ ಫೆಸ್ಟಿವಲ್ 30ನೇ ಆವೃತ್ತಿಯ ಬೆಂಗಳೂರು ಅಧ್ಯಾಯವು ಹ್ಯಾಪಿ ಚಿತ್ರದೊಂದಿಗೆ ಪ್ರಾರಂಭವಾಗುವುದು ನನಗೆ ಬಹಳ ಸಂತೋಷ ತಂದಿದೆ. ಈ ನಗರವು ಸದಾ ಸವಾಲೆಸೆಯುವ, ಸಹಾನುಭೂತಿ ತೋರುವ ಮತ್ತು ಸಂಪರ್ಕಿಸುವ ಸಿನಿಮಾಗಳನ್ನು ಅಪ್ಪಿಕೊಂಡಿದೆ. ಹ್ಯಾಪಿ ಕಥೆಯು ನನ್ನ ವೈಯಕ್ತಿಕ ಅನುಭವದಿಂದ ಮೂಡಿದೆ. ಇದು ಬಿಲಾಂಗಿಂಗ್, ಕುಟುಂಬ, ಪೋಷಕ-ಮಗು ಬಾಂಧವ್ಯ ಮತ್ತು ತಮ್ಮ ಪ್ರೀತಿಪಾತ್ರರಿಗೆ ಉತ್ತಮ ಜೀವನ ನೀಡುವ ಸರಳ, ಸಾರ್ವತ್ರಿಕ ಬಯಕೆಯನ್ನು ಆಧರಿಸಿದೆ. ಇಯುಎಫ್ಎಫ್ ಖಂಡಗಳ ನಡುವೆ ಅಂತರ ತುಂಬುತ್ತಿರುವುದಕ್ಕೆ ಆಭಾರಿಯಾಗಿದ್ದೇನೆ- ಈ ಚಲನಚಿತ್ರ ವಿಯೆನ್ನಾದಲ್ಲಿ ನಿರ್ಮಾಣವಾಗಿದ್ದರೂ ಅದರ ಹೃದಯಬಡಿತ ಬೆಂಗಳೂರಿನಲ್ಲಿದೆ. ನೀವು ನಮ್ಮ ಚಲನಚಿತ್ರಕ್ಕೆ ನೀಡಿದ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ” ಎಂದರು.
ಈ ಉತ್ಸವದ ಭಾಗವಾಗಿ ಬೆಂಗಳೂರಿನಲ್ಲಿ ನಿರ್ದೇಶಕ ಸಂದೀಪ್ ಕುಮಾರ್ ಅವರು “ಹೌ ಡೂ ಯೂ ಕ್ರಾಫ್ಟ್ ಎ ಫಿಲ್ಮ್?” ಎಂಬ ಕಾರ್ಯಾಗಾರ ನಡೆಸಿಕೊಡಲಿದ್ದು ಇದು ಪರಿಕಲ್ಪನೆಯಿಂದ ಪೂರ್ಣಗೊಳ್ಳುವವರೆಗೆ ಸೃಜನಶೀಲ ಪ್ರಯಾಣವನ್ನು ಒಳಗೊಂಡ ತಲ್ಲೀನಗೊಳಿಸುವ ಕಾರ್ಯಕ್ರಮವಾಗಿದೆ. ಆಸ್ಟ್ರಿಯಾ ಮತ್ತು ಭಾರತಗಳ ನಡುವೆ ವಿವಿಧ ಸಾಂಸ್ಕೃತಿಕ ಚಲನಚಿತ್ರ ನಿರ್ಮಾಣದ ಉದಾಹರಣೆಗಳೊಂದಿಗೆ ಕುಮಾರ್ ಭಾಗವಹಿಸುವವರಿಗೆ ಬರೆಯುವ, ನಿರ್ಮಿಸುವ, ನಿರ್ದೇಶಿಸು ಮತ್ತು ಚಲನಚಿತ್ರ ದೃಶ್ಯಗಳನ್ನು ವಿಶ್ಲೇಷಿಸುವ ಅವಕಾಶ ಕಲ್ಪಿಸುವ ಮೂಲಕ ಹೇಗೆ ಕಥೆಗಳನ್ನು ಸೃಷ್ಟಿಸಲಾಗುತ್ತದೆ ಮತ್ತು ಅವು ಹೇಗೆ ವೈವಿಧ್ಯಮಯ ಪ್ರೇಕ್ಷಕರನ್ನು ಸೆಳೆಯುತ್ತವೆ ಎನ್ನುವುದನ್ನು ಪರೀಕ್ಷಿಸುತ್ತಾರೆ.
ಭಾರತದಲ್ಲಿ ಯೂರೋಪಿನ ಸಿನಿಮಾಗಳ ಅತ್ಯಂತ ದೊಡ್ಡ ಪ್ರದರ್ಶನವಾಗಿರುವ ಇಯುಎಫ್ಎಫ್ 2025ರ ಬೆಂಗಳೂರು ಚಾಪ್ಟರ್ ಆಸ್ಟ್ರಿಯಾ, ಬೆಲ್ಜಿಯಂ, ಬಲ್ಗೇರಿಯಾ, ಸಿಪ್ರಸ್, ಡೆನ್ಮಾರ್ಕ್, ಫಿನ್ಲೆಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಹಂಗೇರಿ, ಐರ್ಲೆಂಡ್, ಲಟ್ವಿಯಾ, ಲಿಥುವೇನಿಯಾ, ಲುಕ್ಸೆಂಬರ್ಗ್, ಮಾಲ್ಟಾ, ನೆದರ್ಲೆಂಡ್ಸ್, ಪೋಲೆಂಡ್, ಪೋರ್ಚುಗಲ್, ರೊಮಾನಿಯಾ, ಸ್ಲೊವೇನಿಯಾ, ಸ್ಪೇನ್, ಸ್ವೀಡನ್ ಮತ್ತು ಉಕ್ರೇನ್ ಚಲನಚಿತ್ರಗಳಿವೆ. ಈ ವರ್ಷದ ಚಲನಚಿತ್ರಗಳು ಪ್ರತಿಷ್ಠಿತ ಅಂತಾರಾಷ್ಟ್ರೀಯ ಉತ್ಸವಗಳಲ್ಲಿ ಪುರಸ್ಕಾರ ಪಡೆದ ಅತ್ಯಂತ ಪ್ರಶಂಸೆಗೆ ಒಳಗಾದ ಮತ್ತು ಚರ್ಚೆಗೆ ಒಳಪಟ್ಟ ಚಲನಚಿತ್ರಗಳನ್ನು ತಂದಿದೆ. ಈ ಕಾರ್ಯಕ್ರಮದಲ್ಲಿ ಜೂಲೀ ಕೀಪ್ ಕ್ವೈಟ್, ಡೈಯಿಂಗ್, ಬ್ಯಾಡ್ ಲಿವಿಂಗ್, ಹೋಲಿ ಕೌ, ಫ್ಯಾಮಿಲಿ ಥೆರಪಿ ಮತ್ತು ಹ್ಯಾಪಿ ಮುಂತಾದ ಚಲನಚಿತ್ರಗಳಿವೆ.
ಅಲಯನ್ಸ್ ಫ್ರಾಂಕಾಯಿಸ್ ಡಿ ಬೆಂಗಳೂರು ನಿರ್ದೇಶಕ ಜೀನ್-ಮಾರ್ಕ್ ಡೆಪಿಯೆರ್ರೆ, “ಸಿನಿಮಾ ಎನ್ನುವುದು ಬರೀ ಜನರ ಕನಸು ರೂಪಿಸುವುದಲ್ಲ. ಇದು ವಿಷಯಗಳನ್ನು ಬದಲಾಯಿಸುವುದು ಮತ್ತು ಜನರು ಆಲೋಚಿಸುವಂತೆ ಮಾಡುವುದು” ಎಂದು ಚಿತ್ರ ನಿರ್ದೇಶಕ ನೊಡಿನ್ ಲಬಕಿ ಒಮ್ಮೆ ಹೇಳಿದ್ದರು. ಇಯುಎಫ್ಎಫ್ ನಿರ್ದಿಷ್ಟವಾಗಿ ಅದನ್ನೇ ಸಾಧಿಸಲು ಬಯಸುತ್ತದೆ ಮತ್ತು ಅಲಯನ್ಸ್ ಫ್ರಾಂಕಾಯಿಸ್ ಡಿ ಬೆಂಗಳೂರು ಈ ಪ್ರಯತ್ನದ ಭಾಗವಾಗಲು ಬಹಳ ಸಂತೋಷ ಹೊಂದಿದೆ” ಎಂದರು.
ಗಾಯ್ಟೆ ಇನ್ಸ್ಟಿಟ್ಯೂಟ್/ಮ್ಯಾಕ್ಸ್ ಮುಲ್ಲರ್ ಭವನ್ ಬೆಂಗಳೂರು ನಿರ್ದೇಶಕ ಡಾ. ಮೈಕೇಲ್ ಹೀನ್ಸ್ಟ್, “ಯೂರೋಪಿನ ಸಿನಿಮಾ ಸದಾ ಬೆಂಗಳೂರಿನ ಪ್ರೇಕ್ಷಕರ ಅಪಾರ ಪ್ರೀತಿ ಗಳಿಸಿದೆ. ಕುತೂಹಲ ಮತ್ತು ಪ್ರಯೋಗಶೀಲತೆಯಿಂದ ಪ್ರೇರಿತವಾದ ಈ ನಗರವು ಹೊಸ ಆಲೋಚನೆಗಳು ಮತ್ತು ದೃಷ್ಟಿಕೋನಗಳನ್ನು ಸ್ವಾಗತಿಸುವ ಮಹತ್ತರ ಇತಿಹಾಸ ಹೊಂದಿದೆ. ಗಾಯ್ಟೆ ಇನ್ಸ್ಟಿಟ್ಯೂಟ್/ ಮ್ಯಾಕ್ಸ್ ಮುಲ್ಲರ್ ಭವನ್ ಬೆಂಗಳೂರಿಗೆ ಯೂರೋಪಿಯನ್ ಚಲನಚಿತ್ರೋತ್ಸವವನ್ನು ಮತ್ತೆ ತರಲು ನಾವು ಬಹಳ ಸಂತೋಷ ಹೊಂದಿದ್ದೇವೆ” ಎಂದರು.
ಸುಚಿತ್ರಾ ಫಿಲ್ಮ್ ಸೊಸೈಟಿಯ ಅಧ್ಯಕ್ಷ ಎಚ್.ಎನ್. ನರಹರಿ ರಾವ್, “ಸುಚಿತ್ರಾ ಫಿಲ್ಮ್ ಸೊಸೈಟಿಯು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಬೆಂಗಳೂರಿನ ಪ್ರೇಕ್ಷಕರಿಗೆ ಅತ್ಯುತ್ತಮ ಯೂರೋಪಿನ ಸಿನಿಮಾ ತರುವ ಯೂರೋಪಿಯನ್ ಯೂನಿಯನ್ ಫಿಲ್ಮ್ ಫೆಸ್ಟಿವಲ್ ಭಾಗವಾಗಲು ಬಹಳ ಹೆಮ್ಮೆ ಪಡುತ್ತದೆ. 30ನೇ ಆವೃತ್ತಿಯು ವಿಶೇಷ ಮಹತ್ವವನ್ನು ಹೊಂದಿದೆ, ಏಕೆಂದರೆ ನಾವು ಸಿನಿಮಾ ಮೂಲಕ ಮೂರು ದಶಕಗಳ ಸಾಂಸ್ಕೃತಿಕ ಸೇತುವೆ ನಿರ್ಮಿಸಿದ್ದೇವೆ, ಯೂರೋಪಿನ ಮತ್ತು ಭಾರತದ ಸಂವೇದನೆಗಳ ನಡುವೆ ಆಳವಾದ ಅರ್ಥೈಸಿಕೊಳ್ಳುವಿಕೆ ಉತ್ತೇಜಿಸಿದ್ದೇವೆ. ಇಯುಎಫ್ಎಫ್ ಜೊತೆಯಲ್ಲಿ ನಮ್ಮ ಸಹಯೋಗವು ಬೆಂಗಳೂರಿನ ಸಾಂಸ್ಕೃತಿಕ ಮೇಲ್ಮೈಯನ್ನು ಉನ್ನತಗೊಳಿಸಲಿದ್ದು ನಮ್ಮ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ವಾಣಿಜ್ಯ ವಿತರಣೆಯಲ್ಲಿ ಲಭ್ಯವಿಲ್ಲದ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳ ಲಭ್ಯತೆ ದೊರೆಯುವಂತೆ ಮಾಡಲಿದೆ. ಈ ಚಲನಚಿತ್ರಗಳನ್ನು ಪ್ರದರ್ಶಿಸುವುದರ ಜೊತೆಯಲ್ಲಿ ನಾವು ನಿರ್ದೇಶಕ ಸಂದೀಪ್ ಕುಮಾರ್ ಅವರೊಂದಿಗೆ ಕಾರ್ಯಾಗಾರ ನಡೆಸಲಿದ್ದೇವೆ ಮತ್ತು ಈ ಮೈಲಿಗಲ್ಲಿನ ಆವೃತ್ತಿಯನ್ನು ವಿಸ್ತಾರ ಸಂಸ್ಕೃತಿಗಳು ಮತ್ತು ಕಥೆಗಳನ್ನು ಒಗ್ಗೂಡಿಸುವ ಸಿನಿಮಾದ ಶಕ್ತಿಯನ್ನು ಸಂಭ್ರಮಿಸಲಿದ್ದೇವೆ” ಎಂದರು.
ಡೆಲಿಗೇಷನ್ ಆಫ್ ದಿ ಯೂರೂಪಿಯನ್ ಯೂನಿಯನ್ ಟು ಇಂಡಿಯಾ, ಇಯು ಸದಸ್ಯ ರಾಷ್ಟ್ರಗಳು ಮತ್ತು ಪ್ರಾದೇಶಿಕ ಪಾಲುದಾರರ ಸಹಯೋಗದಲ್ಲಿ ಆಯೋಜಿಸಿರುವ 30ನೇ ಯೂರೋಪಿಯನ್ ಯೂನಿಯನ್ ಫಿಲ್ಮ್ ಫೆಸ್ಟಿವಲ್ (ಇಯುಎಫ್ಎಫ್) ಯೂರೋಪ್ ಮತ್ತು ಭಾರತದ ನಡುವೆ ಮೂರು ದಶಕಗಳ ಸಿನಿಮೀಯ, ಸಾಂಸ್ಕೃತಿಕ ಮತ್ತು ಕಲಾತ್ಮಕ ವಿನಿಮಯವನ್ನು ಬಿಂಬಿಸುತ್ತಿದ್ದು ಸಾರ್ವತ್ರಿಕ ಭಾಷೆ ಚಲನಚಿತ್ರದ ಮೂಲಕ ಅಂತರಗಳನ್ನು ತುಂಬುತ್ತದೆ. ಈ ತಿಂಗಳಲ್ಲಿ ಹೈದರಾಬಾದ್ ಗೆ ಪ್ರಯಾಣಿಸಲಿರುವ ಇಯುಎಫ್ಎಫ್ 2025 ಯೂರೋಪ್ ಮತ್ತು ಭಾರತದ ನಡುವೆ ಇರುವ ಬಾಂಧವ್ಯಕ್ಕೆ ಸಾಕ್ಷಿಯಾಗಿದ್ದು ಇದು ಗಡಿಗಳನ್ನು ಮೀರುವ ಕಥೆಗಳ ಸಂಭ್ರಮಾಚರಣೆಯಾಗಿದೆ ಮತ್ತು ಸಿನಿಮಾ ಭರವಸೆ ಮತ್ತು ಸಂಪರ್ಕದ ಹಂಚಿಕೊಂಡ ಭಾಷೆ ಎಂದು ನೆನಪಿಸುತ್ತದೆ.
ಎಲ್ಲ ಚಲನಚಿತ್ರಗಳೂ ಇಂಗ್ಲಿಷ್ ಉಪ ಶೀರ್ಷಿಕೆಗಳನ್ನು ಹೊಂದಿರುತ್ತವೆ ಮತ್ತು ಮೊದಲು ಬಂದವರಿಗೆ ಮೊದಲಿಗೆ ಪ್ರವೇಶವಿರುತ್ತದೆ. ಕೆಲ ಶೀರ್ಷಿಕೆಗಳು 18+ ರೇಟಿಂಗ್ ಹೊಂದಿವೆ.
ಆಸ್ಟ್ರಿಯಾ/ಹ್ಯಾಪಿ; ಬೆಲ್ಜಿಯಂ/ಜೂಲಿ ಕೀಪ್ಸ್ ಕ್ವೈಟ್; ಬಲ್ಗೇರಿಯಾ/ದಿ ಟ್ರ್ಯಾಪ್; ಕ್ರೊಯೇಷಿಯಾ/ ಪೆಲಿಕಾನ್; ಸಿಪ್ರಸ್/ಸ್ಮರಗ್ಡ- ಐ ಗಾಟ್ ಥಿಕ್ ಸ್ಕಿನ್ ಅಂಡ್ ಈ ಕಾಂಟ್ ಜಂಪ್; ಡೆನ್ಮಾರ್ಕ್/ ಮ್ಯಾಟರ್ಸ್ ಆಫ್ ದಿ ಹಾರ್ಟ್; ಫಿನ್ಲೆಂಡ್/ ದಿ ಮಿಸೈಲ್; ಫ್ರಾನ್ಸ್/ಹೋಲಿ ಕೌ; ಜರ್ಮನಿ/ಡೈಯಿಂಗ್; ಗ್ರೀಸ್/ಬಿಹೈಂಡ್ ದಿ ಹೇಸ್ಟಾಕ್ಸ್; ಹಂಗೇರಿ/ಥ್ರೀ ಥೌಸಂಡ್ ನಂಬರ್ಡ್ ಪೀಸಸ್; ಐರ್ಲೆಂಡ್/ದಟ್ ದೇ ಮೇ ಫೇಸ್ ದಿ ರೈಸಿಂಗ್ ಸನ್; ಲಟ್ವಿಯಾ/ಸೋವಿಯೆಟ್ ಮಿಲ್ಕ್; ಲಿಥುವೇನಿಯಾ/ಟೇಸ್ಟಿ; ಲುಕ್ಸೆಂಬರ್ಗ್/ಬ್ರೀಥಿಂಗ್ ಅಂಡರ್ ವಾಟರ್; ಮಾಲ್ಟಾ/ಕ್ಯಾಸ್ಟಿಲೊ; ನೆದರ್ಲೆಂಡ್ಸ್/ಮೆಮೊರಿ ಲೇನ್: ಪೊಲ್ಯಾಂಡ್/ಇಟ್ಸ್ ನಾಟ್ ಮೈ ಫಿಲ್ಮ್; ಪೋರ್ಚುಗಲ್/ಬ್ಯಾಡ್ ಲಿವಿಂಗ್; ರೊಮಾನಿಯಾ/ಥ್ರೀ ಕಿಲೋಮೀಟರ್ಸ್ ಟು ದಿ ಎಂಡ್ ಆಫ್ ದಿ ವರ್ಲ್ಡ್; ಸ್ಲೋವೇಕಿಯಾ/ ದಿ ಹಂಗೇರಿಯನ್ ಡ್ರೆಸ್ ಮೇಕರ್; ಸ್ಲೊವೇನಿಯಾ/ಫ್ಯಾಮಿಲಿ ಥೆರಪಿ; ಸ್ಪೇನ್/ಇಐ 47; ಸ್ವೀಡನ್/ದಿ ಸ್ವೀಡಿಷ್ ಟಾರ್ಪೆಡೊ.
ಇಯುಎಫ್ಎಫ್ ಕುರಿತು ಹೆಚ್ಚಿನ ವಿವರಗಳಿಗೆ ಭೇಟಿ ಕೊಡಿ: www.euffindia.com IG: @euffindia| X: @euffindia I FB: European Union Film Festival
—----------------------------------------------------------------------------------------------------------------------------------
ಯೂರೋಪಿಯನ್ ಯೂನಿಯನ್ ಕುರಿತು (ಇಯು): ಇಯು 27 ದೇಶಗಳನ್ನು ಹೊಂದಿದ್ದು ವಿಶ್ವದ ಅತ್ಯಂತ ದೊಡ್ಡ ಅರ್ಥವ್ಯವಸ್ಥೆ ಮತ್ತು ಚೀನಾ ಮತ್ತು ಭಾರತದ ನಂತರ ಮುರನೇ ಅತ್ಯಂತ ದೊಡ್ಡ ಜನಸಂಖ್ಯೆ ಹೊಂದಿದೆ. ಶ್ರೀಮಂತ ವೈವಿಧ್ಯತೆಯ ಈ ದೇಶಗಳು ಇಯು (ಇದರ ಸದಸ್ಯ ದೇಶಗಳು) ಎನಿಸಿಕೊಳ್ಳುತ್ತವೆ, ಎಲ್ಲವೂ ಶಾಂತಿ, ಪ್ರಜಾಪ್ರಭುತ್ವ ಮತ್ತು ಕಾನೂನು ಪಾಲನೆ ಮತ್ತು ಮಾನವ ಹಕ್ಕುಗಳಿಗೆ ಗೌರವದ ಮೂಲಭೂತ ತತ್ವಗಳಿಗೆ ಬದ್ಧವಾಗಿವೆ. ಅವು ಸಾಮಾನ್ಯ ಸಂಸ್ಥೆಗಳನ್ನು ಸ್ಥಾಪಿಸಿದ್ದು ಪ್ರಜಾಸತ್ತೀಯವಾಗಿ ಮತ್ತು ಯೂರೋಪಿನ ಮಟ್ಟದಲ್ಲಿ ಜಂಟಿ ಹಿತಾಸಕ್ತಿಯ ನಿರ್ಧಾರಗಳನ್ನು ಕೈಗೊಳ್ಳುತ್ತವೆ. ಗಡಿಗಳಿಲ್ಲದ ಒಂದು ಮಾರುಕಟ್ಟೆ ಮತ್ತು ಒಂದು ಕರೆನ್ಸಿ (ಯೂರೋ) ಸೃಷ್ಟಿಸಿದ್ದು ಅದನ್ನು 20 ಸದಸ್ಯ ದೇಶಗಳು ಅಳವಡಿಸಿಕೊಂಡಿವೆ. ಇಯು ವ್ಯಾಪಾರ ಮತ್ತು ಉದ್ಯೋಗಕ್ಕೆ ಮಹತ್ತರ ಆದ್ಯತೆ ನೀಡುತ್ತದೆ. ಇದು ಸುಸ್ಥಿರತೆಯ ನೀತಿಗಳಲ್ಲೂ ಮುಂಚೂಣಿಯಲ್ಲಿದೆ.
ಇಯು- ಭಾರತ ಬಾಂಧವ್ಯಗಳು: ಕಳೆದ 60 ವರ್ಷಗಳಿಂದ ಯುರೋಪಿಯನ್ ಯೂನಿಯನ್ ಮತ್ತು ಭಾರತವು ಒಟ್ಟಿಗೆ ಬಡತನ ಕಡಿಮೆ ಮಾಡಲು, ವಿಕೋಪಗಳನ್ನು ತಗ್ಗಿಸಲು, ಮಾನವ ಹಕ್ಕುಗಳನ್ನು ರಕ್ಷಿಸಲು, ವ್ಯಾಪಾರ ವಿಸ್ತರಿಸಲು ಮತ್ತು ಶಕ್ತಿ, ಆರೋಗ್ಯ, ಕೃಷಿ ಮತ್ತಿತರೆ ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನೆಯನ್ನು ಉತ್ತೇಜಿಸಲು ಸಹಯೋಗ ಹೊಂದಿವೆ.
ವಿವರಗಳಿಗೆ: http://eeas.europa.eu/delegations/india
ಯೂರೋಪಿಯನ್ ಯೂನಿಯನ್ ಚಲನಚಿತ್ರೋತ್ಸವ ಕುರಿತು:
www.euffindia.com | IG: @euffindia | FB: European Union Film Festival | X: @euffindia
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



