ಶಿರಸಿಯ ಚಿತ್ರ ನಿರ್ಮಾಣ ಸಂಸ್ಥೆ ಚಿತ್ರಾ ಕ್ರಿಯೇಷನ್ಸ್ ಉದ್ಘಾಟನೆ

Dec 4, 2025 - 20:14
 0  56
ಶಿರಸಿಯ ಚಿತ್ರ ನಿರ್ಮಾಣ ಸಂಸ್ಥೆ ಚಿತ್ರಾ ಕ್ರಿಯೇಷನ್ಸ್ ಉದ್ಘಾಟನೆ
ಆಪ್ತ ನ್ಯೂಸ್‌ ಶಿರಸಿ:

ಶಿರಸಿಯ ನೆಹರುನಗರದ ಚಿತ್ರಾ ಕ್ರಿಯೇಷನ್ಸ್ ಸಿನಿಮಾ ನಿರ್ಮಾಣ ಸಂಸ್ಥೆ ಅಧೀಕೃತವಾಗಿ ಚಾಲನೆಯಾಯಿತು. 
ಇತ್ತೀಚೆಗೆ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನೋಂದಣಿಯಾದ ಚಿತ್ರಾ ಕ್ರಿಯೇಷನ್ಸ್ ಎಂಬ ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆ ನೋಂದಣಿಯಗಿದ್ದು ತನ್ನ ಅಧೀಕೃತ ಕಛೇರಿಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಪೂಜೆ ಮಾಡುವ ಮೂಲಕ ಆರಂಭವಾಯಿತು.

ಕಚೇರಿಯನ್ನು ಉದ್ಘಾಟನೆ ಮಾಡಿದ ಚಿತ್ರಾ ಕ್ರಿಯೇಷನ್ಸ್ ನ ಮಾಲಕಿ ನಿವೃತ್ತ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಕುಮಾರಿ ಚಿತ್ರಾ ಕೆ.ವಿ ಯವರು ಮಾತನಾಡುತ್ತಾ “ಶಿರಸಿ ಭಾಗದಲ್ಲಿ ಸಾಕಷ್ಟು ಜನ ಕಲಾವಿದರಿದ್ದು ನಮ್ಮ ಭಾಗದ ಪರಂಪರೆ ಮತ್ತು ಸಂಸ್ಕೃತಿಯನ್ನು ನಾಡಿನ ಜನತೆಗೆ ಪರಿಚಯಿಸುವ ಸಲುವಾಗಿ ಚಿತ್ರಾ ಕ್ರಿಯೇಷನ್ಸ್ ಸ್ಥಾಪನೆಯಾಗಿದ್ದು ಇದು ಎಲ್ಲಾ ಕಲಾವಿದರಿಗೆ ಬೆಂಬಲವಾಗಿ ನಿಲ್ಲಲಿದೆ. ಸಧ್ಯದಲ್ಲೇ ನಮ್ಮ ಸಂಸ್ಥೆಯ ವತಿಯಿಂದ ಚೊಚ್ಚಲ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾದ ನಿರ್ದೇಶಕರು, ಸಂಗೀತ ನಿರ್ದೇಶಕರು ಹಾಗೂ ವಿವಿಧ ಕಲಾವಿದರು ಈಗಾಗಲೇ ಕಳೆದ ೫-೬ ತಿಂಗಳಿಂದ ತಯಾರಿ ನಡೆಸಿಕೊಂಡಿದ್ದಾರೆ. ಇವರೆಲ್ಲರ ಶ್ರಮದಿಂದ ಉತ್ತಮ ಚಿತ್ರ ಮೂಡಿಬರಲಿದೆ” ಎಂಬ ನಂಬಿಕೆ ನಮಗಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಚೊಚ್ಚಲ ಸಿನಿಮಾದ ನಿರ್ದೇಶಕರಾದ ರಿತ್ವಿನ್ ಎಸ್. ಈ ಮಾತನಾಡುತ್ತಾ “ಸಿನಿಮಾದ ಸ್ಕ್ರಿಪ್ಟ್ ಕಾರ್ಯಗಳು ಈಗಾಗಲೇ ಮುಕ್ತಾಯವಾಗಿದ್ದು ಪ್ರಮುಖ ಕಲಾವಿದರ ಆಯ್ಕೆಯೂ ಸಹ ಆಗಿರುತ್ತದೆ. ಬಾಕಿ ಇರುವ ಸಹ ಕಲಾವಿದರ ಆಯ್ಕೆಯಾದ ಕೂಡಲೇ ಚಿತ್ರಿಕರಣವನ್ನು ಆರಂಭಮಾಡಲಿದ್ದೇವೆ. ನಮ್ಮ ಸಂಸ್ಥೆಯ ಚೊಚ್ಚಲ ಸಿನಿಮಾ ರಾಜ್ಯದ ಜನತೆ ಮೆಚ್ಚುವಂತೆ ಮಾಡಲು ಸಂಸ್ಥೆವತಿಯಿಂದ ಸಾಕಷ್ಟು ನೆರವು ದೊರೆಯುತ್ತಿದೆ. ಹೊಸ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು” ಎಂದು ಕೇಳಿಕೊಂಡರು.

ಸಂಗೀತ ನಿರ್ದೇಶಕರಾದ ಹಿಂಗಾರ ಪ್ರಶಾಂತ ರವರು ಸಹ ಮಾತನಾಡುತ್ತಾ “ಚಿತ್ರಾ ಕ್ರಿಯೇಷನ್ಸ್ ಒಂದು ಮಹತ್ವದ ಹೆಜ್ಜೆಯನ್ನು ಮಲೆನಾಡಾದ ಶಿರಸಿಯಲ್ಲಿ ಇಟ್ಟಿದೆ. ಸಂಸ್ಥೆ ನಮ್ಮ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತೇವೆ. ನಮಗೆ ಎಲ್ಲರ ಸಹಕಾರ ಅಗತ್ಯ” ಎಂದರು. ಈ ಸಂದರ್ಭದಲ್ಲಿ ಛಾಯಾಗ್ರಾಹಕ ಮುರುಳಿ ಅನಘ, ತಾಂತ್ರಿಕ ಸಲಹೆಗಾರರಾದ ಪ್ರಜ್ವಲ್ ರಾಮ್ ಮಹೇಂದ್ರ ಗೌಡ, ಪುರುಷೋತ್ತಮ ಶಿರಸಿ, ಕಿರಣ್ ಶಿರಸಿ, ಲೈನ್ ಪ್ರೊಡ್ಯೂಸರ್ ಶಶಿ ಕುಬೇರ ಮತ್ತು ವಕೀಲರಾದ ಶಿವರಾಯ ದೇಸಾಯಿ ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0