ಕಾಂತಾರ ಚಾಪ್ಟರ್ 1 ಸಿನಿಮಾ ಹೇಗಿದೆ ನೋಡಿ
ಕಾಂತಾರ ಚಾಪ್ಟರ್ 1 ಈ ಚಿತ್ರ ಹೇಗಿದೆ ಅನ್ನುವ ಕುತೂಹಲ ನಿಮ್ಮಲ್ಲಿ ಇರುವುದು ಸಹಜ. ಈ ಚಿತ್ರದ ಕುರಿತು ಬರಹಗಾರ, ಪತ್ರಕರ್ತ ಅಜಿತ್ ಬೊಪ್ಪನಳ್ಳಿ ಮಾತನಾಡಿದ್ದಾರೆ. ಚಿತ್ರವನ್ನು ನೋಡಿ ಬಂದ ಅಜಿತ್ ಬೊಪ್ಪನಳ್ಳಿ ಕಾಂತಾರ ಸಿನಿಮಾ ರಿವ್ಯೂ ಮಾಡಿದ್ದಾರೆ. ಆ ರಿವ್ಯೂ ಇಲ್ಲಿದೆ ನೋಡಿ
ಆಪ್ತ ನ್ಯೂಸ್ ಬೆಂಗಳೂರು:
ಕನ್ನಡ ಹಾಗೂ ಭಾರತೀಯ ಚಿತ್ರ ಜಗತ್ತಿನ ಬಹು ನಿರೀಕ್ಷಿತ ಸಿನಿಮಾ ಕಾಂತಾರ ಚಾಪ್ಟರ್ ೧ ಸಿನಿಮಾ ಬಿಡುಗಡೆಯಾಗಿದೆ. ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಯ ಈ ಚಿತ್ರ ಅದ್ಧೂರಿಯಾಗಿ ಚಿತ್ರೀಕರಣಗೊಂಡಿದೆ. ಇದೀಗ ಚಿತ್ರ ಬಿಡುಗಡೆಯಾಗಿದ್ದು ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ.
ಕಾಂತಾರದ ಮೊದಲ ಭಾಗ ಬಿಡುಗಡೆಯಾಗಿದ್ದಾಗ ಜನರ ಬಾಯಿಯ ಮೂಲಕವೇ ಪ್ರಚಾರ ಪಡೆದುಕೊಂಡಿದ್ದ ಸಿನಿಮಾ ನಂತರದ ದಿನಗಳಲ್ಲಿ ಅತ್ಯುತ್ತಮ ನಟ ಎನ್ನುವ ರಾಷ್ಟ್ರ ಪ್ರಶಸ್ತಿಯನ್ನು ರಿಷಬ್ ಶೆಟ್ಟಿಗೆ ತಂದುಕೊಟ್ಟಿತ್ತು. ಅದರ ಬೆನ್ನಲ್ಲೇ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ಪ್ರೀಕ್ವೆಲ್ ಚಿತ್ರ ಘೋಷಣೆ ಮಾಡಿದ್ದರು. ಆಗ ಸಹಜವಾಗಿಯೇ ಜನರ ನಿರೀಕ್ಷೆಗಳು ಗಗನ ಮುಟ್ಟಿದ್ದವು. ಅದರ ಜೊತೆಗೆ ಕನ್ನಡ ಸಿನಿಮಾ ಜಗತ್ತಿನಲ್ಲಿಯೇ ಅದ್ಧೂರಿ ವೆಚ್ಚದ ತಯಾರಿ ಎನ್ನುವ ಖ್ಯಾತಿಗೂ ಪಾತ್ರವಾಗಿತ್ತು. ಕನ್ನಡವಲ್ಲದೇ ಪರ ಭಾಷೆಗಳಲ್ಲಿಯೂ ಈ ಚಿತ್ರ ಬಿಡುಗಡೆ ಆಗುವ ಮೂಲಕ ದೇಶವಾಸಿಗಳ ಮನಸ್ಸನ್ನು ಕಾಂತಾರ ಮುಟ್ಟುತ್ತಿದೆ.
ಈ ಚಿತ್ರ ಹೇಗಿದೆ ಅನ್ನುವ ಕುತೂಹಲ ನಿಮ್ಮಲ್ಲಿ ಇರುವುದು ಸಹಜ. ಈ ಚಿತ್ರದ ಕುರಿತು ಬರಹಗಾರ, ಪತ್ರಕರ್ತ ಅಜಿತ್ ಬೊಪ್ಪನಳ್ಳಿ ಮಾತನಾಡಿದ್ದಾರೆ. ಚಿತ್ರವನ್ನು ನೋಡಿ ಬಂದ ಅಜಿತ್ ಬೊಪ್ಪನಳ್ಳಿ ಕಾಂತಾರ ಸಿನಿಮಾ ರಿವ್ಯೂ ಮಾಡಿದ್ದಾರೆ. ಆ ರಿವ್ಯೂ ಇಲ್ಲಿದೆ ನೋಡಿ
Link:
What's Your Reaction?






