ಆಪ್ತ ನ್ಯೂಸ್ ಶಿಕಾರಿಪುರ:
ಕೆಎಸ್‌ಆರ್‌ಟಿಸಿ ಬಸ್ ಅಡಿಯಲ್ಲಿ ನಾಡಬಾಂಬ್ ಸ್ಪೋಟಗೊಂಡ ಘಟನೆ ತಾಲ್ಲೂಕಿನ ಹಿರೇಕಲವತ್ತಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದ್ದು ಸ್ವಲ್ಪದರಲ್ಲೆ ದೊಡ್ಡ ಅನಾಹುತವೊಂದು ತಪ್ಪಿದೆ.
ಮುಡಬಸಿದ್ಧಾಪುರ ಗ್ರಾಮದಿಂದ ಶಿಕಾರಿಪುರಕ್ಕೆ ಆಗಮಿಸುತ್ತಿದ್ದ ಬಸ್ ಹಿರೇಕಲವತ್ತಿ ಗ್ರಾಮಕ್ಕೆ ಆಗಮಿಸುತ್ತಿರುವಾಗ ಸ್ಪೋಟಗೊಂಡ ಸದ್ದು ಬಂತಲ್ಲದೆ ಬಸ್ ನಿಯಂತ್ರಣ ತಪ್ಪಿ ಪಕ್ಕದ ಟಿಸಿಗೆ ಡಿಕ್ಕಿ ಹೊಡೆದು ನಿಂತುಕೊಂಡಿತು. ಬಸ್‌ನ ಟೈರ್ ಅಂಚಿಕೆ ನಾಡಬಾಂಬ್ ತಾಗಿದ್ದಕ್ಕೆ ಅಪಾಯ ಕಡಿಮೆ ಆಗಿದೆ ಟೈರ್ ನಡುವೆ ಅದು ಸ್ಪೋಟಗೊಂಡಿದ್ದರೆ ಬಸ್‌ನಲ್ಲಿದ್ದವರಿಗೆ ದೊಡ್ಡ ಅನಾಹುತ ಆಗುತ್ತಿತ್ತು.
ಸ್ಪೋಟಕ್ಕೂ 7ನಿಮಿಷ ಮೊದಲು ಅದೇ ಮಾರ್ಗದಲ್ಲಿ ಬಸ್ ಹೋಗಿದ್ದು ಆಗ ಬಸ್‌ನಲ್ಲಿ 45ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು. ನಾಡಬಾಂಬ್ ಸ್ಪೋಟಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ಚಾಲಕ ಬಸವರಾಜ್ ಹೇಳಿದ್ದಾರೆ.