ನೃತ್ಯ, ಸಂಗೀತಕ ಕಲಿಕೆಯಲ್ಲಿ ಮೊದಲ ಆದ್ಯತೆಯಾಗಬೇಕು: ಕೆ. ರಾಮಮೂರ್ತಿ ರಾವ್
ಆಪ್ತ ನ್ಯೂಸ್ ಸಾಗರ:
ಕಲಿಕೆಯ ವಿಚಾರದಲ್ಲಿ ಇತ್ತೀಚೆಗೆ ನೃತ್ಯ, ಸಂಗೀತವನ್ನು ಮೊದಲ ಆದ್ಯತೆಯನ್ನಾಗಿ ಹೆಚ್ಚಿನವರು ತೆಗೆದುಕೊಳ್ಳುತ್ತಿಲ್ಲ. ಪಠ್ಯದ ಓದನ್ನೇ ಹೆಚ್ಚಿನ ಸಾಧನೆ ಎಂದು ಭಾವಿಸುತ್ತಾರೆ. ವೈದ್ಯರು, ಇಂಜಿನಿಯರ್ ಆಗುವುದೇ ದೊಡ್ಡದೆಂದು ಕೊಳ್ಳುತ್ತಾರೆ. ಬದಲಾಗಿ ನೃತ್ಯ, ಸಂಗೀತದಲ್ಲೂ ಸಾಧನೆ ಮಾಡಿ ಬದುಕು ಕಟ್ಟಿಕೊಳ್ಳಬಹುದೆಂದು ಹಲವರು ತೋರಿಸಿಕೊಟ್ಟಿದ್ದಾರೆ ಎಂದು ಮೈಸೂರಿನ ನೂಪುರ ಕಲಾವಿದರು ಸಾಂಸ್ಕೃತಿಕ ಟ್ರಸ್ಟ್ನ ನಿರ್ದೇಶಕ ನಾಟ್ಯಾಚಾರ್ಯ ಪ್ರೊ. ಕೆ. ರಾಮಮೂರ್ತಿ ರಾವ್ ಅಭಿಪ್ರಾಯ ಪಟ್ಟರು.
ಇಲ್ಲಿನ ಕಾಗೋಡು ರಂಗಮAದಿರದಲ್ಲಿ ಭಾನುವಾರ ಗೀತಾಂಜಲಿ ಕಲಾ ಕೇಂದ್ರದ ವತಿಯಿಂದ ನಡೆದ ವಿದೂಷಿ ಡಾ. ವಿಜಯಲಕ್ಷಿö್ಮÃ ಹೆಗಡೆ ಕಂಪ್ಲಿಯವರ ಶಿಷ್ಯೆ ಎಸ್.ಎಂ. ಚಂದನರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಕಲಾವಿದರು ಯಾರದ್ದೋ ಶಿಫಾರಸ್ಸು, ಯಾರದ್ದೋ ಪರಿಚಯ, ಮತ್ಯಾವುದರಿಂದಲೂ ಯಾವತ್ತೂ ಸಾಧನೆ ಮಾಡಲು ಆಗುವುದಿಲ್ಲ. ಕಲಾರಂಗದಲ್ಲಿ ಯಾರು ಬದ್ಧತೆ ತೋರಿಸುತ್ತಾರೋ, ಶ್ರಮ ವಹಿಸುತ್ತಾರೋ ಅಂಥವರು ಯಶಸ್ವಿಯಾಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ ಎಂದರು.
ಭರತನಾಟ್ಯ ರಂಗ ಪ್ರವೇಶ ಎಂದರೆ ಕಲಾವಿದ ಸುಮಾರು ೧೦-೧೫ ವರ್ಷ ಕಲಿತಿದ್ದನ್ನು ೩ ಗಂಟೆ ಕಾಲ ಪೂರ್ಣಾವಧಿ ಪ್ರದರ್ಶನವನ್ನು ಕಲಾವಿಮರ್ಷಕರು, ಸಾರ್ವಜನಿಕರಿಗೆ ತೋರಿಸುವ ಸುದಿನ. ಇದು ಆಕೆಗೆ ಪರೀಕ್ಷೆಯ ದಿನ. ಗುರುಗಳಿಗೂ ಪರೀಕ್ಷೆ. ದಣಿವಿಲ್ಲದಂತೆ ೧.೫ ಗಂಟೆ ನೃತ್ಯ ಮಾಡುವುದು ಸಣ್ಣ ಕಾರ್ಯವಲ್ಲ. ಜೊತೆಗೆ ಪರಶಿವನ ವಿವಿಧ ಕಥೆ, ಆಯಾಮಗಳನ್ನು ಚಿತ್ರಿಸಿದ ರೀತಿ, ದ್ವಾದಶ ಜ್ಯೋತಿರ್ಲಿಂಗದ ಬಗ್ಗೆ ಅಭಿನಯದ ಮೂಲಕ ತೋರಿಸಿಕೊಟ್ಟಿದ್ದು ಕಲಾವಿದೆ ನೀಡಿದ ವರ್ಣನೆ ಅತ್ಯಪರೂಪದ್ದು. ಇದರಲ್ಲಿ ಗುರುಗಳಾದ ಶರತ್, ವಿದುಷಿ ಡಾ. ವಿಜಯಲಕ್ಷಿö್ಮÃ ಹೆಗಡೆಯವರ ಶ್ರಮದ ಫಲ ಕಾಣಸಿಗುತ್ತದೆ ಎಂದು ವಿವರಿಸಿದರು. ಕಲೆಯಿಂದ ಸಿಗುವ ಸುಖ ಭಾಷೆ, ಪದದಲ್ಲಿ ವರ್ಣಿಸಲು ಆಗದು. ಅನುಭವಿಸಿಯೇ ತೀರಬೇಕು ಎಂದು ಹೇಳಿದರು.
ಬೆಂಗಳೂರಿನ ಶರತ್ ನೃತ್ಯಾನುಸಂಧಾನ ಸಂಸ್ಥೆ ನಿರ್ದೇಶಕ ಹಾಗೂ ಕಥಕ್, ಭರತನಾಟ್ಯ ಕಲಾವಿದ ವಿದ್ವಾನ್ ಟಿ.ಎಸ್. ಶರತ್ ಮಾತನಾಡಿ, ಗುರು ಹಾಗೂ ಶಿಷ್ಯರ ನಡುವಿನ ಬಾಂಧವ್ಯ, ಉತ್ಕೃಷ್ಟ ಶಿಕ್ಷಣದ ಪರಿಣಾಮ ವೇದಿಕೆಯಲ್ಲಿ ಕಾಣಿಸುತ್ತಿದೆ. ಪ್ರಸ್ತುತದಲ್ಲಿ ನ್ಯತ್ಯ ತರಗತಿಗೆ ಸೇರಿಸುತ್ತಿದ್ದಂತೆ ಮಕ್ಕಳಿಂದ ಯಾವಾಗ ವೇದಿಕೆ ಕಾರ್ಯಕ್ರಮ ಕೊಡಿಸುತ್ತೀರಿ ಎಂದು ಕೇಳುವ ಪೋಷಕರಿದ್ದಾರೆ. ಆದರೆ ಇದು ಒಂದೆರಡು ವರ್ಷಕ್ಕೆ ಆಗುವಂಥದ್ದಲ್ಲ. ಬದಲಾಗಿ ೧೦-೧೨ ವರ್ಷದ ನಿರಂತರ ಪರಿಶ್ರಮ ಬೇಕಾಗುತ್ತದೆ. ಅದನ್ನು ಇಲ್ಲಿ ಕಾಣಬಹುದಾಗಿದೆ. ಅತ್ಯುತ್ತಮ ಶಿಕ್ಷಣ ಸಾಧನೆ ಇರದಿದ್ದರೆ ಇಂದು ಪ್ರದರ್ಶಿಸಿದ ನ್ಯತ್ಯ ಹಾಗೂ ಬಂಧಗಳನ್ನು ಸಮರ್ಥವಾಗಿ ಪ್ರೇಕ್ಷಕರಿಗೆ ತೋರಿಸಲು ಆಗುವುದಿಲ್ಲ. ಮಾನವ ತನ್ನ ಭಾವನೆ ವ್ಯಕ್ತಪಡಿಸಲು ನಾಟ್ಯವೂ ಸೇರಿದಂತೆ ಹಲವು ಮಾಧ್ಯಮ ಬಳಸಿಕೊಳ್ಳುತ್ತಾನೆ. ಕಲ್ಲು ಕೆತ್ತುವುದರಿಂದ ಶಿಲ್ಪಕಲೆಯಾದರೆ ಕುಂಚದಿAದ ಚಿತ್ರಿಸಿದರೆ ಚಿತ್ರಕಲೆಯಾಗುತ್ತದೆ. ಆದರೆ ಎಲ್ಲ ಕಲೆಯಲ್ಲೂ ಹೆಚ್ಚು ಕಷ್ಟದ್ದು ನೃತ್ಯ. ಕಲಾವಿದರು ತಮ್ಮ ಅಭಿನಯದ ಮೂಲಕ ಎಲ್ಲ ಭಾವನೆಯನ್ನೂ ಪ್ರೇಕ್ಷಕರಿಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ ಎಂದರು.
ಸಾಗರದ ಹಿರಿಯ ರಂಗಕರ್ಮಿ ಮಂಜುನಾಥ ಜೇಡಿಕುಣಿ, ಸಮಾರಂಭದ ಕುರಿತು ಅಭಿಪ್ರಾಯ ಮಂಡಿಸಿದರು. ಚಂದನರವರು ಸತತವಾಗಿ ಮೂರು ಗಂಟೆ ಕಾಲ ವಿವಿಧ ದೇವರ ಸ್ಥುತಿ, ದಾಸರ ಪದ ಮೊದಲಾದವುಗಳಿಗೆ ಭರತನಾಟ್ಯ ಪ್ರಸ್ತುತ ಪಡಿಸಿದರು. ನಟುವಾಂಗದಲ್ಲಿ ವಿದುಷಿ ಡಾ. ವಿಜಯಲಕ್ಷಿö್ಮÃ ಹೆಗಡೆ, ಹಾಡುಗಾರಿಕೆಯಲ್ಲಿ ವಿದ್ವಾನ್ ರಘುರಾಂ ರಾಜಗೋಪಾಲನ್, ಮೃದಂಗದಲ್ಲಿ ಬೆಂಗಳೂರಿನ ವಿದ್ವಾನ್ ಸಾಯಿ ವಂಶಿ, ಕೊಳಲು ವಿದ್ವಾನ್ ಶಶಾಂಕ್ ಜೋಡಿದಾರ್, ವೀಣೆಯಲ್ಲಿ ವಿದುಷಿ ಅಪೂರ್ವ ಅನಿರುದ್ಧ್, ರಿದಂಪ್ಯಾಡ್‌ನಲ್ಲಿ ವಿದ್ವಾನ್ ಸುಮಧರ್ ಆನೂರ್ ಸಹಕರಿಸಿದರು. ಸಮಾರಂಭದಲ್ಲಿ ಚಂದನ ಪೋಷಕರಾದ ಮೋಹನ್ ಶ್ಯಾಮನೂರು ಮತ್ತು ಆಶಾ ಮೋಹನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಫೋಟೊ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



