ಶಿರಸಿ ಮಾರಿಜಾತ್ರೆಯಲ್ಲಿ ಕಳ್ಳತನಕ್ಕೆ ಹೊರಟಿದ್ದ ಅಂತಾರಾಜ್ಯ ಕಳ್ಳರ ಬಂಧನ

Feb 25, 2026 - 18:57
 0  644
ಶಿರಸಿ ಮಾರಿಜಾತ್ರೆಯಲ್ಲಿ ಕಳ್ಳತನಕ್ಕೆ ಹೊರಟಿದ್ದ ಅಂತಾರಾಜ್ಯ ಕಳ್ಳರ ಬಂಧನ

ಆಪ್ತ ನ್ಯೂಸ್‌ ಯಲ್ಲಾಪುರ:

ಯಲ್ಲಾಪುರದಲ್ಲಿ ಸಾದ್ಯವಾದ ದರೋಡೆ ನಡೆಸಿ ಶಿರಸಿ ಮಾರಿ ಜಾತ್ರೆಯಲ್ಲಿ ದರೋಡೆ ಮಾಡಲು ಹೊರಟಿದ್ದ ಎಂಟು ಜನ ಅಂತರಾಜ್ಯ ಪ್ರಖ್ಯಾತ ದರೋಡೆಕೋರರ ಗ್ಯಾಂಗ್ ನ್ನು ರಾಷ್ಟ್ರೀಯ ಹೆದ್ದಾರಿಯ ಕೆ ಮಿಲನ್. ಹೋಟೆಲ್ ಹತ್ತಿರ ಬುಧವಾರ   ಬುಧವಾರ ಬೆಳಗಿನ ಜಾವ ಖಚಿತ ಮಾಹಿತಿ ಪಡೆದು ಇಲ್ಲಿನ ಪೋಲಿಸರು ಧಾಳಿ ನಡೆಸಿ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
ಮಾರಕಾಸ್ತ್ರ ಹಿಡಿದು ಹೆದ್ದಾರಿಯಲ್ಕಿ ದರೋಡೆಗೂ ಬಲೆ ಬೀಸಿದ್ದರು. ಪಿಎಸ್ಐ ಸಿದ್ದಪ್ಪ ಗುಡಿ ತಮ್ಮ ತಂಡದೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಆರೋಪಿತರಾದ  ಉಮೇಶ  ರಾಮಾ ಗಾಯಕವಾಡ ಪ್ರಾಯ: 35 ವರ್ಷ. ವೃತ್ತಿ: ಆಟೋ ಚಾಲಕ ಸಾಕೀನ, ಜೆಡ್ ಕಾರ್ನರ್ ಮಂಜಿಲ್ ಪುಣೆ ಮಹಾರಾಷ್ಟ್ರ ರಾಜ್ಯ, ಶ್ರೀನಾಥ ಶಂಕರ ಜಾಡವ ಪ್ರಾಯ: 39 ವರ್ಷ, ವೃತ್ತಿ: ಆಟೋ ಚಾಲಕ ಸಾಃ ವಂದ್ರಪಡ, ಪಾಲೇಮಾ ಚರ್ಚ. ಸಂತೋಷಮಾತಾ ಮಂದಿರ, ಅಂಬರನಾಥ, ಥಾಣಿ, ವೇಸ್ಟ ಮುಂಬೈ, ಮಹಾರಾಷ್ಟ್ರ ರಾಜ್ಯ, ಲಖನ್  ಸುಹಾಸ್ ಜಾದವ ಪ್ರಾಯ: 30 ವರ್ಷ. ವೃತ್ತಿ: ಪ್ಲಂಬರ ಸಾಕೀನ್ ಃ ಸರ್ವೋದಯ ಕಾಲನಿ ಮುಂಡ್ಯಾ, ಪುಣೆ, ಮಹಾರಾಷ್ಟ್ರ,  ಪ್ರಶಾಂತ  ಅಖಿಲ್ ಪವಾರ ಪ್ರಾಯ: 35 ವರ್ಷ, ವೃತ್ತಿ: ರಿಕ್ಷಾ ಚಾಲಕ ಸಾ. ಶಿಂದೆವಸ್ತಿ, ಕೇಶವ ನಗರ, ಮಣೆ. ಮಹಾರಾಷ್ಟ್ರ ರಾಜ್ಯ, ದೀಪಕ  ಚೆಂದರಲಾಲ್ ದುಂಬಾನಿ ಪ್ರಾಯ: 47 ವರ್ಷ, ವೃತ್ತಿ: ಚಾಲಕ ಸಾ. ಉಲ್ಲಾಸ ನಗರ ಥಾಣೆ, ಮಹಾರಾಷ್ಟ್ರ ರಾಜ್ಯ , ಸುಂದರ ಕೈಲಾಸ್ ಗಾಯಕವಾಡ ಪ್ರಾಯ: 50 ವರ್ಷ, ವೃತ್ತಿ: ಬಟ್ಟೆ ವ್ಯಾಪಾರ ಸಾ. ಸುಭಾಸವಾಡಿ, ವಾಂದ್ರಪಾಡಾ. ಪಾತೀಮಾ ಚರ್ಚ ಹತ್ತಿರ, ಅಂಬರನಾಥ, ಥಾಣೆ. ಮಹಾರಾಷ್ಟ್ರ ರಾಜ್ಯ,ನಾಗುಬಾಯಿ ಗಣೇಶ ಜಾದವ ಪ್ರಾಯ: 50 ವರ್ಷ, ವೃತ್ತಿ: ಮನೆ ಕೆಲಸ ಸಾಃಮಿರ್ಜವಾಡಿ, ಅಂಬರನಾಥ ಥಾಣಿ. ಮಹಾರಾಷ್ಟ್ರ ರಾಜ್ಯ , ಅಂಬಿಕಾ ಪ್ರಕಾಶ ಜಾದವ ಪ್ರಾಯ: 39 ವರ್ಷ, ವೃತ್ತಿ: ಮನೆ ಕೆಲಸ ಸಾಃ ಹೌಸಿಂಗ ಬೋರ್ಡ, ಆನಂದ ನಗರ, ಅಂಬರನಾಥ ಥಾಣೆ. ಮಹಾರಾಷ್ಟ್ರ ರಾಜ್ಯ ಇವರನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿ ನಂತರ ನ್ಯಾಯಾಂಗ ವಶಕ್ಕೆ ಒಪ್ಪುಸಲಾಗಿದೆ.ಮುಂದಿನ ತನಿಖೆಯನ್ನು ಕೈಗೊಂಡಿದೆ.ಈ ಆರೋಪಿತರು ಈ ಹಿಂದೆ ದಕ್ಷಿಣ ಭಾರತದ ಪ್ರವಾಸಿ ತಾಣ. ಪ್ರಸಿದ್ದ ದೇವಸ್ಥಾನಗಳಿಗೆ ಭೇಟಿ ನೀಡಿ ಜನಸಂದಣಿ ಇರುವ ಪ್ರದೇಶದಲ್ಲಿ ಪಿಕ್ ಪಾಕೇಟ್, ಹೆಂಗಸರ ಕೊರಳಿನಲ್ಲಿರುವ ಚೈನ್ ಸರ ಕಳ್ಳತನ, ಬಳೆ ಕಳ್ಳತನಗಳನ್ನು ಮಾಡಿರುತ್ತಾರೆ. ಅದಲ್ಲದೇ ದಕ್ಷಿಣ ಭಾರತದ ಸುಪ್ರಸಿದ್ಧ ಜಾತ್ರೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಆಯಾ ಜಾತ್ರೆಗಳಿಗೆ ಹೋಗಿ ಕಳ್ಳತನ ಮಾಡುವ ಪೃವೃತ್ತಿಯುಳ್ಳವರಾಗಿರುತ್ತಾರೆ. ಈ ಆರೋಪಿತರು ಕಳ್ಳತನ ಹಾಗೂ ದರೋಡೆ ಮಾಡಿ ತಾವು ತಂದಿರುವ ವಾಹನದಿಂದ ಪರಾರಿಯಾಗಿರುತ್ತಾರೆ. ಅಲ್ಲದೇ ಅಲ್ಲದೇ ಕೃತ್ಯ ಎಸಗುವ ವೇಳೆ ಹಿಡಿಯಲು ಹೋದರೆ ಕಲ್ಲಿನಿಂದ ಹಲ್ಲೆ ಮಾಡುವ ಕ್ರೂರ ಸ್ವಭಾವದವರಾಗಿರುತ್ತಾರೆ.  ಆರೋಪಿತರು ಮಹಾರಾಷ್ಟ್ರದ ಕೈಕಡಿ ಸಮುದಾಯದವರಾಗಿದ್ದು ಕಳೆದ 3-4 ವರ್ಷದಿಂದ ಸತತವಾಗಿ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿ ಕಳ್ಳತನ ದರೋಡೆ, ಸುಲಿಗೆ ಮಾಡುತ್ತಿರುವ ಪ್ರವೃತ್ತಿಯುಳ್ಳ ಗ್ಯಾಂಗ್‌ ಸದಸ್ಯರಾಗಿರುತ್ತಾರೆ.  ಆರೋಪಿತರು ಅಂತರ್ ರಾಜ್ಯ ದರೋಡೆಕೋರದಾಗಿರುತ್ತಾರೆ. ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ. ಮುರ್ಡೇಶ್ವರ ಕಡೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ. ಈ ದಿವಸ ಶಿರಶಿಯ ಸುಪ್ರಸಿದ್ಧ ಶ್ರೀ ಮಾರಿಕಾಂಬ ದೇವಿಯ ಜಾತ್ರೆಯಲ್ಲಿ ಸರಕಳ್ಳತನ, ಬಳೆ ಕಳ್ಳತನ, ಪರ್ಸ ಕಳ್ಳತನ, ಜೇಬುಕಳ್ಳತನ ಮಾಡುವ ಇರಾದೆಯಿಂದ ಮಹಾರಾಷ್ಟ್ರದಿಂದ ಈ ಕಡೆಗೆ ಬಂದಿರುವ ಬಗ್ಗೆ ಒಪ್ಪಿಕೊಂಡಿರುತ್ತಾರೆ.  ಆರೋಪಿತರಿಂದ 1 ಮಾರುತಿ ಎರಟಕಾ ಕಾರ ,ಒಟ್ಟೂ 4 ಲಕ್ಷ ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೋಲಿಸ್ ವರಿಷ್ಠಾಧಿಕಾರಿ  ದೀಪನ್ ಎಮ್. ಎನ್,ಡಿವೈಎಸ್ಪಿ ಗೀತಾ ಪಾಟೀಲ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ  ಸಿಪಿಐ ರಮೇಶ ಹನಾಪೂರ ಗೋಕರಗಣ ಪಿಎಸ್ಐ ಶ್ರೀಧರ ಎಸ್ ಆರ್. ಸಿದ್ದಪ್ಪ ಗುಡಿ ಯಲ್ಲಾಪುರ ಇವರ ನೇತ್ರತ್ವದಲ್ಲಿ ಪಿಎಸ್‌ಐರವರಾದ ರಾಜಶೇಖರ ವಂದಲಿ, ಅನೀಲ್ ಮಾದರ. ಮಹಾಂತೇಶ ಕುಂಬಾರ ಎ ಎಸ್ ಐ ಗಜಾನನ ನಾಯ್ಕ,ಹಾಗೂ ಸಿಬ್ಬಂದಿಗಳಾದ ಮಹಮ್ಮದ್ ಶಫೀ ಶೇಖ್, ರಾಜೇಶ ನಾಯ್ಕ, ಬಸವರಾಜ ಹಗರಿ, ಪ್ರಶಾಂತ ಪಾವುಸ್ಥರ್, ಚಂದ್ರಪ್ಪ, ಶ್ರೀಮತಿ ಶೋಭಾ ನಾಯ್ಕ, ರೇಖಾ ಎಮ್ ಎಸ್. ಶ್ರೀಕಾಂತ ಕಟಬರ, ಪರಮೇಶ್ವರ ಬೆಂಡಗಟ್ಟಿ. ಬಸವರಾಜ ಕಂಬಳಿ, ಗಿರೀಶ ಲಮಾಣಿ. ಪರಮೇಶ್ವರ ಎಸ್. ನಾಗರಾಜ್ ನಾಯ್ಕ, ಸುರೇಶ, ಮಹಾವೀರ, ಚನ್ನಕೇಶವ, ರಾಚಪ್ಪ, ಗಂಗಾಧರ, ಸಂತೋಷ ಬಾಳೆ, ಹಾಗೂ ಟೆಕ್ನಿಕಲ್ ಸೆಲ್ ಕಾರವಾರ ಸಿಬ್ಬಂದಿಯವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

What's Your Reaction?

Like Like 2
Dislike Dislike 0
Love Love 2
Funny Funny 0
Angry Angry 0
Sad Sad 0
Wow Wow 0