ಶಿರಸಿ–ಮುಂಡಗೋಡ–ಸೌವದತ್ತಿ ನೂತನ ಬಸ್ ಸೇವೆಗೆ ಚಾಲನೆ; ಶಾಸಕ ಶಿವರಾಮ ಹೆಬ್ಬಾರರಿಂದ ಹಸಿರು ನಿಶಾನೆ

Jul 14, 2026 - 20:12
 0  45
ಶಿರಸಿ–ಮುಂಡಗೋಡ–ಸೌವದತ್ತಿ ನೂತನ ಬಸ್ ಸೇವೆಗೆ ಚಾಲನೆ; ಶಾಸಕ ಶಿವರಾಮ ಹೆಬ್ಬಾರರಿಂದ ಹಸಿರು ನಿಶಾನೆ

ಆಪ್ತ ನ್ಯೂಸ್ ಮುಂಡಗೋಡ:

ಧಾರ್ಮಿಕ ಕ್ಷೇತ್ರ ಸೌವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ತೆರಳುವ ಭಕ್ತರು ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರ ಅನುಕೂಲಕ್ಕಾಗಿ "ಶಿರಸಿ–ಮುಂಡಗೋಡ–ಸೌವದತ್ತಿ" ನೂತನ ಸಾರಿಗೆ ಬಸ್ ಸೇವೆಗೆ ಮುಂಡಗೋಡ ಪಟ್ಟಣದ ಬಸ್ ನಿಲ್ದಾಣದಲ್ಲಿ ಅಧಿಕೃತ ಚಾಲನೆ ನೀಡಲಾಯಿತು.

ಶಾಸಕ ಶಿವರಾಮ ಹೆಬ್ಬಾರ ಹಸಿರು ನಿಶಾನೆ ತೋರಿಸುವ ಮೂಲಕ ಬಸ್ ಸೇವೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಹೊಸ ಬಸ್ ಸೇವೆಯಿಂದ ಶಿರಸಿ, ಮುಂಡಗೋಡ ಹಾಗೂ ಸೌವದತ್ತಿ ಮಾರ್ಗದ ಪ್ರಯಾಣಿಕರಿಗೆ ಸುಗಮ ಸಂಚಾರ ವ್ಯವಸ್ಥೆ ದೊರೆಯಲಿದ್ದು, ವಿಶೇಷವಾಗಿ ಯಲ್ಲಮ್ಮ ದೇವಿಯ ದರ್ಶನಕ್ಕೆ ತೆರಳುವ ಸಾವಿರಾರು ಭಕ್ತರಿಗೆ ಇದು ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

ಸಾರ್ವಜನಿಕರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಆರಂಭಿಸಿರುವ ಈ ಬಸ್ ಸೇವೆಯನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.

ನೂತನ ಬಸ್ ಸೇವೆ ಆರಂಭಗೊಂಡಿರುವುದಕ್ಕೆ ಸ್ಥಳೀಯರು ಹಾಗೂ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದು, ಈ ಮಾರ್ಗದಲ್ಲಿ ಇನ್ನಷ್ಟು ಸಾರಿಗೆ ಸೌಲಭ್ಯಗಳನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0