ಕಮಲಾಕರ್ ಭಟ್ ಕರ್ಮಕಾಂಡ: 'ಗುರೂಜಿ' ಮುಖವಾಡದ ಹಿಂದೆ ಅಡಗಿದ್ದ ಕಾಮಪಿಶಾಚಿ! ಪೋಕ್ಸೋ ಪ್ರಕರಣ ದಾಖಲು
ಆಪ್ತ ನ್ಯೂಸ್ ಶಿವಮೊಗ್ಗ:
ಧರ್ಮ, ಜ್ಯೋತಿಷ್ಯ ಮತ್ತು ಗೋಶಾಲೆಯ ಹೆಸರಿನಲ್ಲಿ ಸಮಾಜದ ಕಣ್ಣಿಗೆ ಮಣ್ಣೆರಚುತ್ತಿದ್ದ ಕಮಲಾಕರ್ ಭಟ್ ಎಂಬ ನಕಲಿ ಜ್ಯೋತಿಷಿಯ ಅಸಲಿ ರೂಪ ಈಗ ಶಿವಮೊಗ್ಗ ಪೊಲೀಸರ ಬಲೆಗೆ ಬಿದ್ದಿದೆ. ಸಿದ್ದಾಪುರದ ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಈಗಾಗಲೇ ಜೈಲು ಪಾಲಾಗಿದ್ದ ಈತನ ವಿರುದ್ಧ ಈಗ ಅತ್ಯಂತ ಗಂಭೀರವಾದ ಪೋಕ್ಸೋ (POCSO) ಪ್ರಕರಣ ದಾಖಲಾಗಿದ್ದು, ಶಿವಮೊಗ್ಗ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ
ಘಟನೆಯ ಹಿನ್ನೆಲೆ:
ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಈತ ಮೂರನೇ ಆರೋಪಿಯಾಗಿದ್ದ. ಈ ಕೊಲೆಯ ತನಿಖೆ ನಡೆಯುತ್ತಿರುವಾಗಲೇ, ಈತನ ಮತ್ತೊಂದು ಹೇಯ ಕೃತ್ಯ ಬೆಳಕಿಗೆ ಬಂದಿದೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ಸುಚಿತ್ರಾ ಅವರ ಅಪ್ರಾಪ್ತ ಮಗಳು, ಕಮಲಾಕರ್ ಭಟ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಶಿವಮೊಗ್ಗದಲ್ಲಿ ನಡೆದಿದ್ದೇನು?
ಬಾಲಕಿ ನೀಡಿದ ದೂರಿನ ಪ್ರಕಾರ, ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಮಲಾಕರ್ ಭಟ್‌ನ ನಿವಾಸದಲ್ಲಿ ಈ ಕೃತ್ಯ ನಡೆದಿದೆ. ತಾಯಿ ಸುಚಿತ್ರಾ ಮನೆಯಲ್ಲಿ ಇಲ್ಲದ ಸಮಯದಲ್ಲಿ, ಒಂಟಿಯಾಗಿದ್ದ ಬಾಲಕಿಯ ಮೇಲೆ ಈತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಘಟನಾ ಸ್ಥಳ ಶಿವಮೊಗ್ಗ ಆಗಿದ್ದರಿಂದ ಪ್ರಕರಣವನ್ನು ತುಂಗಾನಗರ ಠಾಣೆಗೆ ವರ್ಗಾಯಿಸಲಾಗಿದೆ.
ಪೊಲೀಸ್ ಕಸ್ಟಡಿಗೆ ಆರೋಪಿ:
ಪೋಕ್ಸೋ ಪ್ರಕರಣ ಗಂಭೀರವಾಗಿರುವುದರಿಂದ, ಶಿವಮೊಗ್ಗ ಪೊಲೀಸರು ಕಾರವಾರದ ಜೈಲಿನಲ್ಲಿದ್ದ ಕಮಲಾಕರ್ ಭಟ್‌ನನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯವು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಪೊಲೀಸರು ಈತನನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
1
Wow
0