ಕೊಹ್ಲಿ ಆಟದ ಬಗ್ಗೆ ಯಾಕೆ ಸುಮ್ನೆ ಟೀಕೆ? ಈ ಏಜಲ್ಲೂ ಇಷ್ಟೆಲ್ಲ ಸ್ಟ್ರೈಕ್‌ ರೇಟ್‌ ಇದೆಯಲ್ಲ!

Apr 14, 2026 - 13:10
 0  94
ಕೊಹ್ಲಿ ಆಟದ ಬಗ್ಗೆ ಯಾಕೆ ಸುಮ್ನೆ ಟೀಕೆ? ಈ ಏಜಲ್ಲೂ ಇಷ್ಟೆಲ್ಲ ಸ್ಟ್ರೈಕ್‌ ರೇಟ್‌ ಇದೆಯಲ್ಲ!
~ಅಕ್ಷಯ್‌ ಹೆಗಡೆ

*************


ಮೊನ್ನೆ ಮುಂಬೈ ತಂಡದ ಮೇಲೆ ನಮ್ಮ #RCB ಯವರು ಭರ್ಝರಿಯಾಗೇ ಗೆದ್ದರು. ವಿಷಯ ಅದಲ್ಲ. RCB ಬ್ಯಾಟಿಂಗ್ ಮಾಡುವಾಗ, ಕೊಹ್ಲಿಯವರ ಆಟದ ಬಗ್ಗೆ, ಅವರ ಸ್ಟ್ರೈಕ್ ರೇಟ್ ಬಗ್ಗೆ ಭಯಂಕರ ಟೀಕೆಗಳು, ಕಟುವಾದ ವಿಮರ್ಶೆಗಳು, ಟ್ರೋಲ್‌ಗಳೂ ಬಂದವು..!..

ಹಾಗೆ ನೋಡಿದರೆ, ಕೊಹ್ಲಿಯವರ ಸ್ಟ್ರೈಕ್ ರೇಟ್, ಈ ಸೀಸನಲ್ಲೂ 160+ ಇದೆ. ಆ ಬಗ್ಗೆ ಹೇಳಬೇಕು ಅಂದ್ರೆ, ಮೊದಲನೆಯದಾಗಿ, ಕೊಹ್ಲಿಯವರೂ ನಮ್ಮೆಲ್ಲರಂತೆ 'ಹ್ಯೂಮನ್' ಅನ್ನೋದನ್ನು ಜನರು ಮರೆಯಬಾರದು..!.. ಸೋ, ಕೊಹ್ಲಿ ಕೂಡಾ ನಮ್ಮ ನಿಮ್ಮೆಲ್ಲರಂತೆ ಸ್ಟ್ರಗಲ್ ಮಾಡೋದೂ ಸಹಜ, ಅವರಿಗೂ 'Good Days, Bad Days' ಎಲ್ಲವೂ ಇರುತ್ತದೆ..!..

ಎರಡನೆಯದಾಗಿ, RCB ತನ್ನ ಅಪ್ರೋಚಿನಿಂದಾಗಿಯೇ RR ಮೇಲೆ ದೊಡ್ಡ ಕೊಲಾಪ್ಸಿಗೆ ತುತ್ತಾಗಿತ್ತು, ಪಂದ್ಯವನ್ನೂ ಸೋತಿತ್ತು. ಆ ಪಂದ್ಯದಲ್ಲಿ ಕೊಹ್ಲಿ 16 Ball ಗೆ 32 ಹೊಡೆದು, 200ರ ಸ್ಟ್ರೈಕ್ ರೇಟಲ್ಲಿಯೇ ಹೊಡೆದು ಔಟಾಗಿದ್ದರು. ಆದರೆ, ಅದರಿಂದ ಅವರ ತಂಡದ ಮೊತ್ತ ಅವತ್ತು 240 ಆಗಲಿಲ್ಲ. ಅವತ್ತೂ ನನಗೆ ಅನ್ನಿಸಿದ್ದು, ರಜತ್ ಪಟಿದಾರ್ ಬ್ಯಾಟಿಂಗ್ ಬಂದಾಗ ರಜತ್ ಆಂಕರ್ ರೋಲ್ ಆಡುವ ಬದಲು ಕೊಹ್ಲಿಯವರೇ ಹಾಗೆ ಆಡಿ, ರಜತ್ ತನ್ನ ಯೂಶುವಲ್ ಆಟವನ್ನೇ ಆಡಬೇಕಿತ್ತು ಅಂತ. ಅದರ ಅಡ್ವಾಂಟೇಜ್‌ಗಳು ಅನೇಕ ಇವೆ, ಅವೆಲ್ಲ ಈಗ ಬೇಡ. ಬಹುಶಃ, ಆ ದಿನದ ಬ್ಯಾಟಿಂಗ್ ನಡೆದ ರೀತಿಯನ್ನು ನೋಡಿಯೇ, ಆರಂಭದಲ್ಲಿ ವಿಕೆಟ್ ಕೊಡದೇ ಪಾರ್ಟ್ನರ್‌ಶಿಪ್ ಬರುವುದು ಮುಖ್ಯ ಎಂಬ ಕಾರಣಕ್ಕೇ ಕೊಹ್ಲಿಯವರಿಗೆ ಅದೇ ಪಾತ್ರವನ್ನು ಟೀಮ್ ಮ್ಯಾನೇಜ್‌ಮೆಂಟೇ ಕೊಟ್ಟಿದ್ದರೂ ಇರಬಹುದು. ಅವರೇನೂ, ತೀರಾ ಸ್ಟ್ರಗಲ್ ಮಾಡುತ್ತಿರಲಿಲ್ಲ, ಚೆನ್ನಾಗಿಯೇ ಸ್ಟ್ರೈಕ್ ರೊಟೇಟ್ ಮಾಡುತ್ತಿದ್ದರು. ಒಮ್ಮೆ ಸಾಲ್ಟ್, ಆಮೇಲೆ ಪಟಿದಾರ್ ಹಾಗೆ ಹೊಡೆಯುತ್ತಿರುವಾಗ ಇವರೂ ಏನೋ ಮಾಡುತ್ತೇನೆ ಎಂದು ಔಟಾಗುವುದರಲ್ಲಿ ಯಾವುದೇ ಸೆನ್ಸ್ ಇರಲಿಲ್ಲ. ಅವರು ಹಾಗೆ ಆಡಿಯೂ ಕೂಡಾ ತಂಡದ ಮೊತ್ತ 250+ ಆಗುವ ಎಲ್ಲಾ ಸಾಧ್ಯತೆಯೂ ಇತ್ತು, 240ಯಲ್ಲೇ ತಂಡ ಪಂದ್ಯವನ್ನು ಗೆದ್ದಿದೆ. & 240, ಯಾವುದೇ ಪಿಚ್‌ನಲ್ಲೂ ಕೂಡಾ ಕಡಿಮೆ ಮೊತ್ತವೇನೂ ಅಲ್ಲ, ಮ್ಯಾಚ್ ವಿನ್ನಿಂಗ್ ಸ್ಕೋರೇ ಅದು..!..

ನನಗೆ ಆಶ್ಚರ್ಯ ಆಗೋದು, ದುನಿಯಾದಲ್ಲಿ ಬೇರೇ ಯಾವುದೇ ಆಟಗಾರನ ಸ್ಟ್ರೈಕ್ ರೇಟ್ ಬಗ್ಗೆ ನಡೆಯದ ಚರ್ಚೆ, ಕೊಹ್ಲಿಯವರು ಒಂದು ದಿನ ಹೀಗೆ ಆಡಿದಾಗ (ಅವರ ತಂಡ ಮ್ಯಾಚ್ ಗೆದ್ದರೂ!) ಹುಟ್ಟಿಕೊಳ್ಳುತ್ತದೆಯಲ್ಲ, ಆ ಬಗ್ಗೆ. ಅದಕ್ಕಿಂತಲೂ ಹೆಚ್ಚು ನಗು ತರಿಸುವ ವಿಷಯ "ಕೊಹ್ಲಿ ದಾಖಲೆಗಾಗಿ ಆಡ್ತಾನೆ, statpading ಮಾಡ್ತಾನೆ, ಫಿಫ್ಟಿ ಹೊಡ್ಯೋಕೋಸ್ಕರ ಹಾಗೆ ಆಡಿದ" ಅನ್ನೋ ಮಾತುಗಳು..!.. 😜🤣🤦

ಹಾಗೆ ನೋಡಿದರೆ, ಆ ಮ್ಯಾಚಲ್ಲಿ ರಜತ್ ಪಟಿದಾರ್ 11 ಎಸೆತಕ್ಕೆ 44 ಹೊಡೆದಿದ್ದ. ನಂತರ 20 ಎಸೆತಗಳಲ್ಲಿ 53 ಗಳಿಸಿ ಔಟಾಗಿದ್ದು, ಅಂದರೆ ಅವರ ಕೊನೆಯ 9 ಎಸೆತಗಳಲ್ಲಿ 9 ರನ್ ಬಂದಿದೆ..!.. ಅವರು ಫಿಫ್ಟಿಗಾಗಿ ಆಡಿದರು ಎನ್ನೋಣವೇ..?.. ಫಿನಿಶರ್ ಆಗಿ ಬಂದ ಹಾರ್ಡ್ ಹಿಟ್ಟರ್ ಜಿತೇಶ್ ಶರ್ಮಾ 9 ಎಸೆತಕ್ಕೆ 10 ರನ್ ಹೊಡೆದಿದ್ದು, ಅವರು ಏನಕ್ಕಾಗಿ ಆಡಿದರು.. ಅವರು ಫಿಫ್ಟಿ ಹೊಡೆಯಬೇಕು ಅಂದ್ರೆ, ಎಲ್ಲಾ ಎಸೆತವನ್ನೂ ಸಿಕ್ಸೇ ಹೊಡೆಯಬೇಕಿತ್ತು..!..

ರಜತ್ ಪಟಿದಾರ್ ಬಂದಾಗಲೂ ಹೆಚ್ಚಿನ ಓವರ್ ಏನೂ ಇರಲಿಲ್ಲ. ಸೋ, ಅವರೂ ಕೂಡಾ 'ತಾನು ಸೆಂಚುರಿ ಹೊಡೆಯಬೇಕು' ಎಂದೇ ಆ ರಿತಿ ಬೀಸಿರಬಹುದೇ..?..
ಯಾವುದೇ ಆಟಗಾರ, ತಾನು 'ಫಿಫ್ಟಿ ಹೊಡೆಯಬಾರದು, ಸೆಂಚುರಿ ಹೊಡೆಯಬಾರದು' ಎಂದೇ ಆಡಲು ಸಾಧ್ಯವೇ..?.. ಆ ಸಿಚುಯೇಶನ್‌ಗೆ, ಕಂಡೀಶನ್‌ಗೆ ತಕ್ಕಹಾಗೆ ಏನು ಮಾಡಬೇಕು, ತಮ್ಮಿಂದ ಏನು ಮಾಡಲು ಸಾಧ್ಯವೋ ಅದನ್ನೇ ಎಲ್ಲರೂ ಮಾಡೋದು.. ಕೆಲವೊಮ್ಮೆ ಸಕ್ಸಸ್ ಸಿಗತ್ತೆ, ಕೆಲವೊಮ್ಮೆ ಫೇಲ್ಯೂರ್ಸ್..!..

ಬಟ್, 'ಕೊಹ್ಲಿ ದಾಖಲೆಗಾಗಿ ಆಡ್ತಾನೆ' ಅನ್ನೋದನ್ನ ಕೇಳಿದಾಗ, ನನಗೆ ನಗು ಬರೋಕೆ ಮುಖ್ಯ ಕಾರಣವೆಂದರೆ, ಆ ಕೊಹ್ಲಿಗೆ ಇಂತಹ ಒಂದು ಫಿಫ್ಟಿಯಿಂದ ಏನ್ ಸಿಗತ್ತೆ..?.. ಆಲ್ರೆಡಿ, IPLನಲ್ಲಿ ಹೆಚ್ಚು ಫಿಫ್ಟಿ, ಹೆಚ್ಚು ರನ್ ಇತ್ಯಾದಿಗಳೆಲ್ಲ ಅವರ ಹೆಸರಲ್ಲೇ ಇದೆ. ಅದನ್ನು, ಕೊಹ್ಲಿ ಏನೇ ಹರಸಾಹಸ ಮಾಡಿದರೂ ಮುಂದೆ ಯಾರೋ ಒಬ್ಬರು ದಾಟಿ ಮುಂದೆ ಹೋಗಿಯೇ ಹೋಗುತ್ತಾರೆ, ಅದು ಕೊಹ್ಲಿಗೂ ಗೊತ್ತಿದೆ. ಸೋ, ಉದ್ಧೇಶಪೂರ್ವಕವಾಗಿ ಟೀಮ್ ಸೋಲುವಂತಹ ಅಟವಾಡಿ, ಇಮೇಜ್ ಹಾಳ್ಮಾಡ್ಕೊಳೋದಕ್ಕಿಂತ ಒಂದು ಫಿಫ್ಟಿ ಹೊಡೆಯದೇ ಇರೋದೇ ಒಳ್ಳೇದು ಅನ್ನೋದು ಅವರಿಗೂ ಗೊತ್ತಿದೆ..!..

ಅಷ್ಟಕ್ಕೂ, ಅವರೇನೂ ಕಾಡೀಬೇಡಿ IPL ಆಡ್ತಿರೋದಲ್ಲ. ಈಗಾಗಲೇ ಅವರು ಕ್ರಿಕೆಟ್ಟನ್ನು ಬಿಟ್ಟು, ಈ ಕ್ರಿಕೆಟ್‌ನ ಸಾಧನೆಗಳಿಗೆ ಬೆಲೆ ಕೊಡೋದನ್ನು ಬಿಟ್ಟು ಮುಂದೆಹೋಗಿ ತುಂಬಾ ಕಾಲವೇ ಆಗಿದೆ. ಇನ್ನೇನು ಎರಡು ಅಥವಾ ಮೂರು ಸೀಸನ್ IPL ಆಡಿದರೆ ಹೆಚ್ಚು ಅವರು. ಅದೂ, RCBಯೇ ಕೇಳಿಕೊಂಡರೆ. RCB, 'ಕೊಹ್ಲಿ ಬೇಡ' ಎಂದರೆ ಈಗಲೂ ಖುಷಿಯಿಂದಲೇ ಹೋಗಲು ಅವರಂತೂ ತಯಾರಿದ್ದಾರೆ ಅನ್ನೋದು ಅವರನ್ನು ನೋಡಿದರೇ ತಿಳಿಯುತ್ತದೆ. ಅವರು, ಕ್ರಿಕೆಟ್ ಹೊರತಾದ ಬದುಕನ್ನು ಬದುಕಲು ಆರಂಭಿಸಿಬಿಟ್ಟಿದ್ದಾರೆ. ಸೋ, ಅವರಿಗೆ ಇಲ್ಲಿ ಬಂದು, 'ತಮ್ಮ ತಂಡವನ್ನು ಸೋಲಿಸಿಯಾದರೂ ಸರಿ, ತಾನು ಒಂದು ಫಿಫ್ಟಿ ಮಾಡಿಕೊಳ್ಳಬೇಕು' ಎಂಬಂತಹ ಆಸೆ ಇರಲು ಸಾಧ್ಯವೇ ಇಲ್ಲ..!..

ಈ IPL ಸೀಸನಲ್ಲೇ ಅವರು ಧರಿಸಿದ 18 ಶೂಗಳನ್ನು ನೋಡಿ, 'ಓಹ್ ಇವರು ಓನ್ ಬ್ರ್ಯಾಂಡನ್ನೇ ಪ್ರಮೋಟ್ ಮಾಡೋಕೆ ಆರಂಭಿಸಿದ್ದಾರೆ' ಎಂದುಕೊಂಡಿದ್ದೆ. ಅದಾಗಿ ಎರಡೇ ದಿನದಲ್ಲಿ DDP ಕೂಡಾ 18 ಶೂಗಳನ್ನೇ ಧರಿಸುತ್ತಿದ್ದಾರೆ, ಅವರೂ ಆ ಬ್ರ್ಯಾಂಡ್ ಅಂಬಾಸಡರ್ ಆಗಿದ್ದಾರೆ..!.. ಈ ಸೀಸನ್ ಮುಗಿಯುವುದರೊಳಗೆ, ಇನ್ನೂ ಅನೇಕರ ಜೊತೆ 'ಡೀಲ್' ಆದರೂ ಆಗಬಹುದು..!..

ಅದರ ಜೊತೆಗೆ, ಮತ್ತೂ ಅಚ್ಚರಿಯಾಗಿದ್ದು, ಕೊಹ್ಲಿಯವರೇ ಕೋ ಕ್ರಿಯೇಟ್ ಮಾಡಿದ, ಅವರೂ ಓನ್ ಮಾಡುವ ಬ್ರ್ಯಾಂಡ್ WROGN ಲೋಗೋಗಳು SRH ತಂಡದ ಆಟಗಾರರ ಉಡುಪಿನ ಮೇಲಿರುವುದು..!.. ಈ ಬ್ರ್ಯಾಂಡ್‌ನ ರನ್ ಮಾಡೋದು ಆದಿತ್ಯ ಬಿರ್ಲಾ ಅವರ ಸಂಸ್ಥೆಯ ಒಡೆತನದ ಕಂಪನಿಯೇ..!.. ಸೋ, ಇವರ ಬ್ರ್ಯಾಂಡ್‌ಗಳೇ ಬೇರೇ ಆಟಗಾರರ, ತಂಡದ ಸ್ಪಾನ್ಸರ್ ಆಗತ್ತಿರುವ ಕಾಲದಲ್ಲಿ ಮರ್ಯಾದೆ ಕಳೆದುಕೊಳ್ಳುವಂತಹ ಒಂದು ಫಿಫ್ಟಿ ಹೊಡೆದು ಅವರು ಮಾಡೋದಾದರೂ ಏನಿದೆ..?..
ಇವುಗಳ ಜೊತೆಗೆ 18 Commune ಇದೆ. ಅದರ ಜೊತೆಗೆ Chisel Fitness, Digit ಇತ್ಯಾದಿ ಅದೆಷ್ಟೋ ಸ್ಟಾರ್ಟ್ ಅಪ್ಸ್, ಬ್ರ್ಯಾಂಡ್‌ಗಳಿವೆ. ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್, ಕನ್ಸಲ್ಟಿಂಗ್ ಕಂಪನಿಗಳಿವೆ. ಮೊನ್ನೆ ಫೀಲ್ಡಿಂಗ್ ಮಾಡದೇ ಸ್ವೆಟರ್/ಜಾಕೆಟ್ ಹಾಕಿ ಡಗ್ಗೌಟಲ್ಲಿ ಕೂತಿದ್ದಾಗ ಮತ್ತೂ ಕೆಲವರೊಂದಿಗೆ ಮಾತಾಡುವಾಗ ಪಕ್ಕಾ ಬ್ಯುಸನೆಸ್‌ಮನ್ ತರವೇ ಕಾಣುತ್ತಿದ್ದರು..!..

ಸೋ, ಅವರಿಗೆ ಈ ರೀತಿ ಸ್ಟ್ರಗಲ್ ಮಾಡಿ ಒಂದು ಫಿಫ್ಟಿ ಹೊಡೆದು ಸಾಧಿಸಬೇಕಾದದ್ದು ಏನೂ ಇಲ್ಲ. ಆ ಫಿಫ್ಟಿ, ಸೆಂಚುರಿ, ಸ್ಟ್ಯಾಟ್ಸ್, ರೆಕಾರ್ಡ್ಸ್, ಕಪ್ಪು ಚಿಪ್ಪಿಗೆಲ್ಲ ನಾವು 'ಏನೋ ಭಯಂಕರ' ಎಂದು ಮಹತ್ವ ಕೊಡುತ್ತಾ ಕಚ್ಚಾಡಬೇಕೇ ಹೊರತೂ, ಕೊಹ್ಲಿಯವರು ಅದನ್ನೆಲ್ಲ ಬಿಟ್ಟು ಮುಂದೆ ಸಾಗಿ ಯಾವುದೋ ಕಾಲವಾಗಿದೆ. ಒಂದು IPL ಟ್ರೋಫಿ ಬೇಕಿತ್ತೇನೋ, ಅದೂ ಸಿಕ್ಕಿ ಆಗಿದೆ. ಇನ್ನೇನಿದ್ದರೂ, ಅವರು ಆಟವನ್ನು ಎಂಜಾಯ್ ಮಾಡುವುದೇ ಹೊರತೂ ಫಿಫ್ಟಿ ಹೊಡೆದೋ, ಮತ್ತೇನೋ ಮಾಡಿಯೋ ಏನೋ ಸಾಧಿಸಬೇಕು, ಯಾರಿಗೋ ಪ್ರೂವ್ ಮಾಡಬೇಕು ಅನ್ನೋದೆಲ್ಲ ಅವರಿಗೆ ಖಂಡಿತಾ ಇಲ್ಲ. ಅವುಗಳ ಬಗ್ಗೆಯೆಲ್ಲ ಅವರೂ ನಮ್ಮಂತೆಯೇ ಯೋಚಿಸಬಹುದು ಎಂದು ಭಾವಿಸುವುದೇ ಮೂರ್ಖತನ. ಬಹುಶಃ, ಅವರಿಗೆ ಈಗ ಅವರ ಸ್ಟ್ರೈಕ್ ರೇಟ್ ಬಗ್ಗೆ, ಆಟದ ಬಗ್ಗೆ ಯಾರಾದರೂ ಮಾತಾಡಿದರೂ, ವಿಮರ್ಶೆ ಮಾಡಿದರೂ ಅದನ್ನೆಲ್ಲ ಕೇಳಿ ನಗು ಬರಬಹುದೇ ಹೊರತೂ ಮತ್ತೇನೂ ಅನ್ನಿಸಲು ಸಾಧ್ಯವಿಲ್ಲ..!..

ಆ ರೀತಿ ಒಂದು ಇನಿಂಗ್ಸ್, ಒಂದು ಎಸೆತ, ಒಂದು ಶಾಟ್ ಆಧಾರದ ಮೇಲೇ ಅವರನ್ನು ಟ್ರೋಲ್ ಮಾಡುವುದು, ಅವರಿಗೆ ಬೈಯ್ಯುವುದೆಲ್ಲ ನಮ್ಮಂತವರ ಲೆವೆಲ್ಲಿನ ಕೀಳು ಮನಸ್ಥಿತಿಯೇ ಹೊರತೂ ಬೇರೇನೂ ಅಲ್ಲ..!.. 😜

ಮತ್ತೂ ಕೆಲವರು, 'ಹೇಝಲ್ವುಡ್ ಒಂದು ದಿನ ರನ್ ಕೊಟ್ಟ ಅಂತ ಅವನನ್ನು ತೆಗೆದು ಡಫಿಯನ್ನೇ ಆಡಿಸಿದರು' ಎಂಬ ಲೆವೆಲ್ಲಿಗೂ ಮಾತಾಡಿದರು. ಹೇಝಲ್ವುಡ್ ಕೆಲವು ತಿಂಗಳಿನ ನಂತರ, ಇಂಜುರಿಯಿಂದ ಮರಳಿರುವುದು. ಒಂದು ದಿನದ ಗ್ಯಾಪಲ್ಲಿ ಒಮ್ಮೆಲೇ Back to Back ಮ್ಯಾಚಸ್ ಆಡಿಸೋದು ಬೇಡ ಎಂಬ ಕಾರಣಕ್ಕೆ ಅವರಿಗೆ ರೆಷ್ಟ್ ಕೊಡಬಹುದೇ ಹೊರತೂ, ಅವರು ಒಂದು ಮ್ಯಾಚಲ್ಲಿ ರನ್ ಕೊಟ್ಟರು ಅಂತಲ್ಲ. ಹೇಝಲ್ವುಡ್ ಆಡಲು ಸಾಧ್ಯ ಎಂದಾದರೆ, ಒಂದಲ್ಲ ನಾಲ್ಕು ಮ್ಯಾಚಲ್ಲಿ ರನ್ ಕೊಟ್ಟರೂ ಆಡಿಸಿಯೇ ಆಡಿಸುತ್ತಾರೆ, ಅವರ ಅಗತ್ಯ, ಅವರು ಒಳ್ಳೆಯ ಲಯಕ್ಕೆ ಮರಳಬೇಕಾದ ಅಗತ್ಯ ಆರ್ಸೀಬಿಗೆ ಖಂಡಿತಾ ಇದೆ. ದುನಿಯಾದ ಯಾವುದೇ ತಂಡವೇ ಆದರೂ, ಹೇಝಲ್ವುಡ್ ಮತ್ತು ಡಫಿ ನಡುವೆ ಆಯ್ಕೆಯಿಟ್ಟರೆ, ಹೇಝಲ್ವುಡ್‌ರನ್ನೇ ಆಯ್ದುಕೊಳ್ಳುತ್ತದೆ, ಆ ಬಗ್ಗೆ ಸಂಶಯ ಬೇಡ..!..

ಡಫಿ ಒಳ್ಳೆಯ ಬೌಲರ್ ಅಲ್ಲ ಅಂತಲ್ಲ, ಬಟ್, ಅವರಿನ್ನೂ ಪ್ರೂವ್ ಮಾಡಬೇಕು. ಹೇಝಲ್ವುಡ್, ಆಲ್ರೆಡಿ ಪ್ರೂವನ್.. ಅಷ್ಟೇ ವ್ಯತ್ಯಾಸ..!..

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0