ದಲಾಯಿ ಲಾಮಾ ಭೇಟಿ ಮಾಡಿ ಆಶೀರ್ವಾದ ಪಡೆದ ಸಂಸದ ಕಾಗೇರಿ
ಆಪ್ತ ನ್ಯೂಸ್ ಶಿರಸಿ:
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಟಿಬೆಟಿಯನ್ ಆಧ್ಯಾತ್ಮಿಕ ಗುರು, ಪರಮಪೂಜ್ಯ ದಲಾಯಿ ಲಾಮಾ ಅವರನ್ನು ಲಡಾಖ್‌ನ ಲೇಹ್‌ನಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಕಾಗೇರಿ, "ವಿಶ್ವ ಶಾಂತಿ ಹಾಗೂ ಸೌಹಾರ್ದತೆಯ ಮೂರ್ತಿ ಸ್ವರೂಪರಾಗಿರುವ ಟಿಬೆಟಿಯನ್ ಆಧ್ಯಾತ್ಮಿಕ ಗುರುಗಳು, ಪರಮಪೂಜ್ಯ ದಲಾಯಿ ಲಾಮಾ ಅವರನ್ನು ಇಂದು ಲೇಹ್‌ನಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡೆನು. ಜಗತ್ತಿಗೆ ಕರುಣೆ ಮತ್ತು ಅಹಿಂಸೆಯ ಸಂದೇಶ ಸಾರುವ ಅವರೊಂದಿಗೆ ಕಳೆದ ದಿವ್ಯ ಕ್ಷಣಗಳು ಅತ್ಯಂತ ಸ್ಮರಣೀಯವಾಗಿವೆ" ಎಂದು ತಿಳಿಸಿದ್ದಾರೆ.
ವಿಶ್ವಕ್ಕೆ ಶಾಂತಿ, ಕರುಣೆ ಹಾಗೂ ಅಹಿಂಸೆಯ ಸಂದೇಶ ಸಾರುತ್ತಿರುವ ದಲಾಯಿ ಲಾಮಾ ಅವರೊಂದಿಗೆ ನಡೆದ ಈ ಭೇಟಿಯು ವಿಶೇಷ ಮಹತ್ವ ಪಡೆದಿದ್ದು, ಕಾಗೇರಿ ಅವರು ಅವರ ಆಶೀರ್ವಾದ ಪಡೆಯುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



