ಸುಂದರವಾಗಿ ನಡೆಯಿತು ಅಕ್ಷರನಾದ ಬಳಗದ ವಾರ್ಷಿಕೋತ್ಸವ

Nov 10, 2025 - 19:59
Nov 10, 2025 - 20:15
 0  17
ಸುಂದರವಾಗಿ ನಡೆಯಿತು ಅಕ್ಷರನಾದ ಬಳಗದ ವಾರ್ಷಿಕೋತ್ಸವ

ಆಪ್ತ ನ್ಯೂಸ್‌ ಬೆಂಗಳೂರು:

ಅಕ್ಷರನಾದ ಬಳಗದ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಸಾರ್ಥಕವಾಗಿ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತ್ಯ ಲೋಕದ ಹಿರಿಯರು ಶ್ರೀಮತಿ ಪಾರ್ವತಿ ಸಾಹಿತಿ ವಹಿಸಿಕೊಂಡಿದ್ದು, ರಾಜೇಗೌಡ, ವೆಂಕಟೇಶ್ ಸಂಪ, ಲೋಕೇಶ್ ಟಿ.ಕೆ., ಡಾ. ಇಮ್ಯಾನ್ಯುಯಲ್ ಸೇರಿದಂತೆ ಅನೇಕ ಗಣ್ಯರು ವೇದಿಕೆಯನ್ನು ಅಲಂಕರಿಸಿದ್ದರು.

ಅಕ್ಷರ ನಾದ ಸಂಸ್ಥಾಪಕರಾದ ಶ್ರುತಿ ಮಧುಸೂದನ್ ಅವರು ಪ್ರಾಸ್ತಾವಿಕ ನುಡಿಯನ್ನು ನೀಡಿದರು. ತೇಜಸ್ವಿನಿ ಸುನಿಲ್ ಕಾರ್ಯಕ್ರಮದ ಬೆನ್ನೆಲುಬಾಗಿ ಎಲ್ಲಾ ವ್ಯವಸ್ಥೆಗಳನ್ನು ನಿಭಾಯಿಸಿದ್ದು, ತಾರಾ ಸಂತೋಷ ಅವರು ಅತ್ಯುತ್ತಮ ನಿರೂಪಣೆಯಿಂದ ಕಾರ್ಯಕ್ರಮಕ್ಕೆ ಜೀವ ತುಂಬಿದರು.

ಕಾರ್ಯಕ್ರಮದ ವೇಳೆ ಸುಮಾರು 38 ಲೇಖಕರು ಹಾಗೂ ಕವಿಗಳ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಹೊಸ ಬರಹಗಾರರು ಬೆಳೆಯಬೇಕು, ಕನ್ನಡ ಸಾಹಿತ್ಯಕ್ಕೆ ಇನ್ನಷ್ಟು ಶ್ರೇಯಸ್ಸು ದೊರಕಬೇಕು ಎಂಬ ಆಶಯವನ್ನು ವೇದಿಕೆಯಲ್ಲಿದ್ದ ಗಣ್ಯರು ಹಂಚಿಕೊಂಡರು.

ಅದೇ ವೇಳೆ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಕ್ಷರನಾದ ಬಳಗವು ತನ್ನ ಎರಡನೇ ವರ್ಷದ ವಾರ್ಷಿಕೋತ್ಸವವನ್ನು ಹರ್ಷೋದ್ಗಾರದಿಂದ ಆಚರಿಸಿತು.

ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿ, ಕನ್ನಡ ಸಾಹಿತ್ಯದ ಪ್ರಗತಿಗೆ ಅಕ್ಷರನಾದ ನೀಡುತ್ತಿರುವ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0