ದಲಾಯಿಲಾಮಾರನ್ನು ಭೇಟಿ ಮಾಡಿದ ಕಿರಣ್‌ ರಿಜಿಜು, ಕಾಗೇರಿ

Dec 28, 2025 - 14:17
 0  50
ದಲಾಯಿಲಾಮಾರನ್ನು ಭೇಟಿ ಮಾಡಿದ ಕಿರಣ್‌ ರಿಜಿಜು, ಕಾಗೇರಿ

ಆಪ್ತ ನ್ಯೂಸ್‌ ಮುಂಡಗೋಡ:

ಮುಂಡಗೋಡಿನ ದ್ರೆಪುಂಗ್ ಲೋಸೆಲಿಂಗ್ ಮಾನೆಸ್ಟ್ರಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಬೌದ್ಧ ಧರ್ಮಗುರು ಪವಿತ್ರ ದಲೈ ಲಾಮಾ ಅವರನ್ನು  ಭಾನುವಾರ ಭೇಟಿಯಾದರು.

ಈ ಸಂದರ್ಭದಲ್ಲಿ ಪವಿತ್ರ ದಲೈ ಲಾಮಾರ 90ನೇ ಜನ್ಮದಿನದ ಸ್ಮರಣಾರ್ಥ ಆಯೋಜಿಸಲಾದ ಪಂಥಭೇದರಹಿತ ಪಂಡಿತರ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಕಿರಣ್ ರಿಜಿಜು, ದಲೈ ಲಾಮಾರ ಆಶೀರ್ವಾದ ಪಡೆಯಲು ಅವಕಾಶ ದೊರೆತಿದ್ದು ತನ್ನಿಗೆ ಗೌರವವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಉಪಸ್ಥಿತರಿದ್ದರು.

ಭಗವದ್ವೀತೆ ಹಾಗೂ ಅನುಭವ ಮಂಟಪ ಚಿತ್ರಪಟ ಕಾಣಿಕೆ

ಮುಂಡಗೋಡಿನ ಟಿಬೇಟಿಯನ್ ವಸಾಹುತಿಯಲ್ಲಿ ಟಿಬೇಟಿಯನ್ ಮಹಾಗುರು  ಕರುಣೆಯ ಬೋಧಿಸತ್ವ (ಅವಲೋಕಿತೇಶ್ವರ) 14ನೇ ದಲೈ ಲಾಮಾ ಟೆನ್ಜಿನ್ ಗ್ಯಾಟ್ಸೊ ರವರ ದರ್ಶನಗೈದು, ಅವರಿಗೆ ನಾವು ಮಾಡುತ್ತಿರುವ "ಭಗವದ್ಗೀತಾ ಅಭಿಯಾನ" ದಡಿ "ಭಗವದ್ಗೀತೆ"ಯನ್ನು ಹಾಗೂ ವಿಶ್ವದ ಪ್ರಥಮ ಸಂಸತ್ತು "ಅನುಭವ ಮಂಟಪ"ದ ಚಿತ್ರಪಟವನ್ನು ಉತ್ತರಕನ್ನಡಜಿಲ್ಲಾರೈತಮೋರ್ಚಾದ ಶಿವಲಿಂಗಯ್ಯಅಲ್ಲಯ್ಯನವರಮಠ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮುಂಡಗೋಡ ಬಿಜೆಪಿ ಮಂಡಲದ ಅಧ್ಯಕ್ಷರಾದ ಮಂಜುನಾಥ ಪಾಟೀಲ ರವರು ಹಾಗೂ ಬಿಜೆಪಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು...

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0