ಶ್ರೀಗಂಧದ ಮರ ಕಡಿದು ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ
ಆಪ್ತ ನ್ಯೂಸ್ ಸಾಗರ:
ತಾಲೂಕಿನ ಬರದವಳ್ಳಿ ಗ್ರಾಮದ ಸರ್ವೇ ನಂಬರ್ ೭೦ರಲ್ಲಿ ಅಕ್ರಮವಾಗಿ ಶ್ರೀಗಂಧದ ಮರ ಕಡಿತಲೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ. ಗ್ರಾಮಸ್ಥರು ನೀಡಿದ ಮಾಹಿತಿ ಆಧರಿಸಿ ಸಾಗರ ವಲಯದ ಆರ್‌ಎಫ್‌ಓ ಅಣ್ಣಪ್ಪ, ಡಿಆರ್‌ಎಫ್‌ಓ ಟಿ.ಪಿ. ನರೇಂದ್ರ ಕುಮಾರ್ ನೇತೃತ್ವದ ತಂಡ ವಶಕ್ಕೆ ಪಡೆದಿದೆ.
೩೫ ಕೆಜಿ ಗಂಧದ ತುಂಡನ್ನು ಕಡಿದು ಸಾಗಿಸಲು ಯತ್ನಿಸಿದ್ದ ಸಾಗರದ ಶಿವಪ್ಪನಾಯಕ ನಗರದ ೫೬ ವರ್ಷದ ಮುಬಾರಕ್‌ನನ್ನ ಗ್ರಾಮಸ್ಥರ ಸಹಾಯದಿಂದ ಪೊಲೀರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಜೊತೆಗೆ ಮರ ಕಡಿಯಲು ಉಪಯೋಗಿಸಿದ್ದ ವಸ್ತುಗಳು, ಮಾಲು ಸಾಗಿಸಲು ಬಳಸಿದ್ದ ಬೈಕ್ ಕೂಡ ವಶಪಡಿಸಿಕೊಳ್ಳಲಾಗಿದೆ. ೩೫ ಕೆಜಿ ಗಂಧದ ಮಾರುಕಟ್ಟೆ ಮೌಲ್ಯ ಸುಮಾರು ೧.೭೦ ಲಕ್ಷ ರೂ. ಅಂತ ಪೊಲೀಸರು ಅಂದಾಜಿಸಿದ್ದಾರೆ. ಬೀಟ್ ಫಾರೆಸ್ಟರ್ ಸುರೇಶ್, ಹೇಮಂತ್, ಲತಾ, ಚಾಲಕ ಲೋಕೇಶ್ ಹಾಗೂ ಪೊಲೀಸ್ ಸಂಚಾರಿ ದಳದ ಪಿಎಸ್‌ಐ ವಿನಾಯಕ, ಸಿಬ್ಬಂದಿಗಳಾದ ವಿಶ್ವ, ಚಂದ್ರು ಜಂಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಬರದವಳ್ಳಿಗೆ ಅಕೇಶಿಯಾ ಮರ ಕಡಿಯುವವರ ಜೊತೆ ಕೆಲಸಗಾರನಾಗಿ ಮುಬಾರಕ್ ಒಂದೆರಡು ದಿನ ಹೋಗಿಬಂದಿದ್ದನAತೆ. ಆಗ ಗೋಮಾಳವೊಂದರ ಬದಿಯಲ್ಲಿ ಗಂಧದ ಮರ ಇರೋದನ್ನು ಗುರುತಿಸಿಟ್ಟುಕೊಂಡಿದ್ದ. ಇದನ್ನು ಕಡಿದು ಸಾಗಹಾಕಲು ಸ್ಕೆಚ್ ಹಾಕಿ ಬುಧವಾರ ಬೆಳಗ್ಗೆ ೧೦ ಗಂಟೆ ಸುಮಾರಿಗೆ ಬೈಕ್‌ನಲ್ಲಿ ಸಾಗರದ ಮನೆಯಿಂದ ಊಟ ತೆಗೆದುಕೊಂಡು ಬರದವಳ್ಳಿಗೆ ಬಂದಿದ್ದಾನೆ. ಗಂಧದ ಮರ ಇರೋದು ಸ್ವಲ್ಪ ನಿರ್ಜನ ಜಾಗದಲ್ಲಿ. ಹೀಗಾಗಿ ಮರ ಕಡಿದು ಮುಗಿಸೋವರೆಗೂ ಇವನ ಕಾರ್ಯಾಚರಣೆ ಊರವರ ಗಮನಕ್ಕೆ ಬಂದಿರಲಿಲ್ಲ. ಮಧ್ಯಾಹ್ನದ ವೇಳೆಗೆ ಸ್ಥಳೀಯರಿಗೆ ಗಂಧದ ಮರ ಕಡಿದಿದ್ದು ಗೊತ್ತಾಗಿ ಇವನನ್ನ ತಡೆಹಿಡಿದು ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸೆರೆ ಸಿಕ್ಕ ಬಳಿಕ ಬಾಯಿಗೆ ಬಂದAತೆ ಒಂದಷ್ಟು ಸುಳ್ಳನ್ನೂ ಪುಂಗಿದ್ದಾನೆ. ಆದರೆ ಅಂತಿಮವಾಗಿ ಫಾರೆಸ್ಟ್ ಮತ್ತು ಖಾಕಿ ಖದರ್‌ಗೆ ಸತ್ಯ ಬಾಯ್ಬಿಟ್ಟಿದ್ದಾನೆ. ಇದೇ ಮನುಷ್ಯ ಕೆಲ ತಿಂಗಳ ಹಿಂದೆ ಹಕ್ರೆ, ಮುಂಗಳೀಮನೆ ಭಾಗದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾನೆ ಅಂತ ಸ್ಥಳೀಯರು ದೂರು ನೀಡಿದ್ದರು ಅನ್ನೋ ಮಾಹಿತಿಯೂ ಬಹಿರಂಗಗೊAಡಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



