ಕೈಗಾರಿಕಾ ಅರಿವು ಕಾರ್ಯಕ್ರಮ
ಆಪ್ತ ನ್ಯೂಸ್ ಸಾಗರ:
ನೇರ ಉತ್ಪಾದನಾ ಸ್ಪರ್ಧಾತ್ಮಕ ಯೋಜನೆ ಕುರಿತು ಮಾಹಿತಿ, ಬ್ಯಾಂಕ್‌ನಿAದ ಸಾಲ-ಸೌಲಭ್ಯ ಇನ್ನಿತರೆ ಮಾಹಿತಿ ನೀಡುವ ಕುರಿತು ಝಡ್ ಇ.ಡಿ. ಲೀನ್ ಯೋಜನೆಯಡಿ ಒಂದು ದಿನದ ಕೈಗಾರಿಕಾ ಅರಿವು ಕಾರ್ಯಕ್ರಮ ಅ. ೩೧ರಂದು ಶೃಂಗೇರಿ ಶಂಕರಮಠದ ಭಾರತೀತೀರ್ಥ ಸಭಾಭವನದಲ್ಲಿ ನಡೆಯಲಿದೆ ಎಂದು ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘದ ಕಾರ್ಯದರ್ಶಿ ಎಸ್. ವಿಶ್ವೇಶ್ವರಯ್ಯ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಮೊಗ್ಗ ಜಿಲ್ಲಾ ಇಂಡಸ್ಟಿçÃಸ್ ಅಸೋಶಿಯೇಷನ್ ಸಂಯುಕ್ತವಾಗಿ ಕಾರ್ಯಕ್ರಮ ಅಯೋಜಿಸಿದ್ದು, ಅಂದು ಬೆಳಗ್ಗೆ ೧೦.೩೦ಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಉದ್ಘಾಟಿಸಲಿದ್ದು, ಜೋಯಿಸ್ ರಾಮಾಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ಶಿವಾನಂದ ಆಚಾರ್, ಆರ್. ಗಣೇಶ್, ಎ.ಎಂ.ರಜನಿಕಾAತ್, ಎಸ್.ಆರ್.ದತ್ತಾತ್ರಿ, ಬಿ.ಆರ್.ಉಮೇಶ್ ಮೊದಲಾದವರು ಇರಲಿದ್ದಾರೆ. ಕಾರ್ಯಾಗಾರದಲ್ಲಿ ಎಂದು ಹೇಳಿದರು.
ಸೂಕ್ಷö್ಮ ಸಣ್ಣ ಕೈಗಾರಿಕೆಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಯೋಜಿಸಲಾಗಿದೆ. ಉದ್ದಿಮೆಗಳ ಸಾಮರ್ಥ್ಯ ಹೆಚ್ಚಬೇಕು. ದೀರ್ಘಾವಧಿಯ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆ ಸಾಧಿಸಲು ಅಗತ್ಯವಾದ ಜ್ಞಾನ ಕೌಶಲ್ಯ ಸಿಗಲಿದೆ. ಲೀನ್ ಮತ್ತು ಝಡ್ ಪ್ರಮಾಣೀಕರಣಕ್ಕೆ ಸಂಬAಧಿಸಿದAತೆ ಸ್ಥಳದಲ್ಲೇ ನೊಂದಾಯಿಸಲು ಸೌಲಭ್ಯವಿದ್ದು, ಉದ್ದಿಮೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.
ರಜನಿಕಾಂತ್, ಶಿವಾನಂದ ಆಚಾರ್, ಕಾರ್ತಿಕ್, ರಾಘವೇಂದ್ರ, ನಟರಾಜ್ ಮೊದಲಾದವರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0



