ನವೆಂಬರ್ ೯ರಂದು ಕಾಗೋಡು ತಿಮ್ಮಪ್ಪರಿಗೆ ಮಲೆನಾಡು ಲೋಹಿಯಾ ಪ್ರಶಸ್ತಿ ಪ್ರದಾನ

Nov 7, 2025 - 11:43
 0  2
ನವೆಂಬರ್ ೯ರಂದು ಕಾಗೋಡು ತಿಮ್ಮಪ್ಪರಿಗೆ ಮಲೆನಾಡು ಲೋಹಿಯಾ ಪ್ರಶಸ್ತಿ ಪ್ರದಾನ

ಆಪ್ತ ನ್ಯೂಸ್ ಸಾಗರ:

ಮಲೆನಾಡು ಲೋಹಿಯಾ ಪ್ರಶಸ್ತಿಯನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪರಿಗೆ ನ. ೯ರಂದು ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಾಂಧಿನಗರದ ಸಂಗೊಳ್ಳಿ ರಾಯಣ್ಣ ರಂಗಮAದಿರದಲ್ಲಿ ಪ್ರದಾನ ಮಾಡಲಾಗುತ್ತಿದೆ ಎಂದು ಗಾಂಧಿನಗರ ಯುವಜನ ಸಂಘದ ಅಧ್ಯಕ್ಷ ಸಂತೋಷ್ ಸದ್ಗುರು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಘವು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಜನ್ಮದಿನ ಸಂದರ್ಭದಲ್ಲಿ ಪ್ರಶಸ್ತಿ ಘೋಷಣೆ ಮಾಡಿದ್ದು, ಅದನ್ನು ನ. ೯ರಂದು ಸಂಜೆ ೭ಕ್ಕೆ ಪ್ರದಾನ ಮಾಡಲಾಗುತ್ತಿದೆ. ರಾಜ್ಯೋತ್ಸವ ಅಂಗವಾಗಿ ನಗರವ್ಯಾಪ್ತಿಯ ವಿವಿಧ ಸಂಘಸAಸ್ಥೆಗಳು, ಅಧಿಕಾರಿಗಳನ್ನು ಒಳಗೊಂಡ ತಂಡಗಳ ನಡುವೆ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ಸೌಹಾರ್ದ ಕ್ರಿಕೇಟ್ ಪಂದ್ಯಾವಳಿ ನಡೆಯಲಿದ್ದು, ವಿಜೇತ ತಂಡಕ್ಕೆ ಆಕರ್ಷಕ ನಗದು ಬಹುಮಾನ ಇರುತ್ತದೆ. ದೀಪಾವಳಿ ಸಂದರ್ಭದಲ್ಲಿ ಗಾಂಧಿನಗರ ಭಾಗದ ಮಹಿಳೆಯರಿಗೆ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುತ್ತದೆ. ನಂತರ ಸ್ವರಾಂಜಲಿ ತಂಡದಿAದ ಸುಗಮ ಸಂಗೀತ ಕಾರ್ಯಕ್ರಮ ಇದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.
ಗೋಷ್ಟಿಯಲ್ಲಿ ರಾಮಣ್ಣ, ರಾಘು, ರಾಮು, ಡಾ. ಶ್ರೀಪಾದ ಹೆಗಡೆ, ರವಿ, ಪ್ರವೀಣ್ ಇನ್ನಿತರರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0