ತ್ಯಾಗಲಿ ಸೇವಾ ಸಹಕಾರಿ ಸಂಘ (ನಾಣಿಕಟ್ಟಾ ಸೊಸೈಟಿ)ದ ಅಧ್ಯಕ್ಷ ಎನ್‌ ಬಿ ಹೆಗಡೆ ಮತ್ತಿಹಳ್ಳಿ ಇನ್ನಿಲ್ಲ

Feb 21, 2026 - 21:30
 0  288
ತ್ಯಾಗಲಿ ಸೇವಾ ಸಹಕಾರಿ ಸಂಘ (ನಾಣಿಕಟ್ಟಾ ಸೊಸೈಟಿ)ದ ಅಧ್ಯಕ್ಷ ಎನ್‌ ಬಿ ಹೆಗಡೆ ಮತ್ತಿಹಳ್ಳಿ ಇನ್ನಿಲ್ಲ

ಆಪ್ತ ನ್ಯೂಸ್‌ ಕಾನಸೂರು: 

ಸಿದ್ದಾಪುರ ತಾಲೂಕಿನ ಪ್ರತಿಷ್ಠಿತ ಸೇವಾ ಸಹಕಾರಿ ಸಂಘಗಳಲ್ಲೊಂದಾಗಿರುವ ನಾಣಿಕಟ್ಟಾ ಸಹಕಾರಿ ಸಂಘದ ಹಾಲಿ ಅಧ್ಯಕ್ಷರಾಗಿದ್ದ, ದಶಕಗಳಿಂದ ಸಂಘವನ್ನು ಮುನ್ನಡೆಸಿದ್ದ ಎನ್ ಬಿ ಹೆಗಡೆ ಮತ್ತಿಹಳ್ಳಿ ಇಂದು ದೈವಾದೀನರಾಗಿದ್ದಾರೆ.
ತಾಲೂಕಿನ ಮತ್ತಿಹಳ್ಳಿ ಗ್ರಾಮದವರಾದ ಎನ್‌ ಬಿ ಹೆಗಡೆ ನಾಣಿಕಟ್ಟಾ ಸೇವಾ ಸಹಕಾರಿ ಸಂಘವನ್ನು ದಶಕಗಳಿಂದ ಮುನ್ನಡೆಸಿದ್ದರು.

ಸಂಸದ ಕಾಗೇರಿ ಶೃದ್ಧಾಂಜಲಿ
ಎನ್‌ ಬಿ ಹೆಗಡೆ ಮತ್ತಿಹಳ್ಳಿ ಅವರ ನಿಧನಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿದ್ದಾರೆ.

ತ್ಯಾಗಲಿ ಸೇವಾ ಸಹಕಾರಿ ಸಂಘದ ಸುದೀರ್ಘ ಕಾಲದ ಅಧ್ಯಕ್ಷರಾಗಿ, ಸಹಕಾರಿ ಕ್ಷೇತ್ರದ ಮೇರು ವ್ಯಕ್ತಿತ್ವವಾಗಿದ್ದ ಶ್ರೀ ಎನ್. ಬಿ. ಹೆಗಡೆ ಅವರ ನಿಧನಕ್ಕೆ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅವರು ಕೇವಲ ಸಹಕಾರಿ ಕ್ಷೇತ್ರವಷ್ಟೇ ಅಲ್ಲದೆ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ರಂಗಗಳಲ್ಲಿಯೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು, ಸಮಾಜದ ಏಳಿಗೆಗೆ ಶ್ರಮಿಸಿದವರು. ಅವರ ಅನುಭವದ ನಾಯಕತ್ವ ಮತ್ತು ಮಾರ್ಗದರ್ಶನ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿತ್ತು.

​ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಮತ್ತು ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0