ಶಿರಸಿಯಲ್ಲಿ ಸೌಮ್ಯ ಸೌರಭ ಚಲನಚಿತ್ರ ಚಿತ್ರೀಕರಣ ಪೂರ್ಣ
ಆಪ್ತ ನ್ಯೂಸ್ ಶಿರಸಿ:
ಬೆಂಗಳೂರಿನ ಶ್ವೇತಾ ಎಸ್ ಆರಾಧ್ಯ ಅವರ ಬೆಳಕು ಸ್ಟುಡಿಯೋದ ನೂತನ ಕನ್ನಡ ಚಲನಚಿತ್ರ ಸೌಮ್ಯ ಸೌರಭದ ಚಿತ್ರೀಕರಣ ನಗರದ ಹೊರವಲಯದಲ್ಲಿ ಪೂರ್ಣಗೊಂಡಿತು.
ಸುರೇಶ ಹೆಗಡೆ ಅವರ ತವರು ಮನೆ ತೋಟದಲ್ಲಿ ಪ್ರಾರಂಭವಾದ ಚಿತ್ರೀಕರಣವು ಕೊರ್ಲಕಟ್ಟದ ಮುಕ್ತೇಶ ಗೌಡರಮನೆ, ಕಾಗೇರಿ ಕತ್ರಿಯಲ್ಲಿ ಶೂಟಿಂಗ್ ನಡೆಸಲಾಯಿತು.
ಈ ಚಿತ್ರದಲ್ಲಿ ಬಹುಪಾಲು ಶಿರಸಿ ಯ ಕಲಾವಿದರೇ ನಟಿಸಿದ್ದಾರೆ. ಕೆಲವರು ಪ್ರಥಮ ಬಾರಿಗೆ ಕೆಮರಾ ಎದುರಿಸಿದ್ದರು. ೯೦ ನಿಮಿಷದ ಕಲಾತ್ಮಕ ಸಿನೇಮಾದಲ್ಲಿ ಅಭಿರಾಮ ಹೆಗಡೆ ನಾಯಕ ನಟನಾಗಿ, ಸುಹಾನಿ ಗೌಡ ನಾಯಕಿ ನಟಿಯಾಗಿ ನಿರ್ವಹಿಸಿದ್ದರು. ಶ್ರೀಪತಿ ಹೆಗಡೆ ಮತ್ತಿಘಟ್ಟ, ಪ್ರವೀಣ್ ಹೆಗಡೆ ಬಾಳೆಗದ್ದೆ, ನಿತಿನ್ ನೀಲೆಕಣಿ, ರಮೇಶ ಹಳೆಕಾನಗೋಡ, ಗಾಯತ್ರಿ ರಾಘವೇಂದ್ರ, ಪ್ರಜ್ವಲ್ ಅಂಬರ್ಕರ್, ಕಿರಣ್ ಭೈರುಂಬೆ, ಸುಬ್ರಾಯ ಕೆರೆಕೊಪ್ಪ, ಋತ್ವಿಕ್ ವಿನಾಯಕ ಶೇಟ್, ರಿಶಾಂಕ ವಿನಾಯಕ ಶೇಟ್, ದೀಪ್ತಿ ನಾಗರಾಜ ನಾಯಕ್ ಮೊದಲಾದವರು ಅಭಿನಯಿಸಿದ್ದರು.
ಈ ಚಿತ್ರಕ್ಕೆ ಪ್ರಶಾಂತ್ ಛಾಯಾಗ್ರಹಣ, ರಾಜ್ ಮಂಜು ಕಲಾ ನಿರ್ದೇಶನ, ಶಶಿಕಾಂತ್ ಆರಾಧ್ಯ ಬೆಳಕು ಸಂಯೋಜನೆ, ಸಂಕಲನ, ಮತ್ತು ನಿರ್ದೇಶನವಿದೆ. ಚಂದ್ರು ಉಡುಪಿ ಪ್ರಸಾಧನ ವ್ಯವಸ್ಥೆ ಮಾಡಿದ್ದರು.
ಈ ಚಿತ್ರವು ಮಧುರಪ್ರಿಯ ಅವರು 1972ರಲ್ಲಿ ಪ್ರಕಟಿಸಿರುವ ಸೌಮ್ಯ ಸೌರಭ ನಾಟಕವನ್ನು ಆಧರಿಸಿದ್ದಾಗಿದ್ದು, ಇದರ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಹಾಡನ್ನು ಅವರೇ ರಚಿಸಿದ್ದಾರೆ. ಸುಮಾರು 15ದಿವಸಗಳ ಒಂದೇ ಹಂತದಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು ವಿಶೇಷವಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
1