ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು: ಮಹಾಬಲೇಶ್ವರ ನಾಯ್ಕ್
ಆಪ್ತ ನ್ಯೂಸ್ ಸಾಗರ:
ಜಗತ್ತು ತರಗತಿಯ ಓದಿನ ಆಚೆ ವಿಸ್ತರಿಸಿಕೊಳ್ಳುವವರನ್ನು ಹೆಚ್ಚು ಆದ್ಯತೆಯಿಂದ ತನ್ನೊಂದಿಗೆ ನಡೆಸುತ್ತದೆ. ಇಂತಹ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳುವುದರತ್ತ ವಿದ್ಯಾರ್ಥಿಗಳು ತೀವ್ರ ಗಮನ ಕೊಡಬೇಕು ಎಂದು ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಮಹಾಬಲೇಶ್ವರ ನಾಯ್ಕ್ ಅಭಿಪ್ರಾಯ ಪಟ್ಟರು.
ತಾಲೂಕಿನ ಎಡಜಿಗಳೇಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಕ್ಕೇರಿ ಪ್ರೌಢಶಾಲೆಯಲ್ಲಿ ರಾಷ್ಟಿçÃಯ ಏಕತಾ ದಿವಸದ ಅಂಗವಾಗಿ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟು, ಬಹುಮಾನ ವಿತರಿಸಿ ಮಾತನಾಡಿದ ಅವರು, ಸಾಮಾನ್ಯ ಜ್ಞಾನದ ಅರ್ಜನೆಗೆ ಈಗ ನೂರು ದಾರಿಗಳಿವೆ. ಮಕ್ಕಳು ನಿರಂತರವಾಗಿ ದಿನಪತ್ರಿಕೆ ಓದು, ಟಿವಿ ನ್ಯೂಸ್ ಚಾನೆಲ್ ವೀಕ್ಷಿಸಬೇಕು. ಎಫ್‌ಎಂ, ಯೂಟ್ಯೂಬ್‌ಗಳನ್ನು ಸಮರ್ಪಕವಾಗಿ ಬಳಸಿಕೊಂಡಷ್ಟೂ ಅನುಕೂಲವೇ ಜಾಸ್ತಿ ಎನ್ನುವುದನ್ನು ಮಕ್ಕಳು ನೆನಪಿನಲ್ಲಿಟ್ಟುಕೊಳ್ಳಬೇಕು. ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಉಳಿವಿನ ವಿಚಾರವಾಗಿ ಹೋರಾಡುತ್ತಿದ್ದಾರೆ. ಅದಕ್ಕೆ ನಿರಂತರ ಅಧ್ಯಯನ ಅನಿವಾರ್ಯ. ಗ್ರಾಮೀಣ ಶಾಲೆಗಳಲ್ಲಿನ ಪ್ರಶಾಂತ ವಾತಾವರಣದಲ್ಲಿ ಓದುವ ಚಟುವಟಿಕೆಗೆ ಪೂರಕವಾದ ಹೆಚ್ಚು ಅಂಶಗಳಿವೆ. ಅವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಹೆಚ್ಚಿನ ಸಾಧನೆಗೆ ಪ್ರಯತ್ನಿಸಬೇಕು ಎಂದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ. ರಜನೀಶ್ ಮಾತನಾಡಿ, ಆರಕ್ಷಕರು ಜನರೊಂದಿಗೆ ಬೆರೆಯುವ ಪರಿಕಲ್ಪನೆ ಸ್ವಾಗತಾರ್ಹ. ಈ ಹಿನ್ನೆಲೆಯಲ್ಲಿ ಮನೆಮನೆಗೆ ಪೊಲೀಸ್ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಮಹಾಬಲೇಶ್ವರ ನಾಯ್ಕ್ ತರಹದವರು ತಾವೇ ರಸಪ್ರಶ್ನೆಯ ಪ್ರಶ್ನೆಗಳನ್ನು ಸಂಯೋಜಿಸಿ, ಬಹುಮಾನ ಯೋಜನೆ ಘೋಷಿಸಿ ತಾವೇ ಪುಸ್ತಕಗಳನ್ನು ಪುರಸ್ಕಾರವಾಗಿ ನೀಡುವುದು ಒಳ್ಳೆಯ ನಿರ್ಣಯ ಎಂದರು.
ಗ್ರಾಮಾAತರ ಠಾಣೆ ಕಾನ್ಸ್ಟೇಬಲ್ ವಿಶ್ವನಾಥ ಇತರರು ಇದ್ದರು. ಪ್ರಥಮ ಸ್ಥಾನವನ್ನು ೧೦ನೇ ತರಗತಿಯ ಪ್ರತೀಕ್ಷಾ ಪಡೆದರೆ ೯ನೇ ತರಗತಿಯ ತನ್ಮಯ್ ಹಾಗೂ ವೈ.ಎ. ರಕ್ಷಾ ಉಳಿದೆರಡು ಬಹುಮಾನ ಪಡೆದರು. ಬಿ.ಸಿ. ಮಮತಾ ಸ್ವಾಗತಿಸಿದರು. ಎಸ್.ಜಿ.ಶ್ರೀಕಾಂತ್ ಕಾರ್ಯಕ್ರಮ ನಿರ್ವಹಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



