ಸಾಗರ ಪೇಟೆ ಠಾಣೆಯ ಪೊಲೀಸರ ಮಿಂಚಿನ ಕಾರ್ಯಾಚರಣೆ: ಚಿನ್ನದ ಒಡವೆ ಕದ್ದ ಆರೋಪಿ 24 ಗಂಟೆಯಲ್ಲೇ ಅರೆಸ್ಟ್
ಆಪ್ತ ನ್ಯೂಸ್ ಸಾಗರ:
ಸಾಗರ ಪೇಟೆ ಠಾಣೆಯ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 2 ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ 44 ಗ್ರಾಂ ತೂಕದ ಅಂದಾಯು 4,48,000 ಮೌಲ್ಯದ ಬಂಗಾರದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತಂತೆ ಬುಧವಾರದಂದು ಸಾಗರ ಪಟ್ಟಣ ಠಾಣೆಯಲ್ಲಿ ಸಾಗರ ಸಹಾಯಕ ಪೊಲೀಸ್ ಅಧೀಕ್ಷಕರಾದಂತ ಡಾ.ಬೆನಕ ಪ್ರಸಾದ್ ಬುಧವಾರ ಬುಧವಾರ ಸಂಜೆ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಆಗಸ್ಟ್ 9ರಂದು ವಸಂತ ಲಕ್ಷ್ಮೀ ಎಂಬುವರು ಮನೆಯ ದೇವರ ಕೋಣೆಯಲ್ಲಿದ್ದಂತ 24 ಗ್ರಾಂ ತೂಕದ 2,30,000 ಮೌಲ್ಯದ ಬಂಗಾರದ ಸರವನ್ನು ಕಳ್ಳತನ ಮಾಡಿದ್ದಾಗಿ ದೂರು ನೀಡಿದ್ದರು.
ಈ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಪ್ರಕರಣ ದಾಖಲಾದಂತ 24 ಗಂಟೆಯಲ್ಲೇ ಸಾಗರದ ನಿವಾಸಿಗಳಾದ ಆರೋಪಿ ಗಳಾದ ದರ್ಶನ್, ಅಶೋಕ್ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ 23 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದರು.
ಇನ್ನೂ ಅಕ್ಟೋಬರ್28 ರಂದು ನಯನ ಎಂಬುವರು ಕೆ ಎಸ್ ಆರ್ ಟಿಸಿ ಬಸ್ಸಿನಲ್ಲಿ ತೆರಳೋದಕ್ಕೆ ನಿಲ್ದಾಣದಲ್ಲಿ ನಿಂತುಕೊಂಡಿದ್ದಾಗ, ಬಸ್ ಹತ್ತುವ ಸಂದರ್ಭದಲ್ಲಿ ತಮ್ಮ ಬ್ಯಾಗಿನಲ್ಲಿದ್ದಂತ 2 ಗ್ರಾಂ ತೂಕದ ಒಂದು ಜೊತೆ ಕಿವಿಯೋಲೆ, 20 ಗ್ರಾಂ ತೂಕದ ನೆಕ್ಲೆಸ್ ಸರ ಸೇರಿದಂತೆ 1,73,000 ಮೌಲ್ಯದ ಒಡವೆಗಳನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ನೀಡಿದಂತ ದೂರಿನ ಹಿನ್ನಲೆಯಲ್ಲಿ ಸಿಸಿಟಿವಿ ಪರಿಶೀಲಿಸಿ ಶಂಕಿತ ಆರೋಪಿಯನ್ನು ಗುರುತಿಸಲಾಗಿತ್ತು ಎಂದರು.
ಶಂಕಿತ ಆರೋಪಿಯಾದಂತ ಭದ್ರಾವತಿಯ ಹನುಮಂತ ನಗರದ ನಿವಾಸಿ ಶಾಂತಿ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ವೆಸಗಿರುವುದು ಬೆಳಕಿಗೆ ಬಂದಿದೆ ಈ ಪ್ರಕರಣ ಸಂಬಂಧ ಬಂಧಿತ ಆರೋಪಿಯಿಂದ 12 ಗ್ರಾಂ ತೂಕದ ನೆಕ್ಲೆಸ್, 3 ಗ್ರಾಂ ತೂಕದ ಒಂದು ಜೊತೆ ಕಿವಿಯೋಲೆ, 5 ಗ್ರಾಂ ತೂಕದ 2 ಉಂಗುರ ಸೇರಿದಂತೆ ಒಟ್ಟು 20 ಗ್ರಾಂ ತೂಕದ 2,18,000 ಮೌಲ್ಯ ಬಂಗಾರದ ಒಡವೆಗಳನ್ನು ಜಪ್ತಿ ಮಾಡಲಾಗಿದೆ ಎಂದರು
ಈ ಸಂದರ್ಭದಲ್ಲಿ ಸಾಗರ ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪುಲ್ಲಯ್ಯ ರಾಥೋಡ್ ಉಪಸ್ಥಿತರಿದ್ದರು
What's Your Reaction?
Like
0
Dislike
0
Love
1
Funny
0
Angry
0
Sad
0
Wow
0



