ನಿವೃತ್ತಿ ಹೊಂದಿದ ಶಿಕ್ಷಕ ಸತ್ಯನಾರಾಯಣ ಸಿರಿವಂತೆ ಅವರಿಗೆ ಬೀಳ್ಕೊಡುಗೆ

Nov 8, 2025 - 13:04
 0  3
ನಿವೃತ್ತಿ ಹೊಂದಿದ ಶಿಕ್ಷಕ  ಸತ್ಯನಾರಾಯಣ ಸಿರಿವಂತೆ ಅವರಿಗೆ ಬೀಳ್ಕೊಡುಗೆ

ಆಪ್ತ ನ್ಯೂಸ್ ಸಾಗರ :

ತಾಲೂಕಿನ ಎಡಜಿಗಳೆಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಯೋನಿವೃತ್ತಿ ಹೊಂದಿದ ಶಿಕ್ಷಕ ಸತ್ಯನಾರಾಯಣ ಸಿರಿವಂತೆಯವರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಮಕ್ಕಳು, ಎಸ್‌ಡಿಎಂಸಿ ಸದಸ್ಯರು, ಪೋಷಕರು, ವಿವಿಧ ಸ್ಥಳೀಯ ಸಂಘ ಸಂಸ್ಥೆಯವರು ಹೂ ಮಳೆ ಸುರಿಸಿ ಸ್ವಾಗತಿಸಿದರು.
ಶ್ರೀ ಕ್ಷೇತ್ರ ವರದಹಳ್ಳಿ ಶ್ರೀಧರ ಸೇವಾ ಮಂಡಲದ ಅಧ್ಯಕ್ಷ ಎಂಜಿ ಕೃಷ್ಣಮೂರ್ತಿ ಅಭಿನಂದನಾ ಭಾಷಣ ಮಾಡಿ, ಶಿಕ್ಷಕ ಸತ್ಯನಾರಾಯಣರನ್ನು ಹಲವು ವರ್ಷದಿಂದ ನೋಡುತ್ತಿದ್ದೇವೆ. ಅವರು ಕೆಲಸ ಮಾಡಿದ ಎಲ್ಲ ಶಾಲೆಯಲ್ಲೂ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಅವರ ಮುಂದಾಲೋಚನೆಯ ಫಲವಾಗಿ ನಮ್ಮ ಶಾಲೆ ಇಷ್ಟೆಲ್ಲ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂದರು.
ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ ಮಾತನಾಡಿ, ಸತ್ಯನಾರಾಯಣರವರು ಬರೀ ಶಾಲೆಯಷ್ಟೇ ಅಲ್ಲದೆ ಸಾಗರದ ಶಿಕ್ಷಕರ ಪ್ರತಿಭೆಯನ್ನ ರಾಜ್ಯ, ರಾಷ್ಟ್ರಮಟ್ಟದವರೆಗೆ ಪಸರಿಸಲು ಕಾರಣರಾಗಿದ್ದಾರೆ. ಕಲಾ ಸಿಂಚನ ಶಿಕ್ಷಕರ ಸಾಂಸ್ಕೃತಿಕ ವೇದಿಕೆ ಮೂಲಕ ಸಾಂಸ್ಕೃತಿಕ ಮನಸ್ಸಿನ ಶಿಕ್ಷಕರನ್ನು ಸಂಘಟಿಸಿ, ರಾಜ್ಯಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸಿ, ರಾಷ್ಟ್ರಮಟ್ಟಕ್ಕೆ ಕರೆದೊಯ್ದಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದ ಲೋಕೇಶ್ ದೊಂಬೆ, ನಮ್ಮ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಶಿಕ್ಷಕ ಸತ್ಯನಾರಾಯಣ ಬಹಳ ಶ್ರಮಿಸಿದ್ದರು. ಹಿರಿಯ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ ಶಾಲೆಗೆ ಬೇಕಾದ ಹತ್ತಾರು ಸೌಲಭ್ಯ ತರಿಸಿದ್ದಾರೆ. ಕ್ರೀಡೆ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ಮಕ್ಕಳನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಇವರದ್ದು ಎಂದು ಸೇವೆಯನ್ನು ಸ್ಮರಿಸಿದರು.
ಕ್ಷೇತ್ರ ಸಮನ್ವಯ ಅಧಿಕಾರಿ ಡಾ. ಅನ್ನಪೂರ್ಣ, ಶಿಕ್ಷಣ ಸಂಯೋಜಕ ವಿಟಿ ಸ್ವಾಮಿ, ಶಿಕ್ಷಕರ ಸಂಘದ ಕೆ. ಜಗನ್ನಾಥ್, ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗವೇಣಿ ಪ್ರವೀಣ, ಎಸ್‌ಡಿಎಂಸಿ ಉಪಾಧ್ಯಕ್ಷೆ ವಿದ್ಯಾ ಸುರೇಶ್, ಶಿಕ್ಷಣ ತಜ್ಞ ಎಚ್.ಕೆ. ಪರಮಾತ್ಮ, ಪ್ರಮುಖರಾದ ಮಂಜುನಾಥ, ಗೌರಮ್ಮ, ಕೃಷ್ಣಮೂರ್ತಿ, ದಾಕ್ಷಾಯಿಣಿ, ಜಯಶ್ರೀ ಸೇರಿದಂತೆ ಹತ್ತಾರು ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಕ್ಕಳು ತಮ್ಮ ಅನಿಸಿಕೆಗಳನ್ನು ಹಂಚಿಕೊAಡು, ಶಿಕ್ಷಕರ ಸೇವೆ ಸ್ಮರಿಸಿ, ಭಾವುಕರಾದರು. ಮುಖ್ಯ ಶಿಕ್ಷಕ ಹೆಚ್. ಸತ್ಯಪ್ಪ ಸ್ವಾಗತಿಸಿದರು. ಪದ್ಮಾಂಜಲಿ ವಂದಿಸಿದರು. ಬಿ.ಎಸ್. ಶೃತಿ ನಿರೂಪಿಸಿದರು. ಸೀಮಾ ಹೆಗಡೆ ಪ್ರಾರ್ಥಿಸಿದರು.
ಇದೇ ವೇಳೆ ಸತ್ಯನಾರಾಯಣ ಸಿರಿವಂತೆ ದಂಪತಿಯನ್ನು ಇಕ್ಕೇರಿ ಪ್ರೌಢಶಾಲೆ ಮತ್ತು ಸದ್ಗುರು ಸ್ಕೂಲ್ ವತಿಯಿಂದ ಅಭಿನಂದಿಸಲಾಯಿತು. ಪ್ರೌಢಶಾಲೆ ಮುಖ್ಯ ಶಿಕ್ಷಕ ರಜನೀಶ್ ಮತ್ತು ಸದ್ಗುರು ಶಾಲೆಯ ಮುಖ್ಯ ಶಿಕ್ಷಕಿ ಮೇಖಲ ಹಾಜರಿದ್ದರು. 

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0