ಅಡಿಕೆ ನಿಷೇಧ ಸುದ್ದಿ ವೈರಲ್: ತುರ್ತು ಸಭೆ ನಡೆಸಿದ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ
ಆಪ್ತ ನ್ಯೂಸ್ ಸಾಗರ:
ವಿಶ್ವ ಆರೋಗ್ಯ ಸಂಸ್ಥೆಯವರು ಅಡಕೆ ಕ್ಯಾನ್ಸರ್ ಕಾರಕ. ಕೂಡಲೇ ಅದನ್ನು ನಿಷೇಧಿಸಬೇಕೆಂದು ಸೂಚಿಸಿರುವ ಹಿನ್ನೆಲೆಯಲ್ಲಿ ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದವರು ಸಾಗರದ ಎಪಿಎಂಸಿ ಆವರಣದಲ್ಲಿರೋ ಕಚೇರಿಯಲ್ಲಿ ತುರ್ತುಸಭೆ ನಡೆಸಿದರು.
ಸಂಘದ ಅಧ್ಯಕ್ಷ ವಶಂ ರಾಮಚಂದ್ರ ಭಟ್, ಹಿರಿಯ ವಿಜ್ಞಾನಿ ವಿಘ್ನೇಶ್ ಮಂಚಾಲೆ, ಮಾಜಿ ಅಧ್ಯಕ್ಷ ಎಲ್.ಟಿ. ತಿಮ್ಮಪ್ಪನವರ ಮುಂದಾಳತ್ವದಲ್ಲಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಹಿರಿಯ ವಿಜ್ಞಾನಿ ವಿಘ್ನೇಶ್‌ರವರು ಅಡಕೆ ಬಳಕೆ ಆರೋಗ್ಯಕ್ಕೆ ಮಾರಕವಲ್ಲ ಎನ್ನುವ ಕುರಿತು ಉಲ್ಲೇಖವಿರುವ ದಾಖಲೆಗಳನ್ನು ತೋರಿಸಿ, ವಿವರಿಸಿದರು. ವಿಶ್ವಸಂಸ್ಥೆಯ ವರದಿಯಲ್ಲೂ ಕೇವಲ ಅಂತೆ-ಕAತೆಗಳ ಭವಿಷ್ಯದ ಕತೆ ಹೇಳಿದ್ದಾರೆ. ತಂಬಾಕು, ಮದ್ಯ ಸೇವನೆಯಿಂದ ಕ್ಯಾನ್ಸರ್ ಬಂದಿದ್ದವರು ಅಡಕೆ ಸೇವಿಸಿದ್ದನ್ನೂ ದಾಖಲಿಸಿದ್ದಾರೆ. ಹಿಗಾಗಿ ಅದರಲ್ಲಿ ಆಗಿರುವ ಹತ್ತಾರು ತಪ್ಪುಗಳನ್ನು ಹುಡುಕಿ ಸಮಗ್ರವಾದ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಿದೆ ಎಂದರು.
ಸಭೆ ಕುರಿತು ಮಾಹಿತಿ ನೀಡಿದ ಸಂಘದ ಅಧ್ಯಕ್ಷ ವಶಂ ರಾಮಚಂದ್ರ ಭಟ್, ಅಡಕೆಗೆ ಬಂದಿರುವ ಕಳಂಕ ತೊಳೆಯಲು ಮುಂದಿನ ೧೫ ದಿನದೊಳಗೆ ಸಾಗರದಲ್ಲಿ ಹತ್ತಕ್ಕೂ ಹೆಚ್ಚು ಕೃಷಿ ವಿಜ್ಞಾನಿಗಳ ಜೊತೆ ಸಮಾಲೋಚನೆ ನಡೆಸಲಾಗುತ್ತದೆ. ಅಡಕೆ ಮಾರಕವಲ್ಲ ಎನ್ನುವುದನ್ನ ಸಾಬೀತು ಪಡಿಸಬೇಕಿದೆ. ಈ ನಿಟ್ಟಿನಲ್ಲ ಎಲ್ಲ ರೀತಿಯ ಕ್ರಮಗಳನ್ನು ಸಂಘ ತೆಗೆದುಕೊಳ್ಳುತ್ತದೆ ಎಂದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಸಾಗರದ ಸೂಕ್ಷಾö್ಮಣು ಜೀವ ವಿಜ್ಞಾನಿ ಆತ್ರೇಯ ಅಡಕೆ ವಿಚಾರದಲ್ಲಿ ವಿದೇಶಗಳಲ್ಲಿ ಆಗಿರುವ ತಜ್ಞರ ವರದಿಯ ವಿವರವನ್ನು ಪ್ರಸ್ತಾಪಿಸಿದರು.
ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಖಂಡಿಕ, ಯುಎಚ್ ರಾಮಪ್ಪ, ಬಿ.ಟಿ. ಮಂಜುನಾಥ, ಶಿವರಾಮ್ ಮೂಡುಗೋಡು, ಅನಿಲ್ ಒಡೆಯರ್, ಲಕ್ಷಿö್ಮÃನಾರಾಯಣ ಮುಂಡಿಗೆಸರ, ರಾಜಶೇಖರ ಹಂದಿಗೋಡು, ನಾಗಾನಂದ ಬೇಳೂರು, ಮೊದಲಾದ ನಿರ್ದೇಶಕರು, ಪ್ರಮುಖರು ಹಾಜರಿದ್ದರು.
ಫೋಟೊ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



