ಶಿರಸಿಯಲ್ಲಿ ದಾರುಣ ಘಟನೆ: ಬಾಂದಾರದಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

Jul 12, 2026 - 17:54
Jul 12, 2026 - 20:35
 0  286
ಶಿರಸಿಯಲ್ಲಿ ದಾರುಣ ಘಟನೆ: ಬಾಂದಾರದಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ಆಪ್ತ ನ್ಯೂಸ್ ಶಿರಸಿ:

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಉಂಚಳ್ಳಿ ಸಮೀಪದ ಮಾಸ್ತಿಜಡ್ಡಿ ಗ್ರಾಮದಲ್ಲಿ ಬಾಂದಾರದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಭಾನುವಾರ ನಡೆದಿದೆ.

ಮೃತರನ್ನು ಹರ್ಷಾ ಮಂಜುನಾಥ ನಾಯ್ಕ (19) ಹಾಗು ಇವರ ಸಹೋದರ ಮದನ ಗಜಾನನ ನಾಯ್ಕ (16) ಎಂದು ಗುರುತಿಸಲಾಗಿದೆ.

ಹೊನ್ನಾವರದ ಮಾಸ್ತಿ ಜಡ್ಡಿಯ ಹರ್ಷಾ ಮಂಜುನಾಥ ನಾಯ್ಕ (19) ಹಾಗು ಇವರ ಸಹೋದರ ಮದನ ಗಜಾನನ ನಾಯ್ಕ (16).ಹರ್ಷಾ ಉಡುಪಿ ಕಾಲೇಜಿನಲ್ಲಿ ಕಲಿಯುತ್ತಿದ್ದರೇ ಮದನ್ ಶಿರಸಿ ಮಾರಿಕಾಂಬಾ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಕಲಿಯುತ್ತಿದ್ದ ವಿದ್ಯಾರ್ಥಿಯಾಗಿದ್ದನು.ಮದನ್ ಈತನನ್ನು ಉಂಚಳ್ಳಿಯ ಮಾಸ್ತಿಜಡ್ಡಿ ಕುಟುಂಬವೊಂದಕ್ಕೆ ದತ್ತು ಪಡೆಯಲಾಗಿತ್ತು.ಹರ್ಷಾ ರಜೆಗೆಂದು ಮದನ್ ಮನೆಗೆ ಬಂದವನು ಇಂದು ಮದ್ಯಾಹ್ನ ಇಬ್ಬರೂ ಸೇರಿ ಮನೆ ಹತ್ತಿರದ ತೋಟದ ಕೆಳಗಿರುವ ಚಿಕ್ಕದೊಂದು ಡ್ಯಾಮ್ ಗೆ ಹೋಗಿದ್ದಾರೆ.

ಈ ಸಂದರ್ಭದಲ್ಲಿ ಇಬ್ಬರೂ ನೀರಿಗಿಳಿದಿದ್ದಾರೆ.ಆದರೆ ತಮ್ಮ ಮದನ್ ನೀರಿನಲ್ಲಿ ಮುಳುಗುತ್ತಿರುವದನ್ನು ನೋಡಿದ ಅಣ್ಣ ಹರ್ಷಾ ತಮ್ಮನ್ನನ್ನು ಬಚಾವ ಮಾಡಲು ಹೋಗಿ ಇಬ್ಬರೂ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ.

ಸುಮಾರು 15 ಅಡಿ ಆಳ ಹೊಂದಿರುವ ಬಾಂದಾರದಲ್ಲಿ ಇಬ್ಬರೂ ಮುಳುಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಶ್ರೀ ಮಾರಿಕಾಂಬ ಆಪತ್ಬಾಂಧವ ತಂಡ ಗೋಪಾಲ ಗೌಡ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರ ಶವಗಳನ್ನು ಮೇಲಕ್ಕೆತ್ತಿದೆ.

ಘಟನೆಯಿಂದ ಮಾಸ್ತಿಜಡ್ಡಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0