ಸಿದ್ದಾಪುರ: ಗಡಿಹಿತ್ಲಿನ ಭಾರತಿ ಸುಬ್ರಾಯ ಭಟ್ ನಿಧನ
ಆಪ್ತ ನ್ಯೂಸ್ ಸಿದ್ದಾಪುರ:
ತಾಲೂಕಿನ ದೊಡ್ಮನೆ ಸಮೀಪದ ಗಡಿಹಿತ್ಲು ನಿವಾಸಿ ಭಾರತಿ ಸುಬ್ರಾಯ ಭಟ್ (73) ಅವರು ಭಾನುವಾರ ನಿಧನರಾದರು.
ಅವರು ಪತಿ, ಹಿರಿಯ ಸಹಕಾರಿ ಹಾಗೂ ಕಾಂಗ್ರೆಸ್ ಮುಖಂಡ ಸುಬ್ರಾಯ ಭಟ್, ದೊಡ್ಮನೆ ಸೊಸೈಟಿ ಅಧ್ಯಕ್ಷ ಹಾಗೂ ಮಾಜಿ ತಾಪಂ ಸದಸ್ಯ ವಿವೇಕ ಭಟ್ ಗಡಿಹಿತ್ಲು ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಭಾರತಿ ಭಟ್ ಅವರು ಪತಿ ಹಾಗೂ ಪುತ್ರನ ಸಾಮಾಜಿಕ ಮತ್ತು ಸಾರ್ವಜನಿಕ ಸೇವಾ ಕಾರ್ಯಗಳಿಗೆ ಸದಾ ಬೆಂಬಲವಾಗಿ ನಿಂತಿದ್ದವರು. ಮನೆಗೆ ಆಗಮಿಸುವ ಅತಿಥಿಗಳಿಗೆ ಆತ್ಮೀಯ ಆತಿಥ್ಯ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸದ್ಗೃಹಿಣಿಯಾಗಿ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಆತ್ಮೀಯ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದರು.
ಅವರ ನಿಧನದ ಸುದ್ದಿ ತಿಳಿದ ತಕ್ಷಣ ಸ್ಥಳೀಯ ರಾಜಕೀಯ, ಸಾಮಾಜಿಕ ಹಾಗೂ ಸಹಕಾರಿ ಕ್ಷೇತ್ರದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕುಟುಂಬದವರ ಮಾಹಿತಿಯಂತೆ, ಸೋಮವಾರ (ಜುಲೈ 13) ಬೆಳಿಗ್ಗೆ ಅಂತ್ಯಕ್ರಿಯೆ ನೆರವೇರಲಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



