ಧರ್ಮಸ್ಥಳ ಪಾದಯಾತ್ರೆಗೆ ಹೊರಟವರಿಗೆ ಸನ್ಮಾನದ ಶುಭಹಾರೈಕೆ

Oct 11, 2025 - 13:26
 0  128
ಧರ್ಮಸ್ಥಳ ಪಾದಯಾತ್ರೆಗೆ ಹೊರಟವರಿಗೆ ಸನ್ಮಾನದ ಶುಭಹಾರೈಕೆ

ಆಪ್ತ ನ್ಯೂಸ್ ರಾಮನಗುಳಿ (ಅಂಕೋಲಾ)

ಅಂಕೋಲಾ ತಾಲೂಕಿನ ಕಮ್ಮಾಣಿಯ ನಾಗೇಶ ಸಿದ್ದಿ ಅವರು ನಾಡಿನ ಒಳಿತಿಗಾಗಿ ಹಾಗೂ ಅವರ  ಹರಕೆಯಂತೆ ಧರ್ಮಸ್ಥಳಕ್ಕೆ ತಮ್ಮ ಮನೆಯಿಂದ ಸುಮಾರು 300 ಕ್ಕೂ ಹೆಚ್ಚು ಕಿಲೋಮಿಟರ್ ದೂರದ ಮಂಜುನಾಥನ ಆಲಯ ಧರ್ಮದ ಬೀಡು ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಅವರ ಪಾದಯಾತ್ರೆ ಯಶಸ್ವಿ ಯಾಗಲಿ ಎಂದು ಭಾರತೀಯ ಜನತಾ ಪಾರ್ಟಿ ಅಂಕೋಲಾ ಮಂಡಲ, ಅಗಸೂರು ಮಹಾಶಕ್ತಿ ಕೇಂದ್ರ, ಡೋಂಗ್ರಿ ಶಕ್ತಿ ಕೇಂದ್ರದ ಹಾಗೂ ಊರ ನಾಗರಿಕರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಗಸೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ನಾರಾಯಣ ಹೆಗಡೆ ಮಾತನಾಡಿ, ಸಿದ್ದಿ ಸಮಾಜದ ಯುವ ಪ್ರಮುಖರು, ಭಾರತೀಯ ಜನತಾ ಪಾರ್ಟಿ ಅಂಕೋಲಾ ಮಂಡಲದ ST ಮೋರ್ಚಾ ಪ್ರಧಾನ ಕಾರ್ಯದರ್ಶಿಗಳು ಆತ್ಮೀಯರು ಆದ ನಾಗೇಶ ಅವರು ಸಮಾಜದ ಒಳಿತಿಗಾಗಿ ತನ್ನ ಸ್ನೇಹಿತರಾದ ಚರಣ ಸಿದ್ದಿಯವರೊಡನೆ ಕೈಗೊಂಡಿದ್ದು ಇಬ್ಬರ ಪಾದಯಾತ್ರೆಯು ಯಶಸ್ವಿಯಾಗಲಿ ಯಾವುದೇ ಅಡೆತಡೆಗಳಿಲ್ಲದೆ ಪ್ರಯಾಣ ಸಾಗಲಿ. ಆರೋಗ್ಯಯುತವಾಗಿ ಮಂಜುನಾಥನ ದರ್ಶನ ಮಾಡಿ ಬರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ರೈತಮೋರ್ಚಾ ಜಿಲ್ಲಾ ಕಾರ್ಯದರ್ಶಿ ವಿ ಎಸ್ ಭಟ್ಟ, ಬೂತ್ ಅಧ್ಯಕ್ಷ ಶೇಖರ ಗಾಂವ್ಕರ್, ರೂಪಾಲಿ ನಾಯ್ಕ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಗಡೆ, ಸರ್ವೇಶ್ವರ ಹೆಗಡೆ, ದಿನಕರ ಗೌಡ, ಶ್ರೀಕೃಷ್ಣ ಭಟ್ಟ, ನರಸಿಂಹ ಅಪ್ರತೋಟ, ದಿವಾಕರ ನಾಯ್ಕ ಮತ್ತಿತರರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0