ಜೋಯಿಡಾ ತಾಲೂಕಿನಲ್ಲಿ ದೀಪಾವಳಿ ಸಂಭ್ರಮ

Oct 18, 2025 - 21:41
 0  27
ಜೋಯಿಡಾ ತಾಲೂಕಿನಲ್ಲಿ ದೀಪಾವಳಿ ಸಂಭ್ರಮ

ಆಪ್ತ ನ್ಯೂಸ್ ಜೋಯಿಡಾ:
ತಾಲೂಕಿನ ರಾಮನಗರ ಹಾಗೂ ಜೋಯಿಡಾ ಜಿಲ್ಲಾ ಪಂಚಾಯತ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತದ ಗ್ರಾಮಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಹಬ್ಬದ ತಯಾರಿ ಜೋರು ನಡೆದಿದೆ.

ದೀಪಾವಳಿಯ ಹಬ್ಬದ ನಿಮಿತ್ತ ಪೂಜಾ ಸಾಮಗ್ರಿಯ ತಯಾರಿ,ದನಕರುಗಳಿಗೆ ಪೂಜೆಗೆ ಸಂಬಂಧಿಸಿದ ತಯಾರಿ, ಮಾತೆಯರು ಮನೆಯ ಆವರಣ,ಮನೆಯ ಒಳಗೆ ಸ್ವಚ್ಛಗೊಳಿಸುವುದು,ಅಲಂಕಾರ, ಅವಲಕ್ಕಿ, ಇನ್ನಿತರ ತಿಂಡಿ,ತಿನಿಸುಗಳನ್ನು ತಯಾರಿಸುವ ಕೆಲಸದಲ್ಲಿ ಅಕ್ಕಪಕ್ಕದ ಮನೆಯವರ ಜೊತೆ ಸೇರಿಕೊಂಡು ತಯಾರಿ ನಡೆಸಿದ್ದಾರೆ.
ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ನರಕಾಸುರನ ಆಕ್ರತಿಯನ್ನು ಮಾಡಿ ಸುಡುವುದು,ಅವಲಕ್ಕಿ ಹಾಗೂ ಇನ್ನಿತರ ಸಿಹಿ ತಿಂಡಿಗಳನ್ನು ಪರಸ್ಪರ ಮನೆಗಳಿಗೆ ಹೋಗಿ ತಿನ್ನುವುದು,ಮನೆ,ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆ,ಅಮಾವಾಸ್ಯೆಯ ಪೂಜೆ,ಗೋ ಪೂಜೆ,ಸಹೋದರ ಪೂಜೆ ತಮ್ಮ ತಮ್ಮ ಸಂಪ್ರದಾಯಕ್ಕೆ ಅನುಗುಣವಾಗಿ ಹಬ್ಬವನ್ನು ಆಚರಿಸುತ್ತಾರೆ. 
ಗೋ ಪೂಜೆಯ ದಿನ ಕೊಟ್ಟಿಗೆ,ಗೋವನ್ನು ಹೂವುಗಳಿಂದ ಶೃಂಗರಿಸಿ,ಕೊರಳಿಗೆ ಅವಲಕ್ಕಿ,ತಿಂಡಿತಿನಿಸಿನ,ತೆಂಗಿನ ಕಾಯಿ ಇರುವ ಪೊಟ್ಟಣವನ್ನು ಕಟ್ಟುತ್ತಾರೆ.ಮನೆಯ ಮುಂದೆ ರಂಗೋಲಿಯ ಅಲಂಕಾರ,ಆಕಾಶ ಬುಟ್ಟಿ,ದೀಪಗಳ ಸಾಲು,ಸಾಲು ಅಲಂಕಾರ ಒಟ್ಟಿನಲ್ಲಿ ಒಂದು ವಾರಗಳ ಕಾಲ ದೀಪಾವಳಿಯ ಹಬ್ಬದ ವಾತಾವರಣ ಇರಲಿದೆ.

ಒಂದು ವಾರಗಳ ಕಾಲ ಎಲ್ಲವೂ ದೀಪಾವಳಿ ಯ ಹಬ್ಬದ ವಿಶೇಷತೆ ಯಿಂದ ತುಂಬಿ ಬಲಿಂದ್ರ ನನ್ನು ಕಳಿಸುವ ವರೆಗೂ ಹಬ್ಬದ ಗಮ್ಮತ್ತು ಗಮನ ಸೆಳೆಯುತ್ತದೆ. 
ನಾಳೆ ರವಿವಾರ ಗಂಗಾ ಪೂಜೆ ಯೊಂದಿಗೆ ನೀರು ತುಂಬುವ ಹಬ್ಬ, ಸೋಮವಾರ ನರಕ ಚತುರ್ದಶಿ ಮತ್ತು ಮಹಾಲಕ್ಷ್ಮಿ ಪೂಜೆ ನಡೆದರೆ ಮಂಗಳವಾರ ಅಮಾವಾಸ್ಯೆ ಪೂಜೆ ಲಕ್ಷ್ಮೀ ಪೂಜೆ ಗಳು ನಡೆಯುತ್ತವೆ.
ಬುಧವಾರ ದೀಪಾವಳಿ ಪಾಡ್ಯ ಗೋಪೂಜೆಯ ವಿಶೇಷತೆಯಿಂದ ಗೋವುಗಳಿಗೆ ಅಲಂಕರಿಸಿ ಪೂಜಿಸಿ, ಸಿಹಿ ಮೃಷ್ಟಾನ್ನ ವನ್ನು ನೀಡಿ ಪುನೀತ ರಾಗುತ್ತಾರೆ. ಅಳಿಯ ಮಗಳನ್ನು ಮನೇಗೆ ಕರೆದು ಉಡುಗೊರೆ ನೀಡಿ ಸಂಭ್ರಮಿಸುತ್ತಾರೆ. ಮನೆಯ ಹಿರಿಯರನ್ನು ಒಂದೆಡೆ ಸೇರಿಸಿ ಸಿಹಿ ಊಟ, ಹೋಳಿಗೆ ವಿವಿಧ ರೀತಿಯ ಅವಲಕ್ಕಿ ಮಾಡಿ ಊರು ಕೇರಿ ಯವರೆಲ್ಲ ತಿಂದು ಸಂಭ್ರಮಿಸುವ ಹಬ್ಬವೇ ಈ ದೀಪಾವಳಿ ಹಬ್ಬ.
ದೀಪಾವಳಿ ಹಬ್ಬಕ್ಕೆ ಹಳಿಯಾಳ ಜೋಯಿಡಾ. ಶಾಸಕರಾದ ಆರ್ ವಿ ದೇಶಪಾಂಡೆ ಕ್ಷೇತ್ರದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ದೀಪಾವಳಿ ಹಬ್ಬದ ನಂತರ ರೈತರ ಕೃಷಿ ಚಟುವಟಿಕೆಗಳು ವೇಗ ಪಡೆದು ಕೊಳ್ಳುತ್ತವೆ. ಇಂತ ಒಂದು ಹಬ್ಬದಲ್ಲಿ ಮೂರು ದಿನಗಳ ಕಾಲ ಮನೆ  ಮಂದಿರ ಗಳಲ್ಲಿ ಬಲಿಂದ್ರನ  ಪೂಜೆ ನಡೆಸುತ್ತಾರೆ ದುಷ್ಟ ಶಕ್ತಿಗಳು ದಮನ ವಾಗಲಿ ಎಂದು ಬೇಡಿಕೊಳ್ಳುತ್ತಾರೆ, ಈ ಹಬ್ಬದ ಸಂಭ್ರಮದಲ್ಲಿ ಪುಟ್ಟ ಮಕ್ಕಳನ್ನು ಶೃಂಗರಿಸಿ ಹಬ್ಬದ ಗುಬ್ಬ ಎಂದು ಕರೆದು ಸಂಭ್ರಮಿಸುವ ದೀಪಾವಳಿ ನಾಡಿನ ದೇಶದ ಸಂಭ್ರಮದ ಹಬ್ಬ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0