ಕೂಲಿ ಕೆಲಸದ ನೆಪದಲ್ಲಿ ಮನೆಗಳಿಗೆ ತೆರಳಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಆಪ್ತ ನ್ಯೂಸ್ ಯಲ್ಲಾಪುರ:
ತಾಲೂಕಿನ ವಿವಿಧೆಡೆ ಬಂಗಾರ, ಹಣ ದೋಚುತ್ತಿದ್ದ ಖದೀಮನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಹಾಸಣಗಿಯ ಮಡಿವಾಳ ಕೇರಿಯ ಈಶ್ವರ ಮಂಜುನಾಥ ಸಿದ್ದಿ ಈಗ ಪೋಲಿಸ್ ಅತಿಥಿ. ಕೂಲಿ ಕೆಲಸದ ನೆಪದಲ್ಲಿ ಮನೆಗಳಿಗೆ ಹೋಗಿ ಮನೆಯಲ್ಲಿ ಯಾರೂ ಇಲ್ಲದೇ, ಬೀಗ ಹಾಕಿರುವ ಸಮಯ ಸಾಧಿಸಿ ಬಾಗಿಲು ಮುರಿದು ಹಣ, ಬಂಗಾರ ದೋಚುತ್ತಿದ್ದ. ಹಗಲಿನಲ್ಲೇ ಕಳ್ಳತನ ಮಾಡುವುದನ್ನು ಕರಗತಮಾಡಿಕೊಂಡಿದ್ದ. ಪಟ್ಟಣ, ಕುಂದರಗಿ ಭಾಗದಲ್ಲಿ ಕಳ್ಳತನ ಮಾಡಿ ಕೆಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಅಂಕೋಲಾದ ಬಾಳೆಗುಳಿ ಕ್ರಾಸ್ ಬಳಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈತನಿಂದ 18 ಲಕ್ಷ ರೂ ಮೌಲ್ಯದ ಆಭರಣ ಹಾಗೂ ಒಂದು ಸ್ಕೂಟಿ ವಶಕ್ಕೆ ಪಡೆದಿದ್ದಾರೆ. ಒಂಟಿಯಾಗಿ ಈತ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ. ಈತನ ಪತ್ತೆಗಾಗಿ ಪಿ.ಐ ರಮೇಶ ಹಾನಾಪುರ ನೇತೃತ್ವದಲ್ಲಿ, ಪಿ.ಎಸ್.ಐ.ಗಳಾದ ಸಿದ್ದಪ್ಪ ಗುಡಿ, ವಂದಲಿ, ಮಹಾವೀರ ಕಾಂಬ್ಳೆ, ಎಸ್.ವಿ.ಚವ್ಹಾಣ, ಅಲ್ಲದೇ ಸಿಬ್ಬಂದಿಗಳಾದ ಬಸವರಾಜ ಹಗರಿ, ಮಹಮ್ಮದ್ ಶೇಖ್, ಶೋಭಾ ನಾಯ್ಕ, ಗಿರೀಶ ಲಮಾಣಿ, ಪರಮೆಶ್ವರ, ರೇಖಾ ಎಂ.ಎಸ್ ಅವರನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಈ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪೋಲಿಸರು ಕಳ್ಳರನ್ಬು ಹಿಡಿಯುವ ಪ್ರಯತ್ನ ಮಾಡುತ್ತಿಲ್ಲ ಎಂಬ ಆರೋಪ ಕೆಲದಿನಗಳಿಂದ ಕೇಳಿಬಂದಿತ್ತು.ಕೆಲವರು ಮಾದ್ಯಮದಲ್ಲೂ ದೂರಿಕೊಂಡಿದ್ದರು.
What's Your Reaction?






