ನಾನು ಸಿಎಂ ಆಗಿದ್ದರೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನ ಮಾಡುತ್ತಿರಲಿಲ್ಲ: ಆರ್.ವಿ. ದೇಶಪಾಂಡೆ

Oct 13, 2025 - 11:57
 0  106
ನಾನು ಸಿಎಂ ಆಗಿದ್ದರೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನ ಮಾಡುತ್ತಿರಲಿಲ್ಲ: ಆರ್.ವಿ. ದೇಶಪಾಂಡೆ

ಆಪ್ತ ನ್ಯೂಸ್ ದಾಂಡೇಲಿ:
ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು ತಮ್ಮದೇ ಪಕ್ಷದ ಯೋಜನೆಗಳ ಬಗ್ಗೆ ತೀವ್ರ ಅಭಿಪ್ರಾಯ ವ್ಯಕ್ತಪಡಿಸಿ, ನಾನು ಮುಖ್ಯಮಂತ್ರಿ ಆಗಿದ್ದರೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಈ ಹೇಳಿಕೆ ದಾಂಡೇಲಿ ತಾಲೂಕಿನ ಅಂಬೇವಾಡಿ ನವಗ್ರಾಮದಲ್ಲಿ ನಡೆದ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನ ವೇಳೆ ಹೊರಬಂದಿತು. ಈ ಕಾರ್ಯಕ್ರಮವನ್ನು ಕಾಂಗ್ರೆಸ್ ಸಮಿತಿ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಆರ್.ವಿ.ಡಿ. ಅವರ ಹೇಳಿಕೆಯ ಮುಖ್ಯಾಂಶಗಳು:

* ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆ ಹೆಚ್ಚಾಗಿದೆ.
* ಜನರಿಗೆ ಕೆಲವು ಸೌಲಭ್ಯಗಳು ದೊರೆಯುತ್ತಿವೆ, ಆದರೆ ಸರ್ಕಾರದ ಆಡಳಿತ ನಿಧಾನಗೊಂಡಿದೆ.
* ಮಹಿಳೆಯರಿಗೆ ಹಲವು ಯೋಜನೆಗಳಿವೆ, ಆದರೆ ಪುರುಷರಿಗೆ ಯಾವುದೇ ಹೊಸ ಯೋಜನೆಗಳಿಲ್ಲ.
* ಸರ್ಕಾರ ಈ ಯೋಜನೆಗಳನ್ನು ಜಾರಿಗೆ ತರಲು ಅನೇಕ ಸಮಿತಿಗಳನ್ನು ರಚಿಸಿದೆ. ಅವುಗಳನ್ನು ನಿಭಾಯಿಸುವುದೇ ಒಂದು ಸವಾಲಾಗಿದೆ.
* ರಾಜ್ಯದಲ್ಲಿ ಅಭಿವೃದ್ಧಿಯ ವೇಗ ಕುಂಠಿತವಾಗಿದೆ.

ಇದೆ ವೇಳೆ ಮುಖ್ಯಮಂತ್ರಿಗಳು ಇಂದಿರಾ ಕಿಟ್ ಕೊಡ್ತಾರೋ ತೆಂಗಿನಕಾಯಿ ಕೊಡ್ತಾರೋ ನಮಗೇ ಗೊತ್ತಿಲ್ಲ ಎಂದು ದೇಶಪಾಂಡೆ ಲೇವಡಿ ಮಾಡಿದರು.

What's Your Reaction?

Like Like 0
Dislike Dislike 0
Love Love 1
Funny Funny 1
Angry Angry 0
Sad Sad 0
Wow Wow 0