ಕಾಗೇರಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದ ಯುವಕರು

Oct 10, 2025 - 22:48
 1  85
ಕಾಗೇರಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದ ಯುವಕರು

ಆಪ್ತ ನ್ಯೂಸ್ ಯಲ್ಲಾಪುರ:

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಉಪಸ್ಥಿತಿಯಲ್ಲಿ ಯಲ್ಲಾಪುರ ತಾಲೂಕಿನ ಕಿರವತ್ತಿ ಸಭಾಭವನದಲ್ಲಿ ಅಲ್ಕೇರಿ ಭಾಗದ ಯುವಕರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಉಮೇಶ ಭಾಗ್ವತ ಮತ್ತು ರಾಘವೇಂದ್ರ ಭಟ್ಟ, ಪಕ್ಷದ ಹಿರಿಯರಾದ ಗಣಪತಿ ಬೋಳಗುಡ್ಡೆ, ಮಂಡಳ ಪ್ರಧಾನ ಕಾರ್ಯದರ್ಶಿ ರವಿ ಕೈಟ್ಕರ, ಮಂಡಳ ಉಪಾಧ್ಯಕ್ಷ ಸುನಂದಾ ಪಾಟೀಲ, ಮಂಡಳ ಕಾರ್ಯದರ್ಶಿ ಮಹೇಶ ದೇಸಾಯಿ, ಜಿಲ್ಲಾ ಹಿಂದುಳಿದ ಮೋರ್ಚಾ ಕಾರ್ಯದರ್ಶಿ ಮಂಜು ಪಾಟೀಲ, ಕಿರವತ್ತಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ದೊಂಡು ಪಾಟೀಲ, ಕಾರ್ಯದರ್ಶಿ ಸುರೇಶ ಮುಂಡಗಿಕರ, ಹಿಂದುಳಿದ ಮೋರ್ಚಾ ಅಧ್ಯಕ್ಷರಾದ ವಿಠ್ಠು ಪಾಂಡ್ರಮೀಸೆ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಾಂಧೀ ಸೋಮಾಪುರಕರ, ST ಮೋರ್ಚಾ ಅಧ್ಯಕ್ಷರಾದ ಅರ್ಜುನ ಬೇಂಗೇರಿ, SC ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕೆ, ಹಿರಿಯರಾದ ಕ್ರಷ್ಣ ಹುಲಗೋಡ, ಮಹಾದೇವ ಕ್ಯಾತನಳ್ಳಿ, ಶಕ್ತಿ ಕೇಂದ್ರ ಪ್ರಮುಖರಾದ ಸುಭಾಷ್ ಶೇಷಗಿರಿ, ಚಂದು ಮಡಾಕರ, ಪಂಚಾಯತ ಅಧ್ಯಕ್ಷರಾದ ವಿಠ್ಠು ಶೆಲ್ಕೆ ಉಪಸ್ಥಿತರಿದ್ದರು
ಸಂಸದರು ಕಿರವತ್ತಿ ಸಭೆಯಲ್ಲಿ ಕಾರ್ಯಕರ್ತರ ಸಮಸ್ಯೆ ಆಲಿಸಿದರು. ನಂತರ ಯಲ್ಲಾಪುರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0