ಆಪ್ತ ನ್ಯೂಸ್ ಶಿರಸಿ:
ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಬೇಡ್ತಿ-ಅಘನಾಶಿನಿ ಸಮೀತಿ ಸಭೆ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಗೌರವ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಮಹತ್ವದ ಸಭೆಯಲ್ಲಿ ಈ ವರೆಗಿನ ಬೇಡ್ತಿ ಅಘನಾಶಿನಿ ಜನಾಂದೋಲನದ ಅವಲೋಕನ ನಡೆಯಿತು.
ಜನವರಿ ೧೧ ರಂದು ಶಿರಸಿಯಲ್ಲಿ ನಡೆಸಲು ಉದ್ದೇಶಿಸಿರುವ ಬೃಹತ್ ಜನ ಸಮಾವೇಶದ ತಯಾರಿ ಜವಾಬ್ದಾರಿ ಎಲ್ಲರದ್ದಿದೆ. ಅದಕ್ಕಾಗಿ ಶಿರಸಿಯಲ್ಲಿ ಡಿಸೆಂಬರ್ ೩ನೇ ವಾರ ಗಣ್ಯರ, ವಿವಿಧ ಸಮುದಾಯಗಳ ಪ್ರಮುಖರ ಸಭೆ ಏರ್ಪಡಿಸಬೇಕು ಎಂದು ಸ್ವರ್ಣವಲ್ಲೀ ಶ್ರೀಗಳು ತಿಳಿಸಿದರು.
ಡಿಸೆಂಬರ್ ೨ನೇ ವಾರದಲ್ಲಿ ಬೆಂಗಳೂರಲ್ಲಿ ಪಶ್ಚಿಮ ಘಟ್ಟದ ಸಂರಕ್ಷಣೆ ಕುರಿತ ಸಭೆ ನಡೆಸಲ್ಲಿದ್ದೇವೆ.” ಎಂದು ಅವರು ಮಾಹಿತಿ ನೀಡಿದರು.
ಬೇಡ್ತಿ, ಶಾಲ್ಮಲಾ, ಪಟ್ಟಣದ ಹೊಳೆ ಅಘನಾಶಿನಿ ನದೀ ಕಾವಲು ಸಮೀತಿಯನ್ನು ರಚಿಸಲು ನಿರ್ಧರಿಸಲಾಯಿತು.
ಬೇಡ್ತಿ-ಅಘನಾಶಿನಿ ಸಂರಕ್ಷಿತ ಪ್ರದೇಶ ಆದೇಶ ಉಲ್ಲಂಘಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸದ್ಯದಲ್ಲೇ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಕುಮಟಾದಲ್ಲಿ ಕರಾವಳಿ ಅಘನಾಶಿನಿ ತೀರದ ಮೀನುಗಾರರು, ರೈತರು, ಮುಖಂಡರ ಸಭೆಯನ್ನು ಏರ್ಪಡಿಸಲು ನಿಶ್ಚಯಿಸಲಾಯಿತು. ಬೇಡ್ತಿ ಜನಾಂದೋಲನ ಸಭೆಗೆ ಉ.ಕ ಜಿಲ್ಲೆಯ ಮಠಾಧೀಶರನ್ನು ಆಹ್ವಾನಿಸಬೇಕು.
ಬೇಡ್ತಿ ಅಘನಾಶಿನಿ ಕಣಿವೆ ಉಳಿಸಿ ಎಂಬ ನಿರ್ಣಯವನ್ನು ಎಲ್ಲ ಪಂಚಾಯತಗಳು ಸಹಕಾರಿ ಸಂಘಗಳು, ಸಂಸ್ಥೆಗಳು, ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.
೩೦-೧೦-೨೦೨೫ ಬೇಡ್ತಿ ನಿಯೋಗದಿಂದ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗಿದೆ. ದೆಹಲಿಯ ಜಲಶಕ್ತಿ ಹಾಗೂ ಅರಣ್ಯ ಸಚಿವರನ್ನು ಬೇಡ್ತಿ ನಿಯೋಗ ಭೇಟಿ ಮಾಡಬೇಕು, ಈ ಬಗ್ಗೆ ಜನಪ್ರತಿನಿದಿಗಳು ಮುಂದಾಗಬೇಕು ಎಂದು ಸಭೆ ಅಭಿಪ್ರಾಯ ಪಟ್ಟಿತು.
ಬೇಡ್ತಿ ಸಮೀತಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಪ್ರಾಸ್ತಾವಿಕವಾಗಿ ಈವರೆಗಿನ ಚಟುವಟಿಕೆಗಳನ್ನು ಮಂಡಿಸಿದರು, ಮುಂದಿನ ಚಳುವಳಿಯ ಸ್ವರೂಪ ಪ್ರಕಟಿಸಿದರು. ಶ್ರೀ ಸ್ವರ್ಣವಲ್ಲೀ ಮಠದ ಕಾರ್ಯಾಧ್ಯಕ್ಷ ವಿಘ್ನೇಶ್ವರ ಹೆಗಡೆ ಬೊಮ್ಮನಳ್ಳಿ ಅವರು ಶ್ರೀ ಸ್ವರ್ಣವಲ್ಲೀ ಸೀಮೆಗಳ ಅಧ್ಯಕ್ಷರು ಹಾಗೂ ಮಠದ ಪದಾಧಿಕಾರಿಗಳು ಬೇಡ್ತಿ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ ಎಂದು ಸೂಚಿಸಿದರು. ಡಾ| ಕೇಶವ ಕೊರ್ಸೆ ಅವರು ಶಿರಸಿಯಲ್ಲಿ ಇತ್ತೀಚೆಗೆ ನಡೆದ (ಬೇಡ್ತಿ) ವಿಜ್ಞಾನಿಗಳ ವಿಚಾರ ಸಂಕಿರಣದ ಫಲಶೃತಿ ವರದಿಯನ್ನು ಮಂಡಿಸಿದರು.
ಅಘನಾಶಿನಿ ಕಣಿವೆಯ ಸಾಮಾಜಿಕ ಮುಖಂಡ ಎನ್ ವಿ ಹೆಗಡೆ ಮುತ್ತಿಗೆ ವೇದಿಕೆಯಲ್ಲಿ ಇದ್ದರು. ಸಂಚಾಲಕರಾದ ರಮಾಕಾಂತಮAಡೇಮನೆ, ಗೋಪಾಲಕೃಷ್ಣತಂಗರ‍್ಮನೆ, ನರಸಿಂಹ ಸಾತೊಡ್ಡಿ, ಆರ್ ಎಸ್ ಹೆಗಡೆಬೈರುಂಬೆ, ಶ್ರೀಪಾದಶಿರನಾಲಾ, ಜಿ.ವಿ.ಹೆಗಡೆ ಗೊಡ್ವೆಮನೆ, ಸುರೇಶ್ ಹಕ್ಕೀಮನೆ, ವಿಶ್ವನಾಥ ಶೀಗೇಹಳ್ಳಿ, ವಿ.ಎಲ್.ಹೆಗಡೆ, ರತ್ನಾಕರಬಾಡಲಕೊಪ್ಪ, ಮುಂತಾದವರು ಮತನಾಡಿದರು.