ಅಕ್ರಮ ಮರಳುಗಾರಿಕೆ ತಡೆದಿದ್ದಕ್ಕೆ ಜೀವಬೆದರಿಕೆ: ಪೊಲೀಸರಿಗೆ ದೂರು ನೀಡಿದ ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ
ಆಪ್ತ ನ್ಯೂಸ್ ಯಲ್ಲಾಪುರ:
ನನ್ನ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದ ಬೆಳವಣಿಗೆ ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗರಿಂದ ನನಗೆ ಮತ್ರುನನ್ನ ಕುಟುಂಬದ ಸದಸ್ಯರಿಗೆ ಅಪಾಯವಿದೆ .ಈ ಹಿನ್ನೆಲೆಯಲ್ಲಿ ನಮಗೆ ಸೂಕ್ತ ರಕ್ಷಣೆ ಬೇಕು ಎಂದು ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ ಪೋಲಿಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ನಾನು ಅಕ್ರಮ ಮರಳುಗಾರಿಕೆ ತಡೆಗೆ ಮತ್ತು ಜಾತ್ರೆಯಲ್ಲಿ ಜುಗಾರಿ ತಡೆಗೆ ಅಧಿಕಾರಿಗಳಿಗೆ ನೆರವಾದ ಹಿನ್ಬೆಲೆಯಲ್ಲಿಯೂ ಕೆಲವರು ನನ್ನ ಮೇಲೆ ಸಂಚು ರೂಪಿಸಿದ್ದಾರೆ. ಮೊನ್ನೆಯಷ್ಟೆ ರಾತ್ರಿ ವೇಳೆಯಲ್ಲಿನಮ್ಮ ಮನೆ ಹತ್ತಿರ ಬಂದು ಗಲಾಟೆ ಮಾಡಿ ಗೂಂಡಾವರ್ತನೆ ತೋರಿ ಹೋಗಿದ್ದಾರೆ. ಇಂತಹ ಕೃತ್ಯಗಳು ನಡೆಸುತ್ತಿದ್ದಾರೆ. ಇದರೆಲ್ಲದರ ಹಿನ್ನೆಲೆಯಲ್ಲಿ ನನ್ನನ್ನು ಮಟ್ಟ ಹಾಕುವ ಯತ್ನದಲ್ಲಿದ್ದು ನನ್ನ ಜೀವಕ್ಕೂ ಅಪಾಯವಿದೆ.ಹಾಗಾಗಿ ನನಗೂ ಕುಟುಂಬದ ಸದಸ್ಯರಿಗೂ ಸೂಕ್ತ ರಕ್ಷಣೆ ನೀಡಬೇಕೆಂದು ಪೋಲಿಸ್ ಅಧಿಕಾರಿಗಳಲ್ಲಿ ಮನವಿ ನೀಡಿ ವಿನಂತಿಸಿದ್ದಾರೆ.ಮೊನ್ನೆಯಷ್ಟೇ ಕೆಲವು ಗೂಂಡಾಗಳಿಂದ ನನ್ನ ಮೇಲೆ ದಾಳಿ ನಡೆದಿತ್ತು ಎಂದು ಹೇಳಿದ್ದಾರೆ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0









