ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ

Oct 13, 2025 - 20:03
 0  253
ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ

ಆಪ್ತ ನ್ಯೂಸ್ ಯಲ್ಲಾಪುರ:

ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಕಾರದಲ್ಲಿ ಸ್ವರ್ಣವಲ್ಲೀ ಶ್ರೀಗಳ ದಿವ್ಯ ಸಾನ್ನಿದ್ಯದಲ್ಲಿ  ಯೋಜನೆಯನ್ನು ವಿರೋಧಿಸಿ  ಅ.19ರಂದು  ಯೋಜನಾ ಪ್ರದೇಶ ವ್ಯಾಪ್ತಿಯ ಮಂಚಿಕಿಕೇರಿಯ ತುಂಬೇಬೀಡು ಶಾಲೆ ಹತ್ತಿರ ಬೃಹತ್ ರ್ಯಾಲಿ ಮತ್ತು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ  ಎಂದು ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.

ಅವರು ಸೋಮವಾರ ಪಟ್ಟಣದ ಟಿ.ಎಂ.ಎಸ್ ಸಭಾಭವನದಲ್ಲಿ ನಡೆದ ಪೂರ್ಭಾವಿ ಸಮಾಲೋಚನಾ ಸಭೆಯಲ್ಲಿ  ಯೋಜನೆಯ ಬಗ್ಗೆ ಜನರಿಗೆ ಮತ್ತು‌ ಮಾದ್ಯಮಗಳಿಗೆ ಮಾಹಿತಿ ನೀಡಿದರು.
ಸರ್ವೆಗೆ ಅವಕಾಶ ಕೊಡಬಾರದು.ಇನ್ನೂ ಈ ಯೋಜನೆಯ ಡಿಪಿಆರ್ ಸಿದ್ದವಾಗಿಲ್ಲ. ಆದರೆ ಸಿಧ್ದತೆಯಲ್ಲಿ ರಾಜ್ಯಸರಕಾರ ಮುಂದಾಗಿದೆ. ಯೋಜನೆ ಅವರು ಹೇಳಿದಂತೆ ಇರುವುದಿಲ್ಲ. ಅವರು ಈಗ ನೀಡಿದ ಮಾಹಿತಿಯಲ್ಲಿ ಎಲ್ಲವೂ ಅಸ್ಪಷ್ಟವಾಗಿದೆ. ಕೇವಲ ಜಾರಿಗೊಳಿಸುವುದೊಂದೇ ಉಧ್ದೇಶವಾಗಿದೆ. ಬೇಡ್ತಿ ನದಿ ಇಲ್ಲಿ ಅವಲಂಭಿಸಿದವರ ಬಗ್ಗೆ ಮಾಹಿತಿ‌ ಇಲ್ಲ. ಅದರ ನೀರಿನ‌ ಪ್ರಮಾಣದ ಬಗ್ಗೆ ಮಾಹಿತಿ‌ ಇಲ್ಲ. ಈ ಹಿಂದಿನ ಇಂತಹ ಮಾರಕ ಯೋಜನೆಯನ್ನು ಸೋಂದಾ ಶ್ರೀಗಳ ಮುಂಧಾಳತ್ವದಲ್ಲಿ ವಿರೋಧ ಮಾಡಿದ್ದೇವೆ ಮತ್ತು ಗೆದ್ದಿದ್ದೇವೆ. ಈಗಲೂ ಶ್ರೀಗಳ ಮಾರ್ಗದರ್ಶನದಲ್ಲಿ ಮುಂದಡಿ ಇಡುತ್ತಿದ್ದೇವೆ ಎಂದು ತಿಳಿಸಿದ ಅವರು ಅಂದು ಯೋಜನೆಯ ದುಷ್ಪರಿಣಾಮದ ಬಗ್ಗೆ ತಜ್ಞರಿಂದ ಮಾಹಿತಿ ನೀಡಲಾಗುತ್ತದೆ. ಶ್ರೀಗಳು ನಮಗೆ ಆಶೀರ್ವಾದ ಪೂರ್ವಕ ಮಾರ್ದರ್ಶನ ಮಾಡುತ್ತಾರೆ. ಜಿಲ್ಲೆಯ ಮತ್ತು ಸ್ಥಳಿಯ ಜನಪ್ರತಿನಿಧಿಗಳನ್ನು ಆಹ್ವಾನಿಸುತ್ತಿದ್ದು ಅವರು ತಮ್ಮ ಅಭಿಪ್ರಾಯ‌ ಮಂಡಿಸಲಿದ್ದಾರೆ ಎಂದು ತಿಳಿಸಿದರು.

ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ ಮಾಹಿತಿ ನೀಡಿ ಕುಂದರಗಿ, ಹಿತ್ಲಳ್ಳಿ, ಮಂಚಿಕೇರಿ, ಉಮ್ಮಚಗಿ, ಮಾಗೋಡ, ಯಲ್ಲಾಪುರ ಚಂದ್ಗುಳಿ ಉಪಳೇಶ್ವರ ಹಾಗೂ ಯೋಜನಾ ಪ್ರದೇಶ ಸೂರೆಮನೆ ಭಾಗದಿಂದ ಅಂದು ಬೃಹತ್ ರ್ಯಾಲಿ ನಡೆಸುತ್ತಾರೆ.ಬೆಳಿಗ್ಗೆ ೯.೩೦ ಕ್ಕೆ ಈ   ಪ್ರದೇಶಗಳಿಂದ ಏಕಕಾಲದಲ್ಲಿ ರ್ಯಾಲಿ ಹೊರಟು ೧೦.೩೦ ಕ್ಕೆ ತುಂಬೆಬೀಡು ಸೇರಲಿದೆ. ೧೦.೩೦ ರಿಂದ ೧೨.೩೦ ರ ವರೆಗೆ ಶ್ರೀಗಳ ಸಾನ್ನಿಧ್ಯದಲ್ಲಿ ಅಲ್ಲಿ ಸಭೆ ನಡೆಯಲಿದೆ.ಸಾವಿರಾರು ಸಂಖ್ಯೆಯಲ್ಲಿ ಬೇಡ್ತಿ ಕಣಿವೆಯ ಜನರು ಭಾಗವಹಿಸುತ್ತಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಉಪಾಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಶ್ರೀಗಳ ಅಭಯಹಸ್ತ ಇರುವ ಯೋಜನೆಗಳಲೆಲ್ಲ ನಿಂತಿದೆ. ಇದನ್ನೂ ನಿಲ್ಲಿಸಲು ನಾವು ಹೋರಾಡಬೇಕು.ಅಂದಿನ‌ಪ್ರತಿಭಟನೆ ಯಶಸ್ವೀಗೊಳಿಸುವಂತೆ ವಿನಂತಿಸಿದರು.

ಪ್ರತಿಭಟನೆ ಮತ್ತು ರ್ಯಾಲಿ ರೂಪರೇಷೆಯ ಬಗ್ಗೆ ಎಂ.ಕೆ.ಭಟ. ಯಡಳ್ಳಿ,ಕೆ ಎಸ್.ಭಟ್ಟ,ರಾಘವ ಭಟ್ಟ ಹಾಸಣಗಿ,ರಘುಪತಿ ಕಂಪ್ಲಿ,ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ,ನಾಗರಾಜ ಕವಡಿಕೆರೆ,ಗಜಾನನ ಬೂರ್ಮನೆ, ನಾಗರಾಜ ಮದ್ಗುಣಿ, ಶ್ರೀಧರ ಅಣಲಗಾರ, ಸುಬ್ರಾಯ ಬಿದ್ರೆಮನೆ, ಸಲಹೆ ,ಸೂಚನೆ ನೀಡಿದರು.ಸೀಮಾಧ್ಯಕ್ಷ ಹಾಗೂ ಸಮಿತಿಯ ಸಂಚಾಲಕ  ಶ್ರೀಪಾದ ಹೆಗಡೆ ಶಿರನಾಲಾ,ವೃಕ್ಷ ಲಕ್ಷ ಆಂದೋಲನದ ಸಂಚಾಲಕ ಗಣಪತಿ ಬಿಸಲಕೊಪ್ಪ, ಕೆ.ಎಸ್.ಭಟ್ಟ ಆನಗೋಡ,ಪ್ರಮುಖರಾದ ಎಲ್ ಪಿ ಭಟ್ಟ ಗುಂಡ್ಕಲ್, ವಿಶ್ವನಾಥ ಹಳೆಮನೆ,ಚನ್ನಪ್ಪ ಗೌಡ ಬಾಲಚಂದ್ರ ಹೆಗಡೆ ತೂಕದಬೈಲ್,ವಿಕಾಸ ನಾಯ್ಕ್ ಮಂಚಿಕೇರಿ, ಎಂ.ರಾಜಶೇಖರ, ರಾಮಕೃಷ್ಣ ಕವಡಿಕೇರಿ,ಕೆ.ಟಿ ಹೆಗಡೆ ಚಿಕ್ಕೊರಗಿ  ಮುಂತಾದವರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0