ಆಪ್ತ ನ್ಯೂಸ್ ಶಿವಮೊಗ್ಗ:
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ; ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ (ರಿ.), ಶಿರಸಿ; ಸ್ವರ್ಣರಶ್ಮಿ ಟ್ರಸ್ಟ್ (ರಿ.), ಶಿವಮೊಗ್ಗ ಮತ್ತು ಶ್ರೀ ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಭಗವದ್ಗೀತಾ ಅಭಿಯಾನ–2025 ರ ರಾಜ್ಯಮಟ್ಟದ ಮಹಾಸಮರ್ಪಣೆ ಅತ್ಯಂತ ವೈಭವಶಾಲಿಯಾಗಿ ನೆರವೇರಿತು.
ಈ ಮಹೋತ್ಸವದಲ್ಲಿ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ; ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು, ಶ್ರೀ ಆದಿಶಂಕರಾಚಾರ್ಯ ಶ್ರೀ ಶಾರದಾ ಲಕ್ಷ್ಮೀನೃಸಿಂಹ ಪೀಠಂ, ಹರಿಹರಪುರ; ಪರಮಪೂಜ್ಯ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಮುರುಘಾಮಠ ಮಹಾಸಂಸ್ಥಾನ, ಆನಂದಪುರ–ಬೆಕ್ಕಿನಕಲ್ಮಠ, ಶಿವಮೊಗ್ಗ; ಹಾಗೂ ಪರಮಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಮಹಾಸ್ವಾಮಿಗಳು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ, ಶಿವಮೊಗ್ಗ — ಇವರ ಮಂಗಳಮಯ ಸಾನ್ನಿಧ್ಯವು ಕಾರ್ಯಕ್ರಮಕ್ಕೆ ಆಧ್ಯಾತ್ಮಿಕ ವೈಶಿಷ್ಟ್ಯವನ್ನಿತ್ತಿತು.
ಕಾರ್ಯಕ್ರಮವನ್ನು ಗೌರವಾನ್ವಿತ ಶ್ರೀ ರಾಜೇಂದ್ರ ವಿಶ್ವನಾಥ ಅರೇಕರ್, ಘನತೆವೆತ್ತ ಕೇರಳ ರಾಜ್ಯಪಾಲರು, ಉದ್ಘಾಟಿಸಿ ಮಹಾಸಮರ್ಪಣೆಗೆ ಭವ್ಯ ಆರಂಭ ಕೊಟ್ಟರು.
ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಸನ್ಮಾನ್ಯ ಶ್ರೀ ಎಚ್.ಡಿ. ಕುಮಾರಸ್ವಾಮಿ, ಹಿರಿಯ ನಾಯಕ ಸನ್ಮಾನ್ಯ ಶ್ರೀ ಕೆ.ಎಸ್. ಈಶ್ವರಪ್ಪ, ಶ್ರೀ ಡಿ.ಎಸ್. ಅರುಣ್, ಸನ್ಮಾನ್ಯ ಶ್ರೀ ಅಶೋಕ್ ಜಿ. ಭಟ್ ಹಿರಿಯ ವಕೀಲರು ಹಾಗೂ ಕಾರ್ಯಧ್ಯಕ್ಷರು, ಶ್ರೀ ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿ, ಶಿವಮೊಗ್ಗ, ಶ್ರೀ ಸಿ.ಎಂ. ಉದಯಶಂಕರ, ಹಾಗೂ ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿಯ ಗಣ್ಯರು ಉಪಸ್ಥಿತರಿದ್ದು ಗೀತೆಯ ಶಾಶ್ವತ ಸಂದೇಶಕ್ಕೆ ಮತ್ತಷ್ಟು ಭವ್ಯತೆಯನ್ನು ನೀಡಿದರು.
ಭಗವದ್ಗೀತೆಯ ಶಾಶ್ವತ ಸಂದೇಶ—ಧರ್ಮ, ಜ್ಞಾನ, ಶಾಂತಿ ಮತ್ತು ಮಾನವೀಯತೆ—ಇವುಗಳನ್ನು ಮತ್ತೊಮ್ಮೆ ಸಮಾಜಕ್ಕೆ ಪ್ರಸರಿಸಿದ ಮಹಾಸಮರ್ಪಣೆ, ಸಾವಿರಾರು ಭಕ್ತರ ಮನಗಳಲ್ಲಿ ಭಕ್ತಿಭಾವದ ಹೊಸ ಬೆಳಕನ್ನು ಹಚ್ಚಿತು.