ವಡ್ಡಿ ಘಾಟ್ ನಲ್ಲಿ ಕಂದಕಕ್ಕೆ ಉರುಳಿದ ಬಸ್: 49 ಜನರಿಗೆ ಗಾಯ!?

Oct 18, 2025 - 21:06
 0  805
ವಡ್ಡಿ ಘಾಟ್ ನಲ್ಲಿ ಕಂದಕಕ್ಕೆ ಉರುಳಿದ ಬಸ್: 49 ಜನರಿಗೆ ಗಾಯ!?

ಆಪ್ತ ನ್ಯೂಸ್ ಶಿರಸಿ:
ಯಾನ ಬಳಿಯ ವಡ್ಡಿ ಘಾಟ್ ನಲ್ಲಿ ಬಸ್ ಕಂದಕಕ್ಕೆ ಉರುಳಿ ಪಲ್ಟಿ ಆಗಿದ್ದು 49 ಜನರು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಳ್ಳಾರಿಯಿಂದ-ಕುಮಟಾಕ್ಕೆ  ಪ್ರಯಾಣ ಮಾಡುತ್ತಿದ್ದ ಸರ್ಕಾರೀ ಬಸ್ ವಡ್ಡಿ ಘಟ್ಟದಲ್ಲಿ ಮೂರು ಸಾರಿ ಪಲ್ಟಿ ಆಗಿ ಕಂದಕಕ್ಕೆ ಉರುಳಿದೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 49 ಜನರು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಹುತೇಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಬಸ್ ಚಾಲಕ ಕೂಡ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಸಹ ಪ್ರಯಾಣಿಕರುಗಳು ಬಸ್ ನಲ್ಲಿ ಗಾಯಗೊಂಡಿದ್ದ ಇತರ ಪ್ರಯಾಣಿಕರನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ. ಗಾಯಗೊಂಡವರನ್ನು ಕುಮಟಾ ಹಾಗೂ ಅಂಕೋಲಾ ಆಸ್ಪತ್ರೆಗೆ ಸೇರಿಸಲಾಗಿದೆ.

What's Your Reaction?

Like Like 0
Dislike Dislike 0
Love Love 1
Funny Funny 1
Angry Angry 0
Sad Sad 2
Wow Wow 0