ಗ್ರಸ್ತೋದಯ ಚಂದ್ರಗ್ರಹಣ: ಏನು ಮಾಡಬೇಕು? ಏನು ಮಾಡಬಾರದು? ಸ್ವರ್ಣವಲ್ಲಿ ಮಠದ ಪ್ರಕಟಣೆ ಇಲ್ಲಿ ನೋಡಿ
ಆಪ್ತ ನ್ಯೂಸ್ ಶಿರಸಿ:
ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ
ಗ್ರಹಣ-ಆಚರಣೆಯ ಕುರಿತು ಪ್ರಕಟಣೆ
ವಿಶ್ವಾವಸು ಸಂವತ್ಸರದ ಫಾಲ್ಗುಣ ಶುಕ್ಲ ಪೂರ್ಣಿಮೆ ಮಂಗಳವಾರ, ದಿನಾಂಕ 03-03-2026-ರಂದು ಗ್ರಸ್ತೋದಯ ಚಂದ್ರಗ್ರಹಣವಿದೆ. ನಮ್ಮ ಭಾಗದಲ್ಲಿ ಅದರ ಆಚರಣೆ ಹೇಗೆ? ಎಂಬ ವಿಷಯದಲ್ಲಿ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದಿಂದ ನೀಡುತ್ತಿರುವ ಪ್ರಕಟಣೆ;
ಈ ಚಂದ್ರಗ್ರಹಣದ ಕುರಿತು ಬಗ್ಗೋಣ ಪಂಚಾಂಗದಲ್ಲಿ ಈ ದಿನ ಮುಂಜಾನೆ 9-47-ರ ನಂತರ ಗ್ರಹಣಮೋಕ್ಷ ಪರ್ಯಂತ ಭೋಜನ ನಿಷಿದ್ಧವೆಂದು ಹೇಳಲಾಗಿದೆ. ಧರ್ಮಸಿಂಧು ಮೊದಲಾದ ಗ್ರಂಥಗಳಲ್ಲಿಯೂ ಗ್ರಹಣವು ಗೋಚರವಾಗುತ್ತದೆ ಎಂದಾದಾಗ ವಿಹಿತ ಆಚರಣೆಗಳನ್ನು ಮಾಡಬೇಕೆಂದು ಉಲ್ಲೇಖಿಸಲಾಗಿದೆ. ಪಂಚಾಂಗದಲ್ಲಿ ಗ್ರಹಣಸ್ಪರ್ಶ, ಮಧ್ಯಕಾಲ, ಮೋಕ್ಷಕಾಲ ಮತ್ತು ದೃಶ್ಯಪುಣ್ಯಕಾಲಗಳನ್ನು ನಿರ್ದೇಶಿಸಿದ್ದಾರೆ. ವಿವಿಧ ಧರ್ಮಶಾಸ್ತ್ರದ ಉಕ್ತಿಗಳು ಉಪಲಬ್ಧವಾಗಿದ್ದರೂ ಬಗ್ಗೋಣ ಪಂಚಾಂಗವನ್ನು ಅನುಸರಿಸುವ ಹಾಗೂ ಶ್ರೀಮಠದ ಶಿಷ್ಯವ್ಯಾಪ್ತಿಯಲ್ಲಿ ಬರುವ ಎಲ್ಲ ಆಸ್ತಿಕರೂ ಆ ದಿನ ಮಧ್ಯಾಹ್ನೋತ್ತರ 3-20-ರಿಂದಲೇ ಸ್ನಾನ, ಜಪ-ತಪಾನುಷ್ಠಾನಗಳನ್ನು ಆಚರಿಸಬೇಕು. ಜಪಾದಿ ಅನುಷ್ಠಾನಗಳಲ್ಲಿ ತೊಡಗಿಕೊಂಡು ಕೃತಾರ್ಥರಾಗಬೇಕೆಂದು ಈ ಮೂಲಕ ಅವಗಾಹನೆಗೆ ತರಲಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
1
Wow
0











