ಸರಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಅಧ್ಯಕ್ಷರಾಗಿ ದತ್ತಗುರು ಕಂಠಿ ಆಯ್ಕೆ

ಆಪ್ತ ನ್ಯೂಸ್ ಶಿರಸಿ:
ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿ, ಕೃಷಿ ಮತ್ತು ಹೈನುಗಾರಿಕೆಯ ವೃತ್ತಿಯಲ್ಲಿ ನಿರತರಾಗಿ, ಕನ್ನಡ ಸಾಹಿತ್ಯ ಸೇವೆಯಲ್ಲಿ ನಾಲ್ಕು ದಶಕಗಳಿಂದ ತೊಡಗಿಸಿಕೊಂಡು ಸಂಘಟನೆಯ ಮೂಲಕ ಹಲವು ಪ್ರತಿಭಾನ್ವಿತರನ್ನು ಬೆಳಕಿಗೆ ತಂದಿರುವುದಷ್ಟೇ ಅಲ್ಲದೇ ತಾವು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸ್ವತಃ 18 ಕೃತಿಗಳನ್ನು ರಚಿಸಿ ಸರಳ ಸಜ್ಜನಿಕೆಯ ಸಾಕಾರಮೂರ್ತಿಯೆನಿಸಿರುವ ಉಂಚಳ್ಳಿಯ ದತ್ತಗುರು ಕಂಠಿಯವರನ್ನು ಇದೇ ಬರುವ ನವೆಂಬರ 23 ರವಿವಾರದಂದು ಮಾಸ್ಕೇರಿ ಸಾಹಿತ್ಯಾರಾಧನಾ ಸಂಸ್ಥೆ ದಾಂಡೇಲಿ ಮತ್ತು ಸಾಹಿತ್ಯ ಸಂಚಲನ ಶಿರಸಿ ಸಂಯುಕ್ತಾಶ್ರಯದಲ್ಲಿ ಜರುಗಲಿರುವ ಸರಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿಯವರು ಮಾಹಿತಿ ನೀಡಿರುವುದಾಗಿ ಸಾಹಿತ್ಯ ಸಂಚಲನದ ಅಧ್ಯಕ್ಷರಾದ ಕೃಷ್ಣ ಪದಕಿ ತಿಳಿಸಿದ್ದಾರೆ.
What's Your Reaction?






