ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಿಜೆಪಿಯ ಎಜೆಂಟರು: ದಿನೇಶ ಗುಂಡುರಾವ್

ಆಪ್ತ ನ್ಯೂಸ್ ಯಲ್ಲಾಪುರ:
ಈ ಪ್ರದೇಶಕ್ಕೆ ಅಗತ್ಯವಾಗಿ ಬೇಕಾದ ಸಮುದಾಯಕೇಂದ್ರ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡುರಾವ್ ಹೇಳಿದರು.
ಅವರು ಮಂಗಳವಾರ ಕಿರವತ್ತಿಯಲ್ಲಿ ೯ ಕೋಟಿ ರೂ ವೆಚ್ಚದ ಸಮುದಾಯದ ಆರೋಗ್ಯಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ವಿರೋಧ ಪಕ್ಷ ಠೀಕೆ ಮಾಡುತ್ತಾರೆ ಅವರು ಮಾಡುವದು ಅವರ ಹಕ್ಕು ಆದರೆ ಅಭಿವೃಧ್ದಿ ನಿಂತಿಲ್ಲ. ಪಂಚಗ್ಯಾರಂಟಿ ನಿಲ್ಲಿಸಿಲ್ಲ. ಮೂಲಭೂತ ಸೌಕರ್ಯಕ್ಕೆ ನಮ್ಮ ಸರಕಾರ ಹಣ ಕಡಿಮೆ ಮಾಡದೆ ಕೆಲಸ ಮಾಡುತ್ತಿದೆ.ಕರ್ನಾಟಕ
ಆರ್ಥಿಕ ಬೆಳವಣಿಗೆಯಲ್ಲಿ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ನಮ್ಮ ಉದ್ದೇಶ ಬಡವರು ಹಿಂದುಳಿದವರು ಆರ್ಥಿಕವಾಗಿ ಆರೋಗ್ಯವಾಗಿ ಸಭಲರಾಗಬೇಕು ಎಂಬುದು. ಮುಂದೆ ಅನ್ನಬಾಗ್ಯ ಯೋಜನೆಯಡಿ ದವಸ ದಾನ್ಯ ಕಿಟ್ ನೀಡಲಿದ್ದೇವೆ ಆಶಾಕಾರ್ಯಕರ್ತೆಯರಿಗೂ ಎರಡು ಸಾವಿರ ರೂ ಹೆಚ್ಚಿಸಲಿದ್ದೇವೆ ಎಂದು ಭರವಸೆ ನೀಡಿದರುಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಎಂ.ಎಲ್.ಸಿ ಶಾಂತಾರಾಮ ಸಿದ್ದಿ, ಗ್ರಾ ಪಂ ಅಧ್ಯಕ್ಷೆ ಸಂಗೀತಾ ಕೋಕರೆ, ತಹಶೀಲ್ದಾರ್ ಚಂದ್ರಶೇಖರ ಹೊಸ್ಮನಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ ದನವಾಡಕರ, ಸೌದತ್ತಿ ಶಾಸಕ ವಿಶ್ವಾಸ ವೈದ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ,ಜಿ ಎನ್ ನೀರಜ್, ತಾಲೂಕಾ ಆರೋಗ್ಯಾಧಿಕಾರಿ ನರೇಂದ್ರ ಪವಾರ ಮತ್ತಿತರರು ಉಪಸ್ಥಿತರಿದ್ದರು.
******
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬ್ಯಾನ ಮಾಡುವ ಕುರಿತು ಮಾದ್ಯಮದ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವರು ಬ್ಯಾನ ಮಾಡುವ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಅವರ ಚಟುವಟಿಕೆ ಸರಿ ಅಲ್ಲ. ಅವರು ಬಿಜೆಪಿಯ ಎಜೆಂಟರು. ಈಗ ಸಂಪೂರ್ಣ ರಾಜಕೀಯ ಸಂಘಟನೆಯಾಗಿದೆ. ಶಾಲಾ ಕಾಲೇಜು ಸರಕಾರಿ ಸ್ಥಳಗಳಲ್ಲಿ ಅವರ ಚಟುವಟಿಕೆ ನಿಲ್ಲಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.
What's Your Reaction?






