ಕಟ್ಟಡದಿಂದ ವ್ಯಕ್ತಿ ಬಿದ್ದು ದಾರುಣ ಸಾವು

ಆಪ್ತ ನ್ಯೂಸ್ ಶಿರಸಿ:
ಕಟ್ಟಡದ ಮೇಲಿನಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ಶಿರಸಿ ನಗರದ ಕಸ್ತೂರಬಾ ನಗರದಲ್ಲಿ ಸಂಭವಿಸಿದೆ. ತಂಜಿಲ್ ಪಾಷಾ ಎಂಬ 42 ವರ್ಷ ವಯಸ್ಸಿನ ವ್ಯಕ್ತಿ ಮೃತಪಟ್ಟಿದ್ದಾನೆ. ಈತ ಹಣ್ಣು ವ್ಯಾಪಾರ ಮಾಡುವ ವೃತ್ತಿಯವ ಎಂಬ ಮಾಹಿತಿ ಲಭ್ಯವಾಗಿದೆ.
ಈತ ಬೆಂಗಳೂರಿನ ರಾಮನಗರ ನಿವಾಸಿ ಎನ್ನಲಾಗುತ್ತಿದ್ದು 15 ದಿನಗಳಿಗೊಮ್ಮೆ ಹಣ್ಣು ವ್ಯಾಪಾರ ವ್ಯವಹಾರ ನಿಮಿತ್ತ ಶಿರಸಿಗೆ ಬರುತ್ತಿದ್ದ ಎನ್ನಲಾಗಿದ್ದು, ಅಕ್ಟೋಬರ್ 13ರ ರಾತ್ರಿ ಈತ ರಾತ್ರಿಯ ವೇಳೆಯಲ್ಲಿ ಕಸ್ತೂರಬಾ ನಗರದ ಲಮಾಣಿ ಓಣಿ ಪಕ್ಕದ ರಸ್ತೆಯ ಮನೆಯೊಂದರ- ಕಟ್ಟಡದ ಮೇಲೆ ಮಲಗಿದ್ದ. ಈ ವೇಳೆ ಆಕಸ್ಮಿಕವಾಗಿ ಕಟ್ಟಡದಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ಶಂಕೆ ವ್ಯಕ್ತವಾಗಿದೆ.
ಮನೆಯ ಮಾಲೀಕರು ಇಂದು ಬೆಳಿಗ್ಗೆ ಬಾಗಿಲು ತೆಗೆದಾಗ ಎದುರುಗಡೆ ತಂಜಿಲ್ ಪಾಷ ದೇಹ ಮೃತಸ್ಥಿತಿಯಲ್ಲಿ ಪತ್ತೆಯಾಗಿದೆ. ಶಿರಸಿ ಹೊಸ ಮಾರುಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತನ ಸಂಬಂಧಿಕರು ಬೆಂಗಳೂರಿನಿಂದ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.ಹೆಚ್ಚಿನ ವಿವರ ಬರಬೇಕಿದೆ.
What's Your Reaction?






