ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ

ವರದಿ: ಶಶಾಂಕ್ ಹಳವಳ್ಳಿ
ಆಪ್ತ ನ್ಯೂಸ್ ಹಳವಳ್ಳಿ (ಅಂಕೋಲಾ):
ಲಯನ್ಸ್ ಕ್ಲಬ್ ಅಂಕೋಲಾ ಸಿಟಿ, ಶ್ರೀ ಲಕ್ಷ್ಮೀನಾರಾಯಣ ಮಹಾಮಾ ದೇವಸ್ಥಾನ ಆಡಳಿತ ಕಮಿಟಿ ಅಂಕೋಲಾ, ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘ ರಾಮನಗುಳಿ, ಗ್ರಾಮ ಪಂಚಾಯತ್ ಡೋಂಗ್ರಿ ಹಾಗೂ ಸುಂಕಸಾಳ, ಸಂಗಮ ಸೇವಾ ಸಂಸ್ಥೆ (ರಿ) ಬಾಳೆಗುಳಿ, ಶ್ರೀದೇವಿ ಮತ್ತು ಗೋಪಾಲಕೃಷ್ಣ ಯುವಕ ಸಂಘ ಕಲ್ಲೇಶ್ವರ ಇವರ ಆಶ್ರಯದಲ್ಲಿ ಕೆಎಂಸಿ ಮಣಿಪಾಲ ದಂತ ಮಹಾವಿದ್ಯಾಲಯದ ತಜ್ಞ ವೈದ್ಯರ ತಂಡದಿಂದ ಬೃಹತ್ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸೆಯ ಶಿಬಿರವನ್ನು ರಾಮನಗುಳಿ ಗ್ರೂಪ್ ಸೇವಾಸಹಕಾರಿ ಸಂಘದ ಸಭಾಭವನದಲ್ಲಿ 18-10-2025 ರಂದು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಸಂಘಟಕರ ಪರವಾಗಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶಶಿಧರ ಶೇಣ್ವಿ, ರಾಮನಗುಳಿ ಗ್ರುಪ್ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ ಭಟ್ಟ, ಗ್ರಾಮ ಪಂಚಾಯತ ಡೋಂಗ್ರಿ ಅಧ್ಯಕ್ಷರಾದ ವಿನೋದ ಭಟ್ಟ, ಸುಂಕಸಾಳ ಪಂಚಾಯತದ ಉಪಾಧ್ಯಕ್ಷ ರಾದ ಸದಾನಂದ ನಾಯಕ, ಕಲ್ಪತರು ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ವಿ ಎಸ್ ಭಟ್ಟ, ಪತ್ರಿಕಾ ವರದಿಗಾರರಾದ ಅಕ್ಷಯ ಶೆಟ್ಟಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ನಾರಾಯಣ ನಾಯ್ಕ, ಸಂಗಮ ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
What's Your Reaction?






