ಸಂಘಕ್ಕೆ ಶತಮಾನ ಸಂಭ್ರಮ: ಹೆಗ್ಗಾರಿನಲ್ಲಿ ವಿಜಯದಶಮಿ ಉತ್ಸವ

ವರದಿ: ಶಶಾಂಕ್ ಹಳವಳ್ಳಿ
ಆಪ್ತ ನ್ಯೂಸ್ ಹೆಗ್ಗಾರ್:
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಶತಮಾನ ಪೂರ್ಣಗೊಂಡ ಸಂದರ್ಭದಲ್ಲಿ ಹೆಗ್ಗಾರ್ ನಲ್ಲಿ ವಿಜಯದಶಮಿ ಉತ್ಸವ ಹಮ್ಮಿಕೊಳ್ಳಲಾಗಿತ್ತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಾಂಡೇಲಿ ಜಿಲ್ಲೆ ಯಲ್ಲಾಪುರ ತಾಲೂಕಿನ ಹಳವಳ್ಳಿ ಮಂಡಲದ ವಿಜಯದಶಮಿ ಉತ್ಸವ ಮಂಗಳವಾರ ಅಂಕೋಲಾ ತಾಲೂಕಿನ ಡೊಂಗ್ರಿ ಪಂಚಾಯತ ವ್ಯಾಪ್ತಿಯ ಹೆಗ್ಗಾರಿನ ಮಹಾಗಣಪತಿ ದೇವಸ್ಥಾನ ದ ಸಭಾಭವನದಲ್ಲಿ ನಡೆಯಿತು.
125 ಸ್ವಯಂ ಸೇವಕರು ಗ್ರಾಮದ ಅಧಿದೇವರಾದ ಮಹಾಗಣಪತಿ ಸನ್ನಿಧಾನದಿಂದ ಒಂದನೇ ಕ್ರಾಸ್ ವರೆಗೆ ಸುಮಾರು ಎರಡು ಕಿಲೊಮೀಟರ್ ಪಥಸಂಚಲನ ನಡೆಸಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಗಣಪತಿ ಹಿರೇಸರ ಅವರು ವಕ್ತಾರರಾಗಿ, ನರಹರಿ ಮರಾಠೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶೇಖರ ಗಾಂವ್ಕರ್ ನಿರೂಪಣೆ ಮಾಡಿದರು,ಪ್ರಶಾಂತ ಹೆಗ್ಗಾರ ಸ್ವಾಗತಿಸಿದರು. ವೆಂಕಟೇಶ ಗೆರಗದ್ದೆ ಹಾಗೂ ವಿನಾಯಕ ಬೆಳ್ಳಿ ಪ್ರಾರ್ಥನೆ ಮಾಡಿದರು, ಕಾರ್ತೀಕ್ ಭಟ್ಟ ಅಮೃತವಚನ ಓದಿದರು.
ಗಣೇಶ ಭಟ್ಟ ವಯಕ್ತಿಕ ಗೀತೆ ಹಾಡಿದರು. ರಮಾನಂದ ಶೆವ್ಕಾರ್ ಅವರು ವಂದಿಸಿದರು.ಮುಖ್ಯ ಶಿಕ್ಷಕರಾಗಿ ಮಹಾಬಲೇಶ್ವರ ಭಟ್ ಶೇವ್ಕಾರ್ ಕಾರ್ಯನಿರ್ವಹಿಸಿದರು. ಊರ ಮಾತೆಯರು ಉಪಹಾರ ಸಿದ್ದಪಡಿಸಿ ನೆರೆದವರಿಗೆ ನೀಡಿದರು.
What's Your Reaction?






