ಮಾರ್ಚ್ ಒಳಗೆ ಅನುದಾನ ಕೊಡದಿದ್ರೆ ರಾಜಕೀಯ ನಿವೃತ್ತಿ: ಸತೀಶ್ ಸೈಲ್ ಮತ್ತೊಮ್ಮೆ ಘೋಷಣೆ!

ಆಪ್ತ ನ್ಯೂಸ್ ಕಾರವಾರ:
ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮುಖ್ಯಮಂತ್ರಿಗಳು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಅನುದಾನ ಬಿಡುಗಡೆ ಮಾಡದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದಾರೆ.
ನಿರಂತರ ಮೂರು ವರ್ಷಗಳಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರೂ ಅನುದಾನ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸೈಲ್, ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅತ್ಯಂತ ಜರೂರ ಇದ್ದು ಜನರಿಗೆ ಚಿಕಿತ್ಸೆಗೆ ಗೋವಾ ಹೋಗಬೇಕಾದ ಪರಿಸ್ಥಿತಿ ಇದೆ.ಅನುದಾನ ಕೊಡದಿದ್ದರೆ ನಾನು ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಆದರೆ ಇದೇ ಸಂದರ್ಭದಲ್ಲಿ ಅವರು ಮುಂದಿನ ಬಜೆಟ್ ನಲ್ಲಿ ಆಸ್ಪತ್ರೆಗೆ ಅನುದಾನ ಘೋಷಣೆ ಆಗದಿದ್ದರೆ ನಿವೃತ್ತಿ ಆಗುತ್ತೇನೆ ಹೊರತು ಬೆeರಾವುದೇ ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಿರಿಯ ಶಾಸಕ ಆರ್ ವಿ ದೇಶಪಾಂಡೆ ಪಂಚ ಗ್ಯಾರಂಟಿ ಯೋಜನೆಯ ವ್ಯಂಗ್ಯದ ನಡುವೆ ಜಿಲ್ಲೆಯ ಇನ್ನೊಬ್ಬ ಶಾಸಕ ಸರಕಾರದ ವಿರುದ್ಧ ಅಸಮಾಧಾನ ಹೊರ ಹಾಕಿರುವುದು ಕಾಂಗ್ರೆಸ್ ಒಳಮನೆ ಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಎತ್ತಿ ತೋರಿಸುತ್ತಲಿದೆ.
ಸತೀಶ್ ಸೈಲ್ ಈ ಹಿಂದೆ ಹಲವು ಸಾರಿ ರಾಜಕೀಯ ನಿವೃತ್ತಿ ಕುರಿತು ಘೋಷಣೆ ಮಾಡಿದ್ದರು. ಆ ವೇಳೆ ತಮ್ಮ ಪತ್ನಿ ಹಾಗೂ ಪುತ್ರಿ ಮೇಲೆ ಆಣೆಯನ್ನೂ ಮಾಡಿದ್ದರು. ಆದರೆ ನಂತರದ ದಿನಗಳಲ್ಲಿ ಅದನ್ನು ಮರೆತಿದ್ದರು. ಈ ಸಾರಿ ಏನಾಗಬಹುದು ಎನ್ನುವುದನ್ನು ಕಾದು ನೋಡಬೇಕಿದೆ.
What's Your Reaction?






