ಅಭಿವೃದ್ಧಿಯಲ್ಲಿ ಸ್ವಸಹಾಯ ಸಂಘಗಳ ಪಾತ್ರ ದೊಡ್ಡದು: ಸುಕನ್ಯಾ ದೇಸಾಯಿ

ಆಪ್ತ ನ್ಯೂಸ್ ಜೋಯಿಡಾ:
ನಾವು ಬೆಳೆದಂತ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಸಿಗಲು ಉತ್ತಮ ಬ್ರಾಂಡ್ ನ ಕಲ್ಪನೆ ಮೂಡಿಸುವುದೇ ಇಂದಿನ ಸಭೆಯ ಉದ್ದೇಶ ಎಂದು ಹರಿಪ್ರಿಯಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಕನ್ಯಾ ದೇಸಾಯಿ ಹೇಳಿದರು.
ಅವರು ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ರಂಗಮಂದಿರದಲ್ಲಿ ತಾಲೂಕಾ ಪಂಚಾಯತ ಜೋಯಿಡಾ ಗ್ರಾಮ ಪಂಚಾಯತ ನಂದಿಗದ್ದೆ ಇವುಗಳ ಸಹಯೋಗದಲ್ಲಿ ಹರಿಪ್ರಿಯಾ ಸಂಜೀವಿನಿ ಒಕ್ಕೂಟ (ರಿ)ಗ್ರಾಮ ಪಂಚಾಯತ ನಂದಿಗದ್ದೆ ಇವರ ಸಹಯೋಗದಲ್ಲಿ ಹತ್ತನೇ ವಾರ್ಷಿಕ ಸಾಮಾನ್ಯ ಸಭೆ ಮತ್ತು ಪಂಚಾಯತ ಮಟ್ಟದ ಸಾವಯವ ಉತ್ಪನ್ನ ಮೇಳ ಹಾಗೂ ಉಚಿತ ಆರೋಗ್ಯ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಭೆಯನ್ನು ಚಿಕ್ಕದಾಗಿ ಮಾಡಬಹುದಿತ್ತು ಆದರೆ ನಮ್ಮ ತಾಲೂಕನ್ನು ಸರಕಾರ ಸಾವಯವ ತಾಲೂಕನ್ನಾಗಿ ಘೋಷಣೆ ಮಾಡಿದ ಕಾರಣ ನಮ್ಮ ಸಭೆಯೊಂದಿಗೆ ಎಲ್ಲ ಸ್ವ ಸಹಾಯ ಗುಂಪಿನ ಸದಸ್ಯರು ಭಾಗವಹಿಸಿದರೆ, ಅವರಿಗೆ ತಾವು ಬೆಳೆಯುತ್ತಿರುವ ಬೆಳೆ ಗಳಿಗೆ ಉತ್ತಮ ಬೆಲೆ ಪಡೆಯಲು ಬೇಕಾದ ಮಾರ್ಕೆಟ್, ಮತ್ತು ಬೆಳೆಗಳಿಗೆ ಬೇಕಾದ ಬ್ರಾಂಡ್ ಕೆಲ್ಪನೆ ಮೂಡಿಸುವ ಉದ್ದೇಶದಿಂದ ಸ್ವ ಸಹಾಯ ಉತ್ಪನ್ನ ಮೇಳವನ್ನು ಕೂಡ ಆಯೋಜಿಸಿದ್ದೇವೆ ಎಂದರು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯತ ಉಪಾಧ್ಯಕ್ಷೆ ದಾಕ್ಷಾಯಣಿ ದಾನಶೂರ ಅವರು ಉದ್ಘಾಟಿಸಿ ಮಾತನಾಡಿ ನಮ್ಮ ಪಂಚಾಯತ ವ್ಯಾಪ್ತಿಯಲ್ಲಿ ಇರುವ ಸ್ವಸಹಾಯ ಸಂಘಗಳು ಉತ್ತಮ ವಾಗಿ ಕೆಲಸ ಮಾಡುತ್ತಿವೆ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗಿ ಕೆಲಸ ನಿರ್ವಹಿಸಲಿ ಎಂದರು.
ಹರಿಪ್ರೀಯಾ ಸಂಜೀವಿನಿ ಒಕ್ಕೂಟದ ವಾರ್ಷಿಕ ವರದಿಯನ್ನು ಮಂಗಲಾ ಉಪಾಧ್ಯ ಓದಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಬ್ದುಲ್ ನಜೀರ ಸಾಬ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ವಾಸುದೇವ ಭಾಗವತ ಮಾತನಾಡಿ ಸಮಾಜದಲ್ಲಿ ಸ್ವಸಹಾಯ ಸಂಘಗಳ ಪಾತ್ರ, ಮಹತ್ವ, ತರಬೇತಿ,ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆಯ ವ್ಯವಸ್ಥೆಯನ್ನು ಕಲ್ಪಿಸುವ ಕುರಿತು ಸಭೆಯ ಗಮನಕ್ಕೆ ತಂದರು.
ಹೊನ್ನಪ್ಪ ಹಲಗೇರ ತಾಲೂಕಾ ಕಾರ್ಯಕ್ರಮ ಅಧಿಕಾರಿ ಜೋಯಿಡಾ ಇವರು ಮಾತನಾಡಿ ಸರ್ಕಾರಗಳು ಮಹಿಳೆಯರನ್ನು ಸಾಮಾಜಿಕ, ಆರ್ಥಿಕ,ಶೈಕ್ಷಣಿಕವಾಗಿ ಸಬಲೀಕರಣ ಮಾಡುವ ಉದ್ದೇಶದಿಂದ ಸ್ವಸಹಾಯ ಸಂಘಗಳಿಗೆ ಹೆಚ್ಚಿನ ಒತ್ತು ನೀಡುವ ಕೆಲಸ ಮಾಡುತ್ತಿದೆ. ಜೊತೆಗೆ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಗ್ರಾಮದ ಎಲ್ಲಾ ಮಹಿಳೆಯರು ಸ್ವಸಹಾಯ ಸಂಘಗಳ ಸದಸ್ಯರಾಗುವಂತೆ ಪ್ರೇರಿಪಿಸಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯಧವಳೋ ಸಾವರ್ಕರ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ಶೈಕ್ಷಣಿಕ ಸ್ಥಿತಿ ಹಾಗೂ ಆರ್ಥಿಕ ಮಟ್ಟ ಸುಧಾರಣೆಗೆ ಸ್ವಸಹಾಯ ಸಂಘಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಸಾಲ ಹಾಗೂ ಸ್ವ ಉದ್ಯೋಗ ಮಾಡಲು ಸಾಲ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.ಈ ಎಲ್ಲಾ ಯೋಜನೆಗಳ ಲಾಭ ಪಡೆಯಬೇಕಾದರೆ ಶೈಕ್ಷಣಿಕ ವಾಗಿ ಮಹಿಳೆಯರು ಶಿಕ್ಷಿತರಾಗಿ,ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.
ಸಂತೋಷ ಪಾಟೀಲ ತಾಲೂಕಾ ವ್ಯವಸ್ಥಾಪಕರು ಮಾತನಾಡಿ ಸ್ವಸಹಾಯ ಸಂಘದಲ್ಲಿನ ಸಿಬ್ಬಂದಿಗಳ, ಸಖಿಗಳ ಪಾತ್ರದ ಕುರಿತು,ಸ್ವಸಹಾಯ ಸಂಘಗಳ ವಾರ್ಷಿಕ ಸಭೆಯ ಉದ್ದೇಶ ಕುರಿತು, ಆಹಾರ ಉತ್ಪನ್ನದ ಗುಣಮಟ್ಟ,ಮಾರುಕಟ್ಟೆಯ ಇನ್ನಿತರ ವಿಷಯದ ಕುರಿತು ಮಾಹಿತಿ ನೀಡಿದರು.
ಮೇಲ್ವಿಚಾರಕರಾದ ಸುವರ್ಣಾ ಗಾವಡೆ,ಸದಸ್ಯರಾದ ಶೋಭಾ ಎಲ್ಲೇಕರ ಕಾರ್ಯಕ್ರಮದ ಕುರಿತು ಮಾತನಾಡಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕನ ಯೋಜನೆಗಳ ಮಾಹಿತಿಯನ್ನು ವ್ಯವಸ್ಥಾಪಕ ಪಿ ರಾಮಕೃಷ್ಣ ನೀಡಿದರು. ಉತ್ತಮ ಸಂಘಗಳಿಗೆ ಪ್ರಥಮ,ದ್ವಿತೀಯ ಹಾಗೂ ಸಮಾಧಾನಕರ ಬಹುಮಾನ ವಿತರಣೆ ಮಾಡಲಾಯಿತು.
ಆರೋಗ್ಯ ಇಲಾಖೆಯ ಆರೋಗ್ಯ ಸಹಾಯಕಿ ವಿಜಯಾ ನಾಯ್ಕ ಉಚಿತ ಆರೋಗ್ಯ ಶಿಬಿರವನ್ನು ನಡೆಸಿಕೊಟ್ಟರು ಕಾರ್ಯಕ್ರಮ ವನ್ನು ಉತ್ತಮ ವಾಗಿ ನಿರ್ವಹಿಸಿವಂದಿಸಿದವರು ಸೀತಾ ದಾನಗೇರಿ ಯವರು.
ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸಂಘಗಳ ಸದಸ್ಯರು ಗ್ರಾಮ ಪಂಚಾಯತ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸ್ವಸಹಾಯ ಸಂಘದ ಸಾವಯವ ಊಟ ಎಲ್ಲರ ಮೆಚ್ಚುಗೆಗೆ ಪಾತ್ರ ವಾಯಿತು.
What's Your Reaction?






