ನಿಲ್ಲಿಸಿ ನಿಲ್ಲಿಸಿ ಹುತ್ಕಂಡ ಕ್ರಾಸ್ ನಲ್ಲಿ ಬಸ್ ನಿಲ್ಲಿಸಿ

Oct 21, 2025 - 19:32
 0  75
ನಿಲ್ಲಿಸಿ ನಿಲ್ಲಿಸಿ ಹುತ್ಕಂಡ ಕ್ರಾಸ್ ನಲ್ಲಿ ಬಸ್ ನಿಲ್ಲಿಸಿ

ಆಪ್ತ ನ್ಯೂಸ್ ಯಲ್ಲಾಪುರ:

ಯಲ್ಲಾಪುರ ತಾಲೂಕಿನ ಹುತ್ಕಂಡ ಕ್ರಾಸ್ ನಲ್ಲಿ ಬಸ್ ನಿಲುಗಡೆಗೆ ಆಗ್ರಹಿಸಿ ಗ್ರಾಮಸ್ಥರು ಗ್ರಾಮ ಪಂಚಾಯತ ಸದಸ್ಯ ಆರ್.ಎಸ್.ಭಟ್ಟ ನೇತೃತ್ವದಲ್ಲಿ  ವಾ.ಕ.ರಾ.ರ.ಸಾ ಸಂಸ್ಥೆಯ  ಘಟಕ ವ್ಯವಸ್ಥಾಪಕರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಯಲ್ಲಾಪುರ-ಶಿರಸಿ ಮಾರ್ಗದ ಹುತ್ಕಂಡ ಕ್ರಾಸ್ ನಲ್ಲಿ ಬಸ್ ನಿಲುಗಡೆ ಮಾಡದೇ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಶಾಲೆ-ಕಾಲೇಜು ತಲುಪಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಬಗ್ಗೆ ಹಲವು ಬಾರಿ ಸಂಬಂದಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಈ ವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಬೆಳಿಗ್ಗೆ 8.30 ರಿಂದ 9.15 ಕ್ಕೆ ಹಾಗೂ ಸಂಜೆಯ ವೇಳೆಗೆ 4.45 ರಿಂದ 5.30 ರ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಇರುವ ಬಸ್ ಗೆ ಹುತ್ಕಂಡ ಕ್ರಾಸ್ ನಲ್ಲಿ ನಿಲುಗಡೆ ನೀಡಬೇಕು. ಅಕ್ಟೋಬರ್ 27ರ ಒಳಗೆ  ಸರಿಪಡಿಸದಿದ್ದಲ್ಲಿ ಹುತ್ಕಂಡ ಕ್ರಾಸ್ ಬಳಿ ಬಸ್ ತಡೆದು ಪ್ರತಿಭಟನೆ ನಡೆಸಲಾಗುವುದೆಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0