ಸರ್ವೇ ಜನಾಃ ಸುಖಿನೋ ಭವಂತು ಎಂದ ತೇಜಸ್ವಿನಿ ಸೊಗಲದ

Oct 31, 2025 - 18:51
 0  35
ಸರ್ವೇ ಜನಾಃ ಸುಖಿನೋ ಭವಂತು ಎಂದ ತೇಜಸ್ವಿನಿ ಸೊಗಲದ

ಆಪ್ತ ನ್ಯೂಸ್ ದಾಂಡೇಲಿ:

ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಹಾಗೂ ತುಳಿತಕ್ಕೆ ಒಳಗಾದ ಸಮುದಾಯಗಳ ಹಕ್ಕುಬಾಧ್ಯತೆ ಮತ್ತು ಅವರನ್ನು ಕುರಿತು ಸಮಾಜ ಒಳಗೊಳ್ಳಬೇಕಾದ ಮಾನವೀಯ ಗುಣಗಳನ್ನು ಕುರಿತು ಜಾಗೃತಿಯನ್ನು ಮೂಡಿಸುವುದಕ್ಕಾಗಿ ಹಲವಾರು ಅಂತರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಹಿರಿಯ ನಾಗರಿಕರು, ಹೆಣ್ಣು ಶಿಶುಗಳು ಮತ್ತು ಮಾನಸಿಕ ಅಸ್ವಸ್ಥರು ಸಮಾಜದ ಅವಗಣನೆಗೆ ಮತ್ತು ಶೋಷಣೆಗೆ ಒಳಗಾಗುತ್ತಿದ್ದಾರೆ. ಅವರನ್ನು ಕುರಿತು ಯುವಜನಾಂಗ ಮಾನವೀಯ ಅಂತಃಕರಣವನ್ನು ಹೊಂದಬೇಕು ಅವಾಗ ಮಾತ್ರ ಎಲ್ಲರೂ ಸುಖದಿಂದ ಇರುವ ಸಮಾಜ ನಿರ್ಮಾಣವಾಗುತ್ತದೆ ಎಂದು ದಾಂಡೇಲಿಯ ಸಿವಿಲ್ ನ್ಯಾಯಾಧೀಶರಾದ ತೇಜಸ್ವಿನಿ ಸೊಗಲದ ಅವರು ಅಭಿಪ್ರಾಯಪಟ್ಟರು.

ಅವರು ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ-ದಾಂಡೇಲಿ,  ನ್ಯಾಯವಾದಿಗಳ  ಸಂಘ, ಅಭಿಯೋಜನಾ ಇಲಾಖೆ. ಕಂದಾಯ ಇಲಾಖೆ, ತಾಲೂಕು ಪಂಚಾಯತ, ಪೊಲೀಸ ಇಲಾಖೆ, ಶಿಕ್ಷಣ ಇಲಾಖೆ, ನಗರಸಭೆ ಹಾಗೂ ಅರಣ್ಯ ಇಲಾಖೆಗಳ ಸಹಯೋಗದಲ್ಲಿ ಜರುಗಿದ ಹಿರಿಯ ನಾಗರಿಕರ ದಿನ, ಮಾನಸಿಕ ಆರೋಗ್ಯ ದಿನ ಹಾಗೂ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಗಳನ್ನು ಉದ್ಘಾಟಿಸಿ ಮಾತನಾಡಿದರು. 

ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸಾಧನೆ ಮಾಡಿದ ವ್ಯಕ್ತಿತ್ವಗಳಿಂದ ಸ್ಪೂರ್ತಿ ಪಡೆದು ಸರ್ವತೋಮುಖ ವ್ಯಕ್ತಿತ್ವವವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.

ರೂಪಾ ಕೇರವಾಡ್ಕರ ಅವರು ಮಾನಸಿಕ ಆರೋಗ್ಯ ಕುರಿತು ಉಪನ್ಯಾಸ ನೀಡಿದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಶ್ರೀ ಎಸ್.ಎಮ್.ದಬಗಾರ, ಉಪ ಪೊಲೀಸ ವರಿಷ್ಠಾಧಿಕಾರಿಗಳಾದ ಶಿವಾನಂದ ಮದರಕಂಡಿ, ಪೌರಾಯುಕ್ತರಾದ ವಿವೇಕ ಬನ್ನೆ ಅವರು ಮೂರೂ ದಿನಾಚರಣೆಗಳ ಮಹತ್ವದ ಬಗ್ಗೆ ಮಾತನಾಡಿದರು.

ವೇದಿಕೆಯ ಮೇಲೆ ಸಹಾಯಕ ಸರ್ಕಾರಿ ಅಭಿಯೋಜಕ ಸಮೆಶ ಬಂಕಾಪೂರ ಹಾಗೂ ತಾಲೂಕು ಪಂಚಾಯತ ಆಡಳಿತಾಧಿಕಾರಿ ಟಿ.ಸಿ ಹಾದಿಮನಿ, ಪಿ.ಎಸ್.ಐ ಅಮಿತ ಅತ್ತಾರ, ಮಂಜುನಾಥ ಬಂಡಿವಡ್ಡರ, ರತ್ನದೀಪಾ, ಆರ್.ವಿ. ದೊಡ್ಡಪ್ಪನವರ, ಆಫ್ರೀನ್ ಕಿತ್ತೂರ ಮೊದಲಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಪ್ರಾಂಶುಪಾಲರಾದ ಡಾ. ಎಂ. ಡಿ. ಒಕ್ಕುಂದ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು,ಕು. ವರ್ಷಾ ಕೊಲೆ ಪ್ರಾರ್ಥಿಸಿದರು, ಮನೋಹರ ಉಡಚಂಚಿ ಸ್ವಾಗತಿಸಿದರು, ಚಂದ್ರಶೇಖರ ಲಮಾಣಿ ವಂದಿಸಿದರು, ರೂಪಾ ಕೇರವಾಡ್ಕರ ಕಾರ್ಯಕ್ರಮ ನಿರೂಪಿಸಿದರು.

***********************

ನಾಳೆ ಮಾರುತಿ ದೇವಸ್ಥಾನದಲ್ಲಿ  ಅನ್ನಕೂಟ ಮಹೋತ್ಸವ 

ಆಪ್ತ ನ್ಯೂಸ್ ದಾಂಡೇಲಿ:

ನಗರದ ಜೆ.ಎನ್. ಮಾರುತಿ ಮಂದಿರದ ಮಾರುತಿ ಭಗವಂತನ ಸನ್ನಿಧಿಯಲ್ಲಿ ಅನ್ನಕೂಟ ಮಹೋತ್ಸವ-ವನ್ನು ಆಯೋಜಿಸಲಾಗಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಾರುತಿ ಮಂದಿರ ಟ್ರಸ್ಟ್ ಪ್ರಕಟಣೆಯಲ್ಲಿ ಕೋರಿದೆ. 

ನ.೧ ರಂದು ಸಂಜೆ ೬ ಗಂಟೆಗೆ ಮಹಾ ಮಂಗಳಾರತಿ ನಡೆಯಲಿದ್ದು, ಬಳಿಕ ಶ್ರೀ ಅನ್ನಕೂಟದ ಪ್ರಸಾದ ವಿತರಣೆ ನಡೆಯಲಿದೆ. ಅನ್ನಕೂಟ ಮಹೋತ್ಸವದ ಸಮಯದಲ್ಲಿ ಭಕ್ತರ ಭಕ್ತಿ ಸೇವೆಗಾಗಿ ದೇವಸ್ಥಾನದ ಅರ್ಚಕರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ. ಸಂಪರ್ಕಕ್ಕೆ: 97418 91162.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0