ಉತ್ತರಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ ಸುವರ್ಣ ಪಥ ಸಂಚಿಕೆ ಬಿಡುಗಡೆ

Oct 12, 2025 - 21:08
 0  34
ಉತ್ತರಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ ಸುವರ್ಣ ಪಥ ಸಂಚಿಕೆ ಬಿಡುಗಡೆ

ಆಪ್ತ ನ್ಯೂಸ್ ಶಿರಸಿ: 

ಉತ್ತರಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ 1974ರಿಂದ ನಡೆದು ಬಂದ ದಾರಿಯ ಸಮಗ್ರವಾದ ಮಾಹಿತಿ ಇರುವ  ಸುವರ್ಣ ಪಥ ಸ್ಮರಣ ಸಂಚಿಕೆಯನ್ನು ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹಾಗೂ ಸ್ಕೊಡವೆಸ್ ಮುಖ್ಯ ಕಾರ್ಯನಿರ್ವಾಹಕರಾದ ಡಾ.ವೆಂಕಟೇಶ ನಾಯ್ಕ ಅವರು ನಗರದ  ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸಿದರು.
ಸುವರ್ಣಪಥ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಶ್ರೀನಿವಾಸ್ ಹೆಬ್ಬಾರ್ ಅವರು ಉತ್ತರ ಕನ್ನಡ ಜಿಲ್ಲೆಯ ಪತ್ರಕರ್ತರು ಇಂದು  ರಾಜ್ಯದ ಮತ್ತು ದೇಶದ  ಅನೇಕ ಪತ್ರಿಕೆ ಮತ್ತು ದೃಶ್ಯ ಮಾದ್ಯಮಗಳಲ್ಲಿ  ಉನ್ನತ ಸ್ಥಾನದಲ್ಲಿ ಕೆಲಸ ಮಾಡಿ‌ ಸಮಾಜಕ್ಕೆ ಮಾದರಿ ಆಗಿದ್ದಾರೆ ಎಂದು ಹೇಳಿದರು.
ನಂತರ ಮಾತನಾಡಿದ ಡಾ: ವೆಂಕಟೇಶ ನಾಯ್ಕ ಅವರು ಪತ್ರಕರ್ತರಲ್ಲಿ  ವಯಕ್ತಿಕವಾಗಿ  ಹಲವಾರು ಸಮಸ್ಯಗಳಿದ್ದರೂ ಅವುಗಳನ್ನು ಬದಿಗೊತ್ತಿ  ನ್ಯಾಯ ಮತ್ತು ಶ್ರಧ್ದೆಯಿಂದ ಕೆಲಸ ಮಾಡಿ‌ ಸಮಾಜದ  ಅಂಕು ಡೊಂಕುಗಳನ್ನು  ತಿದ್ದುತ್ತಾರೆ ಎಂದು ಹೇಳಿದರು. ಕಾರ್ಯಕ್ರಮ ಉದ್ದೇಶಿಸಿ  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಜಿ ಸುಬ್ರಾಯ ಭಟ್ಟ ಬಕ್ಕಳ  ಪ್ರಾಸ್ತಾವಿಕವಾಗಿ  ಮಾತನಾಡಿ ಸಂಘವು 1974 ರಲ್ಲಿ ಅಂದಿನ  ಹಿರಿಯರು  ಸಾಕಿ ಬೆಳೆಸಿದ ಪರಿಶ್ರಮದ   ಫಲದಿಂದ  ಇಂತ ಒಂದು ಪತ್ರಿಕಾ ಭವನ ನಿರ್ಮಾಣ ಮಾಡಲು  ಸಹಾಯಕಾರಿ ಯಾಗಿದೆ ಎಂದು ಹೇಳಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0