ಏಷ್ಯಾ ಕಪ್ ಫೈನಲ್: 9 ನೇ ಬಾರಿ ಏಷ್ಯನ್ ಚಾಂಪಿಯನ್ ಆದ ಭಾರತ
ಬದ್ಧ ವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ಏಷ್ಯಾ ಕಪ್ ಫೈನಲ್ ಪಂದ್ಯ ದುಬೈನಲ್ಲಿ ನಡೆದಿದ್ದು ಭಾರತ ಭರ್ಜರಿ ಜಯಭೇರಿ ಭಾರಿಸಿತು. ತಿಲಕ್ ವರ್ಮಾ ಜವಾಬ್ದಾರಿಯುತ ಆಟದಿಂದ ಭಾರತ ಪಾಕಿಸ್ತಾನವನ್ನು ಬಗ್ಗು ಬಡಿದು 9 ನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು.

ಆಪ್ತ ನ್ಯೂಸ್ ದುಬೈ:
ಬದ್ಧ ವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ಏಷ್ಯಾ ಕಪ್ ಫೈನಲ್ ಪಂದ್ಯ ದುಬೈನಲ್ಲಿ ನಡೆದಿದ್ದು ಭಾರತ ಭರ್ಜರಿ ಜಯಭೇರಿ ಭಾರಿಸಿತು. ತಿಲಕ್ ವರ್ಮಾ ಜವಾಬ್ದಾರಿಯುತ ಆಟದಿಂದ ಭಾರತ ಪಾಕಿಸ್ತಾನವನ್ನು ಬಗ್ಗು ಬಡಿದು 9 ನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತು.
ಟಾಸ್ ಸೋತ ನಂತರ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 19.1 ಓವರ್ಗಳಲ್ಲಿ 146 ರನ್ ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನದ ಪರವಾಗಿ ಸಾಹಿಬ್ಜಾದ ಫರ್ಹಾನ್ 57 ರನ್ ಹೊಡೆದರೆ ಫಕಾರ್ ಜಮಾನ್ 46 ರನ್ ಹೊಡೆದರು. ಆರಂಭದಲ್ಲಿ ಅಬ್ಬರಿಸಿದ ಪಾಕಿಸ್ತಾನದ ಬ್ಯಾಟರ್ ಗಳಿಗೆ ಭಾರತದ ಸ್ಪಿನ್ನರ್ ಗಳು ಕಡಿವಾಣ ಹಾಕಿದರು.
ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ 30 ರನ್ ಗೆ 4 ವಿಕೆಟ್ ಕಿತ್ತರೆ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ಹಾಗೂ ಬೂಮ್ರಾ ತಲಾ 2 ವಿಕೆಟ್ ಕಿತ್ತು ಪಾಕಿಸ್ತಾನಕ್ಕೆ ಕಡಿವಾಣ ಹಾಕಿದರು.
ಈ ಗುರಿ ಬೆನ್ನು ಹತ್ತಿದ ಭಾರತ ತಂಡವು ಆರಂಭಿಕ ಆಘಾತವನ್ನು ಅನುಭವಿಸಿತು. ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮ, ಶುಭಮನ್ ಗಿಲ್ ಹಾಗೂ ಸೂರ್ಯಕುಮಾರ್ ಯಾದವ್ ಕಡಿಮೆ ಮೊತ್ತಕ್ಕೆ ಔಟ್ ಆದರು. ಆದರೆ ತಿಲಕ್ ವರ್ಮಾ ಭರ್ಜರಿ ಅರ್ಧಶತಕ ಭರಿಸಿದರು. ಅವರಿಗೆ ಸಂಜು ಸ್ಯಾಮ್ಸನ್ ಹಾಗೂ ಶಿವಂ ದುಬೆ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ ಭಾರತ ತಂಡವು 19 ಓವರ್ 4 ಎಸೆತಗಳ್ಳಿ 150 ರನ್ ಗಳಿಸಿ ಪಾಕಿಸ್ತಾನದ ಸೊಕ್ಕನ್ನು ಮುರಿದು ಹಾಕಿತು. ತಿಲಕ್ ವರ್ಮಾ ಔಟ್ ಆಗದೆ 69 ರನ್ ಹೊಡೆದರು.
ಹ್ಯಾರಿಸ್ ರವೂಫ್ ಗೆ ಭರ್ಜರಿ ಉತ್ತರ ನೀಡಿದ ಬೂಮ್ರಾ
ಭಾರತ ಹಾಗೂ ಪಾಕಿಸ್ತಾನದ ನಡುವಿನ ಹಿಂದಿನ ಪಂದ್ಯದಲ್ಲಿಯೂ ಭಾರತದ ಅಭಿಮಾನಿಗಳ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದ ಹ್ಯಾರಿಸ್ ರವೂಫ್ ಗೆ ಬೂಮ್ರಾ ನೀಡಿದ ಉತ್ತರ ಎಲ್ಲರಿಗೂ ಖುಷಿ ನೀಡಿತು. ಹ್ಯಾರಿಸ್ ರವೂಫ್ ನನ್ನ ಭರ್ಜರಿ ಯಾರ್ಕರ್ ಮೂಲಕ ಔಟ್ ಮಾಡಿದ ಬೂಮ್ರಾ ವಿಮಾನ ಉರುಳಿ ಬಿದ್ದ ಸಿಗ್ನಲ್ ಮಾಡಿ ಕಿಚಾಯಿಸುವ ಮೂಲಕ ರವೂಫ್ ಅಹಂಕಾರ ಮುರಿದು ತಕ್ಕ ಉತ್ತರ ನೀಡಿದರು.
What's Your Reaction?






