ಗದ್ದೆಯಲ್ಲಿ ಕೆಲಸ ಮಾಡುವಾಗ ಹಲ್ಲೆ - ಜೀವ ಬೆದರಿಕೆ : ದೂರು ದಾಖಲು
ಆಪ್ತ ನ್ಯೂಸ್ ಕಾನಸೂರು:
ಅತಿಕ್ರಮಣ ಜಮೀನಿನಲ್ಲಿ ಕೆಲಸ ಮಾಡುವಾಗ ಇದು ತನಗೆ ಸೇರಿದ ಜಾಗ ಎಂದು ಹೇಳಿ ಹಲ್ಲೆ ನಡೆಸಿದ ಘಟನೆ ಸಿದ್ದಾಪುರ ತಾಲೂಕು ಕಾನಸೂರನಲ್ಲಿ ಸಂಭವಿಸಿದೆ.
ಅ. 28ರಂದು ಕಾನಸೂರು ಮಾರುತಿ ನಗರದ ಗಣಪತಿ ಬಂಗಾರ್ಯ ನಾಯ್ಕ್ ತನ್ನ ಹೊಲದಲ್ಲಿ ಕೆಲಸ ಮಾಡುವಾಗ ಕಾನಸೂರಿನ ರಾಘವೇಂದ್ರ ಗೋಪಾಲ ಭಂಡಾರಿ, ಕಲ್ಪನಾ, ಆಶಾ ಎಂಬ ಮೂವರು ಸೇರಿಕೊಂಡು ಗಣಪತಿ ಬಂಗಾರ್ಯ ನಾಯ್ಕ್ ಮೇಲೆ ಹಲ್ಲೆ ನಡೆಸಿದ್ದೂ ಅಲ್ಲದೆ, ಇನ್ನು ಮೇಲೆ ಇಲ್ಲಿ ಕೆಲಸ ಮಾಡಿದರೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದರ ಕುರಿತಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



