ಪ್ರತಿಭಾ ಕಾರಂಜಿಯಲ್ಲಿ ಅವೇಡಾ ಶಾಲೆಯ ವಿದ್ಯಾರ್ಥಿಗಳ ಸಾಧನೆ

Nov 6, 2025 - 15:59
 0  12
ಪ್ರತಿಭಾ ಕಾರಂಜಿಯಲ್ಲಿ ಅವೇಡಾ ಶಾಲೆಯ ವಿದ್ಯಾರ್ಥಿಗಳ ಸಾಧನೆ

ಆಪ್ತ ನ್ಯೂಸ್ ಜೋಯಿಡಾ:

ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ, ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಜಗಲಬೇಟ, ಇವುಗಳ ಸಹಯೋಗದಲ್ಲಿ ನಡೆದ ಜಗಲಬೇಟ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಅವೇಡಾ ಶಾಲೆಯ ವಿದ್ಯಾರ್ಥಿಗಳು ಕಿರಿಯರ ವಿಭಾಗದ ಸ್ಪರ್ಧೆಯಲ್ಲಿ ಕಥೆ ಹೇಳುವುದು, ಇಂಗ್ಲಿಷ್ ಕಂಠಪಾಠ, ಧಾರ್ಮಿಕ ಪಠಣ-  ಪ್ರಥಮ,ದೇಶಭಕ್ತಿ ಗೀತೆ, ಚಿತ್ರಕಲೆ, ಅಭಿನಯ ಗೀತೆ, ಭಕ್ತಿಗೀತೆ - ದ್ವಿತೀಯ, ಹಿರಿಯರ ವಿಭಾಗದ ಸ್ಪರ್ಧೆಯಲ್ಲಿ ಕಥೆ ಹೇಳುವುದು, ಅಭಿನಯ ಗೀತೆ, ಕನ್ನಡ ಕಂಠಪಾಠ, ಇಂಗ್ಲೀಷ್ ಕಂಠಪಾಠ, ಕವನ ವಾಚನ, ಪ್ರಬಂಧ ರಚನೆ- ಪ್ರಥಮ. ಹಿಂದಿ ಕಂಠಪಾಠ, ಆಶು ಭಾಷಣ, ದೇಶ ಭಕ್ತಿಗೀತೆ, ಧಾರ್ಮಿಕ ಪಠಣ, ಚಿತ್ರಕಲೆ, ಕ್ಷೇ ಮಾಡೆಲಿಂಗ್ - ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಶಾಲೆಯ ಸಹ ಶಿಕ್ಷಕಿಯರಾದ ದೀಪಾ ನಾಯ್ಕ,ಉಷಾ ಪಾಂಡುರಂಗ ಜೋಶಿ ತರಬೇತಿ ನೀಡಿದ್ದರು.
ವಿದ್ಯಾರ್ಥಿಗಳ ಈ ಸಾಧನೆಗೆ ಅವೇಡಾ ಶಾಲೆಯ ಮುಖ್ಯ ಶಿಕ್ಷಕರಾದ ರೋಹಿದಾಸ ಮಡಿವಾಳ, ಸಹ ಶಿಕ್ಷಕಿಯರಾದ ದೀಪಾ ನಾಯ್ಕ, ಉಷಾ ಜೋಶಿ ಹರ್ಷ ವ್ಯಕ್ತಪಡಿಸಿದ್ದಾರೆ. ಎಸ್.ಡಿ.ಎಮ್.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಾಲಕರು, ಪೋಷಕರು, ಶಾಲೆಯ ಹಳೆಯ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0